Hassan: ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟ ಶಾಸಕ ಎ.ಟಿ.ರಾಮಸ್ವಾಮಿ

Published : Jan 23, 2023, 10:08 AM IST
Hassan: ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟ ಶಾಸಕ ಎ.ಟಿ.ರಾಮಸ್ವಾಮಿ

ಸಾರಾಂಶ

ನಾನೇನು ಟಿಕೆಟ್ ಕೊಡಿ ಅಂತಾ ಯಾರ ಹತ್ರನೂ ಕೈ ಮುಗಿದುಕೊಂಡು ಹೋಗಿಲ್ಲವಲ್ಲ, ನಾನೂ ನಿಮ್ಮತ್ರ ಭಿಕ್ಷೆ ಕೇಳ್ತೀನಿ, ಜನರತ್ರ ಕೈಯೊಡ್ಡಿ ಭಿಕ್ಷೆ ಕೇಳ್ತೀನಿ ಎಂದು ಅರಕಲಗೂಡಿನಲ್ಲಿ ಜೆಡಿಎಸ್ ನಾಯಕರಿಗೆ ಶಾಸಕ ಎ.ಟಿ.ರಾಮಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಹಾಸನ (ಜ.23): ನಾನೇನು ಟಿಕೆಟ್ ಕೊಡಿ ಅಂತಾ ಯಾರ ಹತ್ರನೂ ಕೈ ಮುಗಿದುಕೊಂಡು ಹೋಗಿಲ್ಲವಲ್ಲ, ನಾನೂ ನಿಮ್ಮತ್ರ ಭಿಕ್ಷೆ ಕೇಳ್ತೀನಿ, ಜನರತ್ರ ಕೈಯೊಡ್ಡಿ ಭಿಕ್ಷೆ ಕೇಳ್ತೀನಿ ಎಂದು ಅರಕಲಗೂಡಿನಲ್ಲಿ ಜೆಡಿಎಸ್ ನಾಯಕರಿಗೆ ಶಾಸಕ ಎ.ಟಿ.ರಾಮಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಮೊನ್ನೆ ರೇವಣ್ಣ ಮನೆಗೆ ಮುತ್ತಿಗೆ ಹಾಕಿ ರಾಮಸ್ವಾಮಿಯವರಿಗೆ ಟಿಕೆಟ್ ಕೊಡಬೇಡಿ, ಅವರ ಬಿಟ್ಟು ಬೇರೆ ಯಾರಿಗಾದರೂ ಕೊಡಿ ಅಂತಾ ಅರಕಲಗೂಡು ಮುಖಂಡರು ಮತ್ತು ಕಾರ್ಯಕರ್ತರು ಹೇಳಿದ್ದಾರೆ. 

ಆ ವಿಚಾರಕ್ಕೆ ವೇದಿಕೆಯಲ್ಲೇ ಮಾತನಾಡಿ ಎ.ಟಿ.ರಾಮಸ್ವಾಮಿ ಮೌನ ಮುರಿದು ಟಾಂಗ್ ಕೊಟ್ಟಿದ್ದಾರೆ. 2004ರಲ್ಲಿ ಕಾಂಗ್ರೆಸ್ ಟಿಕೆಟ್ ವಂಚನೆಯಾದಾಗ EX MP ಜವರೇಗೌಡರು, ಪಟೇಲ್ ಶಿವರಾಂ ನನ್ನ ಮಗ ಇದ್ದ ರೂಮಿಗೆ ಬಂದಿದ್ರು. ದೇವೇಗೌಡರು ಹೇಳಿ ಕಳಿಸಿದ್ದಾರೆ, ನಿಮಗೆ ಅಲ್ಲಿ ಟಿಕೆಟ್ ಸಿಕ್ಕಿಲ್ಲ. ನೀವ್ ನಮ್ಮ ಪಾರ್ಟಿಗೆ ಬರಬೇಕಂತೆ ಅಂದ್ರು. ನಾನೂ.. ಸಾಕು ನನಗೆ ರಾಜಕೀಯ, ಜನಪರ ಹೋರಾಟ ಮಾಡಿಕೊಂಡು ಇರ್ತಿನಿ ಅಂತ ಹೇಳಿದೆ. ಕೇಳಿ ನೋಡಿ ಅವರುಗಳು ಬದುಕಿದ್ದಾರೆ. 

