ರಿಷಭ್ ಶೆಟ್ಟಿ ಅವರ ಸಿದ್ದಾಂತಗಳು ಹಾಗೂ ನಮ್ಮ ಸಿದ್ದಾಂತಗಳಿಗೂ ಸಾಮ್ಯತೆಗಳಿವೆ ಎಂದು ಹೇಳುವ ಮೂಲಕ ಸಿಎಂ ಬೊಮ್ಮಾಯಿ ಬಿಜೆಪಿ ಪ್ರಚಾರದಲ್ಲಿ ರಿಷಭ್ ಶೆಟ್ಟಿ ಬಳಸಿಕೊಳ್ಳುವ ಸುಳಿವು ನೀಡಿದ್ದಾರೆ.
ಉಡುಪಿ (ಏ.13): ಕಾಂತಾರ ಸಿನಿಮಾದ ನಾಯಕ ರಿಷಭ್ ಶೆಟ್ಟಿ ಅವರು ನಮ್ಮ ಸಿದ್ದಾಂತಕ್ಕೆ ಹತ್ತಿರ ಇದ್ದವರು. ನಮ್ಮ ಸಿದ್ದಾಂತ ಪ್ರತಿಪ್ರಾದನೆ ಮಾಡಿದವರು ರಿಷಭ್ ಆಗಿದ್ದಾರೆ ಎಂದು ಹೇಳುವ ಮೂಲಕ ರಿಷಭ್ ಶೆಟ್ಟಿ ಬಿಜೆಪಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀಡಿದ್ದಾರೆ.
ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ರಿಷಭ್‌ಶೆಟ್ಟಿ ಕೂಡ ದೇವರ ದರ್ಶನವನ್ನು ಮುಗಿಸಿಕೊಂಡು ಹೊರಬಂದರು. ಇನ್ನು ರಿಷಭ್ ಶೆಟ್ಟಿ ಅವರು ಕೂಡ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಭಾಗವಹಿಸುವುದೇ ಎಂದು ಮಾಧ್ಯಮಗಳಿಂದ ಸಿಎಂ ಬೊಮ್ಮಾಯಿಗೆ ಪ್ರಶ್ನೆ ಮಾಡಲಾಯಿತು. ಈ ವೇಳೆ ಪ್ರತಿಕ್ರಿಯೆ ನೀಡಿದ ಸಿಎಂ, ನಮ್ಮ ಸಿದ್ದಾಂತ ಮತ್ತು ರಿಷಭ್ ಶೆಟ್ಟಿ ಅವರ ಸಿದ್ದಾಂತ ಒಂದೇ ಆಗಿದ್ದು, ಅವರೂ ಈ ಹಿಂದೆಯೂ ಹಲವಾರು ಬಾರಿ ಸಿದ್ದಾಂತ ಸಾಮ್ಯತೆ ಆಗಿರುವ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ಆದರೆ, ಈಗ ಅವರೊಂದಿಗೆ ಬಿಜೆಪಿ ಪರವಾಗಿ ಪ್ರಚಾರ ಮಾಡಿ ಎಂದು ಅಧಿಕೃತವಾಗಿ ಯಾವುದೇ ಚರ್ಚೆಯನ್ನು ಮಾಡಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂದು ಚಿಂತನೆ ಮಾಡಿ ಕ್ರಮವಹಿಸುತ್ತೇವೆ.
undefined
ನನ್ನ ಬೆಂಬಲ ಸಿಎಂ ಬೊಮ್ಮಾಯಿಗೆ: ಕಿಚ್ಚ ಸುದೀಪ ಬಹಿರಂಗ ಹೇಳಿಕೆ
ಬೊಮ್ಮಾಯಿ, ರಿಷರ್ಭ ಒಟ್ಟಾಗಿ ಮೂಕಾಂಬಿಕೆ ದರ್ಶನ: ಎಂಪಿ ಕುಮಾರಸ್ವಾಮಿ ರಾಜೀನಾಮೆ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈಗಾಗಲೇ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಸಮೀಕ್ಷೆಯ ವರದಿಯ ಆಧಾರದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಅವರಲ್ಲಿ ಮಾತನಾಡುವ ಮೂಲಕ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಸಂಯಮದಿಂದ ತೀರ್ಮಾನ ಮಾಡೋದು ಒಳ್ಳೆಯದು. ಕೊಲ್ಲೂರು ಮೂಕಾಂಬಿಕಾ ಸನ್ನಿಧಿ ಬೇಟಿ ಮಾಡಿ ಮೂಕಾಂಬಿಕಾ ದೇವಿಯಲ್ಲಿ ಕನ್ನಡ ಜನರ ಸುಭೀಕ್ಷೆಗಾಗಿ ಬೇಡಿಕೊಂಡಿದ್ದೇನೆ. ನವ ನಾಡು ಜನರಿಗೆ ಒಳ್ಳೆಯದಾಗಲಿ ಅಂತ ಬೇಡಿಕೊಂಡೆ ಎಂದು ತಿಳಿಸಿದರು.
