
ನವದೆಹಲಿ(ಏ.13): ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಿಂದ ಬಂಡಾಯ ಬಿಸಿ ಕೂಡ ಹೆಚ್ಚಾಗಿದೆ. ಈಗಾಗಲೇ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮೂರನೇ ಹಾಗೂ ಅಂತಿಮ ಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ. ಇದರ ನಡುವ ಬಿಜೆಪಿ ಹೈಕಮಾಂಡ್ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಪಂಜಾಬ್‌ನ ಜಲಂಧರ ಕ್ಷೇತ್ರಕ್ಕೆ ನಡೆಯಲಿರುವ ಲೋಕಸಭಾ ಉಪಚುನಾವಣೆ ಹಾಗೂ ಒಡಿಶಾದ ಝಾರ್ಸುಗುಡ ವಿಧಾನಸಭಾ ಉಪ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ. ಪಂಜಾಬ್ ಲೋಕಸಭಾ ಹಾಗೂ ಒಡಿಶಾನ ವಿಧಾನಸಭಾ ಚುನಾವಣೆ ಕೂಡ ಮೇ.10 ರಂದು ನಡೆಯಲಿದೆ. ಮೇ.13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.
ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರಕ್ಕೆ ಸರ್ದಾರ್ ಇಂದರ್ ಇಕ್ಬಾಲ್ ಸಿಂಗ್‌ಗೆ ಟಿಕೆಟ್ ನೀಡಿದೆ. ಇನ್ನು ಒಡಿಸಾದ ಝಾರ್ಸುಗುಡ ವಿಧಾನಸಭಾ ಕ್ಷೇತ್ರಕ್ಕೆ ತಂಕಧಾರ್ ತ್ರಿಪಾಠಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದೀಗ ಕರ್ನಾಟಕ ಚುನಾವಣೆ ನಡುವೆ ಎರಡು ಉಪಚುನಾವಣೆಗೂ ಬಿಜೆಪಿ ತಯಾರಿ ನಡೆಸುತ್ತಿದೆ.
ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾದ್ರೂ ಇನ್ನೂ 12 ಕ್ಷೇತ್ರಗಳ ಟಿಕೆಟ್ ನಿಗೂಢ..!
ಪಂಜಾಬ್‌ನ ಜಲಂಧರ್ ಕ್ಷೇತ್ರದ ಸಂಸದರಾಗಿದ್ದ ಕಾಂಗ್ರೆಸ್ ನಾಯಕ ಸಂತೋಖ್ ಚೌಧರಿ, ಜನವರಿ ತಿಂಗಳಲ್ಲಿ ನಿಧನರಾಗಿದ್ದರು. ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಸಂಚರಿಸುವ ವೇಳೆ ಕುಸಿದು ಬಿದ್ದು ಆಸ್ಪತ್ರೆ ದಾಖಲಾಗಿದ್ದರು. ಜನವರಿ 14 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಕಳೆದ ಜನವರಿಯಿಂದ ತೆರವಾಗಿದ್ದ ಜಲಂಧರ್ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆ ಜೊತೆ ಚುನಾವಣೆ ನಡೆಸುವುದಾಗಿ ಘೋಷಿಸಿತ್ತು. ಜಲಂಧರ್ ಕ್ಷೇತ್ರದಿಂದ ಬಿಜೆಪಿ ಸರ್ದಾರ್ ಇಕ್ಬಾಲ್ ಸಿಂಗ್‌ಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಸಂತೋಖ್ ಚೌಧರಿ ನಿಧನದಿಂದ ಅವರ ಪತ್ನಿ ಕರಮಜಿತ್ ಕೌರ್ ಚೌಧರಿಗೆ ಟಿಕೆಟ್ ನೀಡಿದೆ.
ಒಡಿಶಾದ ಝಾರ್ಸುಗುಡ ಕ್ಷೇತ್ರದಿಂದ ಆರಿಸಿ ಬಂದು ಆರೋಗ್ಯ ಸಚಿವರಾಗಿದ್ದ ನಬಾ ದಾಸ್ ಇತ್ತೀಚೆಗೆ ಹತ್ಯೆಯಾಗಿದ್ದರು. ಪೊಲೀಸ್ ಅಧಿಕಾರಿಯೇ ಕಾರಿನಿಂದ ಇಳಿಯುತ್ತಿದ್ದ ನಬಾ ದಾಸ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಬಿಜೆಡಿ ನಾಯಕನಾಗಿದ್ದ ನಬಾ ದಾಸ್ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಇದೀಗ ಪಕ್ಷ ಅವರ ಪತ್ನಿ ದೀಪಾಲಿ ದಾಸ್‌ಗೆ ಟಿಕೆಟ್ ನೀಡಿದೆ. ಇತ್ತ ಕಾಂಗ್ರೆಸ್ ತರುಣ್ ಪಾಂಡೆಗೆ ಟಿಕೆಟ್ ನೀಡಿದೆ.
ಇತ್ತ ಕರ್ನಾಟಕದಲ್ಲಿ 2ನೇ ಪಟ್ಟಿ ಪ್ರಕಟಗೊಂಡ ಬಳಿಕ ಬಂಡಾಯ ಹೆಚ್ಚಾಗಿದೆ. 2ನೇ ಪಟ್ಟಿಯಲ್ಲಿ ಬಿಜೆಪಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಮೂಲಕ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರದಲ್ಲಿ ಟಿಕೆಟ್ ಘೋಷಿಸಿತ್ತು. ಇದರೊಂದಿಗೆ ಒಟ್ಟು 224 ಕ್ಷೇತ್ರಗಳ ಪೈಕಿ 212 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸಿದಂತಾಗಿದೆ. ಇನ್ನೂ 12 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆಯಾಗಬೇಕಾಗಿದೆ. 11 ಮಂದಿ ಶಾಸಕರಿಗೆ ಕೊಕ್ ನೀಡಲಾಗಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ 7 ಶಾಸಕರಿಗೆ ಕೊಕ್ ನೀಡಲಾಗಿದೆ. ಅಲ್ಲಿಗೆ ಒಟ್ಟು 18 ಶಾಸಕರು ಟಿಕೆಟ್ ಕಳೆದುಕೊಂಡಂತಾಗಿದೆ.
ಬಿಜೆಪಿಯಲ್ಲಿ ಬಂಡಾಯದ ಹೊಗೆ: ಸಾವಿರಾರು ಕಾರ್ಯಕರ್ತರು ರಾಜೀನಾಮೆ
ಮೂರು ದಿನಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ನಾಗರಾಜ್ ಛಬ್ಬಿ ಅವರಿಗೆ ನಿರೀಕ್ಷೆಯಂತೆ ಕಲಘಟಗಿ ಕ್ಷೇತ್ರದ ಟಿಕೆಟ್ ಲಭಿಸಿದೆ. ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ಸಂಪಂಗಿ ಅವರ ಪುತ್ರಿ ಅಶ್ವಿನಿ ಅವರಿಗೆ ಟಿಕೆಟ್ ಸಿಕ್ಕಿದೆ. ಹಾನಗಲ್ ಕ್ಷೇತ್ರದಿಂದ ಸಂಸದ ಶಿವಕುಮಾರ್ ಉದಾಸಿ ಕುಟುಂಬದವರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಕಳೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಶಾಸಕ ಶಿವರಾಜ್ ಸಜ್ಜನರ್ ಅವರಿಗೇ ಮಣೆ ಹಾಕಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.