ಸಿಎಂ ಅಭ್ಯರ್ಥಿ ಘೋಷಿಸಿದರೆ ಬಿಜೆಪಿ, ಕೈ ಹೋಳು: ಸಿ.ಎಂ.ಇಬ್ರಾಹಿಂ

ಅವರಿಗೆ ಮೊಬೈಲ್ ಫೋನ್ ಕೊಟ್ರು, ಇಲ್ಲ... ರಾಮಸ್ವಾಮಿಯವರೆ ನಿಮ್ಮಂತವರು ಹಿಂದೆ ಸರಿಯಬಾರದು. ರಾಜಕಾರಣದಲ್ಲಿ ಇರಬೇಕು, ನೀವ್ ಬರಬೇಕು , ನಿಂತ್ಕೊಳ್ಳಬೇಕು ಅಂತ ಹೇಳಿದ್ರು. ನಾನೂ ಕಾರ್ಯಕರ್ತರ ಕೇಳಿ ಬರ್ತೀನಿ ಅಂತ ಹೇಳಿದೆ. ಇಲ್ಲೇ ಕಾರ್ಯಕರ್ತರ ಸಭೆ ಮಾಡಿದೆ. ನೀವೆಲ್ಲರೂ ಹೋಗಲೇಬೇಕು, ನಿಂತ್ಕೊಳ್ಳಲೇಬೇಕು ಅಂತ ಒಪ್ಪಿಗೆ ಕೊಟ್ಟ ಮೇಲೆ ರಾಜಕೀಯಕ್ಕೆ ಬಂದೆ. 2007-08 ರಲ್ಲಿ ಅಧಿಕಾರ ಹಸ್ತಾಂತರ ಮಾಡದಿದ್ದಾಗ ನನಗೆ ಬೇಸರ ಆಗಿತ್ತು ಎಂದು ಎ.ಟಿ.ರಾಮಸ್ವಾಮಿ ತಿಳಿಸಿದರು.

ಕ್ರಷರ್‌ ದಂಧೆ ವಿರುದ್ಧ ಕಿಡಿ: ನಾನು ಉಸಿರು ಬಿಟ್ಟರೆ ಒಂದೇ ಬಾರಿಗೆ ಕ್ರಷರ್‌ ನಿಲ್ಲಿಸುವ ಶಕ್ತಿ ನನಗಿದೆ ಎಂದು ದೊಡ್ಡಮಗ್ಗೆ ರಂಗಸ್ವಾಮಿ ಕುಟುಂಬಕ್ಕೆ ಶಾಸಕ ಎ.ಟಿ. ರಾಮಸ್ವಾಮಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟರು. ತಾಲೂಕಿನ ಅರಸೀಕಟ್ಟೆಅಮ್ಮನವರ ದೇವಾಲಯ ಸಭಾಂಗಣದಲ್ಲಿ ನಡೆದ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಅಭಿವೃದ್ಧಿಯಲ್ಲಿ ಕ್ಷೇತ್ರ ಹಿಂದುಳಿದಿದೆ ಎಂಬ ಹೇಳಿಕೆ ನೀಡುತ್ತಿದ್ದು, ನನ್ನ ವಿರುದ್ದ ಮಾತನಾಡುತ್ತಿರುವುದನ್ನು ಸಹಿಸಿಕೊಂಡಿದ್ದೇನೆ. 

ಬೆರೆಯವರಿಗೆ ಆಗಬೇಕಿದ್ದ ಕ್ರಷರ್‌ ಅನ್ನು ನಾನೇ ಸ್ವತಃ ನನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಮಾಡಿಸಿಕೊಟ್ಟಿರುವೆ. ಅಂತವರು ನನ್ನ ವಿರುದ್ಧ ಮಾತನಾಡುತ್ತಾರೆ. ಅಂತವರ ವಿರುದ್ಧ ಉಸಿರುಬಿಟ್ಟರೆ ಒಂದೇ ದಿನದಲ್ಲಿ ಅವರು ನಂಬಿಕೊಂಡಿರುವ ಉದ್ಯಮ ನಿಲ್ಲಿಸುವ ಶಕ್ತಿ ನನಗಿದೆ ಎಂದು ಕಾಂಗ್ರೆಸ್‌ ಮುಖಂಡ ಎಂ.ಟಿ. ಕೃಷ್ಣೇಗೌಡ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಸಿದ್ದರಾಮಯ್ಯ ಷಡ್ಯಂತ್ರ ಬಿಚ್ಚಿಡಬೇಕಾ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರದ ಹಣದಿಂದ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಬಂದಿರುವವರಿಗೆ ನನ್ನ ಅವಧಿ​ಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸುವ ನೈತಿಕತೆ ಇಲ್ಲ. ನಾನು ಉಸಿರು ಬಿಟ್ಟರೆ ಕ್ರಷರ್‌ ನಿಂತು ಹೋಗುತ್ತದೆ. ಯಾವ ರಾಜಕಾರಣಿ ಕ್ರಷರ್‌ ಅನ್ನು ಬೇರೆಯವರಿಗೆ ಕೊಡಿಸುತ್ತಾರೆ. ನಾನೇ ನನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಮಾಡಿಸಿಕೊಟ್ಟೆ. ನಾನೇನು ಐದು ಪರ್ಸೆಂಟ್‌ ಕೊಡಿ ಎಂದು ಕೇಳಿದ್ದೆನಾ ಎಂದು ಗರಂ ಆದರು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು ಮತ್ತಷ್ಟುಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಿನ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!