ಸದ್ಯಕ್ಕೆ ರಿಷಭ್‌ಶೆಟ್ಟಿ ಬಳಕೆಯಿಲ್ಲ: ರಿಷಬ್ ಶೆಟ್ಟಿ ಜೊತೆಗೆ ಮೂಕಾಂಬಿಕಾ ದರ್ಶನ ಮಾಡಿದ್ದೇನೆ. ಆದರೆ, ಯಾವುದೇ ಕ್ಯಾಂಪಿಯನ್ ವಿಚಾರ ಮಾತನಾಡಿಲ್ಲ. ಮೊದಲಿಂದಲೂ ಒಳ್ಳೆಯ ಸ್ನೇಹಿತರು. ಅವರು ದೇವಸ್ಥಾನಕ್ಕೆ ಬರುತ್ತಿರುವುದೇ ನನಗೆ ಗೊತ್ತಿರಲಿಲ್ಲ. ಇನ್ನು ಅವರು ನಮ್ಮ ಸಿದ್ದಾಂತ ಹತ್ತಿರ ಇದ್ದವರು. ನಮ್ಮ ಸಿದ್ದಾಂತ ಪ್ರತಿಪ್ರಾದನೆ ಮಾಡಿದವರು ರಿಷಭ್ ಶೆಟ್ಟಿ ಆಗಿದ್ದಾರೆ. ಈಗ ಸದ್ಯದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಪ್ಲ್ಯಾನ್ ಇಲ್ಲವೆಂದು ಹೇಳಿದರು. ಸದ್ಯದಲ್ಲಿ ಪ್ರಚಾರ ಇಲ್ಲವೆಂದರೂ ಮುಂದಿನ ದಿನಗಳಲ್ಲಿ ಕರಾವಳಿ ಕ್ಷೇತ್ರದಲ್ಲಿ ಅವರ ಪ್ರಚಾರವನ್ನು ಪಡೆದುಕೊಳ್ಳುವ ಸುಳಿವನ್ನು ನೀಡಿದ್ದಾರೆ.
ಉಡುಪಿಯಲ್ಲಿ ಸಂಘಟನೆ ಮಾಡಿದವರಿಗೆ ಟಿಕೆಟ್: ಉಡುಪಿಯಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಇದು ಪ್ರಯೋಗವೂ ಅಲ್ಲ, ರಿಸ್ಕ್ ಕೂಡ ಇಲ್ಲ. ಈಗ ಇರುವವರು ಪ್ರಬಲ ಸಂಘಟನೆಯಿಂದ ಬಂದವರು. ಸಂಘಟನೆಯಲ್ಲಿ ಪ್ರಬಲ ಅತ್ಯಂತ ಗಟ್ಟಿ ಇರುವವರನ್ನು ಆಯ್ಕೆ ಮಾಡಿದ್ದೇವೆ. ಇನ್ನು 5 ಶಾಸಕರು ದೇವಸ್ಥಾಕ್ಕೆ ನಿಮ್ಮೊಂದಿಗೆ ಹಾಜರಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಕ್ಕೆ, ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಬರುವುದು ಬೇಡ ಅಂದಿದ್ದೇನೆ. ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ನನಗೆ ನಾಯಕನಾಗಿ ಟೀಕೆ ಸಹಜ. ಸ್ಪರ್ಧಾತ್ಮಕವಾಗಿ ಎದುರಿಸುತ್ತೇನೆ. ಚುನಾವಣೆಗೆ ಅನುಭವ ಬೇಕಿಲ್ಲ ಜನ ಬೆಂಬಲ ಸಿಗುತ್ತದೆ ಎಂದು ಹೇಳಿದರು.
ಮೋದಿಯಂಥ ಸ್ಟಾರ್ ನಟರೇ ಅಟ್ರ್ಯಾಕ್ಷನ್ ಮಾಡೋಕೆ ಆಗ್ತಿಲ್ಲ; ಸುದೀಪ್, ಪವನ್ ಕಲ್ಯಾಣ್ ಏನು ಮಾಡ್ತಾರೆ?: ಎಚ್‌ಡಿಕೆ ಲೇವಡಿ
ಕಳೆದ ವಾರ ಕಿಚ್ಚ ಸುದೀಪ್ ಪ್ರಚಾರಕ್ಕೆ ಸಮ್ಮತಿ: ರಾಜ್ಯದಲ್ಲಿ ನಾನು ಸಿಎಂ ಬೊಮ್ಮಾಯಿ ಮಾಮ ಅವರ ಪರವಾಗಿ ಬಿಜೆಪಿಗೆ ಪ್ರಚಾರವನ್ನು ಮಾಡುತ್ತೇನೆ. ಬೊಮ್ಮಾಯಿ ಅವರು ಎಲ್ಲೆಲ್ಲಿ ಹೇಳುತ್ತಾರೋ ಅಂತಹ ಪ್ರದೇಶಗಳಲ್ಲಿ ಹೋಗಿ ಪ್ರಚಾರ ಮಾಡುತ್ತೇನೆ. ಆದರೆ, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಸೇರಿ ನನ್ನ ಅಭಿಮಾನಿಗಳ ನಂಬಿಕೆಗೆ ದ್ರೋಹ ಮಾಡುವುದಿಲ್ಲ. ನಾನು ಸಿನಿಮಾ ಕ್ಷೇತ್ರಕ್ಕೆ ಬಂದು ಕಷ್ಟದಲ್ಲಿದ್ದಾಗ ನನಗೆ ನೆರವಾಗಿದ್ದವರು ನಮ್ಮ ಬೊಮ್ಮಾಯಿ ಮಾಮ ಅವರು. ಹೀಗಾಗಿ, ಅವರ ಪರವಾಗಿ ನಾನು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಈ ಹಿಂದೆಯೂ ಹಲವು ಜನರು ಸಿನಿಮಾ ಕ್ಷೇತ್ರದಿಂದ ಬಂದು ಪ್ರಚಾರ ಮಾಡಿದ್ದಾರೆ. ನಾನೇನು ಹೊಸದಾಗಿ ಈ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಅಧಿಕೃತ ಮಾಹಿತಿ ನೀಡಿದ್ದರು.