ಬಿಹಾರದ ಜಯ ನುಸುಳುಕೋರರ ವಿರುದ್ಧ ಗೆಲುವು : ಸಚಿವ ಶಾ

Kannadaprabha News   | Kannada Prabha
Published : Nov 22, 2025, 04:36 AM IST
amit shah nitish kumar

ಸಾರಾಂಶ

‘ಬಿಹಾರದಲ್ಲಿ ಎನ್‌ಡಿಎ ಗೆಲುವು ದೇಶದ ನುಸುಳುಕೋರರ ವಿರುದ್ಧದ ಜಯ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಣ್ಣಿಸಿದ್ದಾರೆ. ಇದರ ಬೆನ್ನಲ್ಲೇ ‘ಶಾ ಹೇಳಿಕೆ ಕೇಂದ್ರದ ವೈಫಲ್ಯ ತೋರಿಸುತ್ತದೆ. ಅವರು ರಾಜೀನಾಮೆ ನೀಡಬೇಕು’ ಎಂದು ಟಿಎಂಸಿ ಆಗ್ರಹಿಸಿದೆ.

ಭುಜ್‌/ಕೋಲ್ಕತಾ : ‘ಬಿಹಾರದಲ್ಲಿ ಎನ್‌ಡಿಎ ಗೆಲುವು ದೇಶದ ನುಸುಳುಕೋರರ ವಿರುದ್ಧದ ಜಯ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಣ್ಣಿಸಿದ್ದಾರೆ. ಇದರ ಬೆನ್ನಲ್ಲೇ ‘ಶಾ ಹೇಳಿಕೆ ಕೇಂದ್ರದ ವೈಫಲ್ಯ ತೋರಿಸುತ್ತದೆ. ಅವರು ರಾಜೀನಾಮೆ ನೀಡಬೇಕು’ ಎಂದು ಟಿಎಂಸಿ ಆಗ್ರಹಿಸಿದೆ.

ಭುಜ್‌ನಲ್ಲಿ ಬಿಎಸ್‌ಎಫ್‌ ಸಭೆಯಲ್ಲಿ ಮಾತನಾಡಿದ ಶಾ, ‘ಕೆಲವು ಪಕ್ಷಗಳು ಮತಪಟ್ಟಿ ಪರಿಷ್ಕರಣೆ ವಿರೋಧಿಸುತ್ತಿವೆ. ಅಕ್ರಮ ವಲಸಿಗರು ಮತಪಟ್ಟಿಣೆಯಲ್ಲಿ ಇರಬೇಕೆಂದು ಬಯಸುತ್ತಾರೆ. ಆದರೆ ಪರಿಷ್ಕರಣೆ ಬಳಿಕ ಅದೆಲ್ಲವೂ ಶುದ್ಧ ಆಗಲಿದೆ. ಪ್ರತಿಯೊಬ್ಬ ನುಸುಳುಕೋರನನ್ನು ದೇಶದಿಂದ ಹೊರಹಾಕುತ್ತೇವೆ. ಬಿಹಾರದ ಗೆಲುವು ಅಕ್ರಮ ವಲಸಿಗರ ವಿರುದ್ಧದ ಜಯ. ಜನರು ನುಸುಳುಕೋರರನ್ನು ಬೆಂಬಲಿಸುವ ಪಕ್ಷಕ್ಕೆ ಮತ ನೀಡಲ್ಲ ಎಂದು ಸಾಬೀತುಪಡಿಸಿದ್ದಾರೆ’ ಎಂದರು.

ಟಿಎಂಸಿ ಕಿಡಿ:

ಈ ಹೇಳಿಕೆಗೆ ಪ್ರಶ್ನಿಸಿರುವ ತೃಣಮೂಲ ಕಾಂಗ್ರೆಸ್‌, ‘ಗೃಹಸಚಿವರು ನುಸುಳುಕೋರರ ಬಗ್ಗೆ ಮಾತನಾಡಿ ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರದ ವೈಫಲ್ಯ ಸಾಬೀತುಪಡಿಸಿದ್ದಾರೆ. ದೇಶ ಭದ್ರತಾ ಚೌಕಟ್ಟು ಬಿರುಕು ಮೂಡಿದೆ. ಗಡಿ ಸುರಕ್ಷಿತವಾಗಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ. ಸಚಿವರು ಕೂಡಲೇ ಹುದ್ದೆಯಿಂದ ಕೆಳಗಿಳಿಯಬೇಕು’ ಎಂದು ಆಗ್ರಹಿಸಿದೆ.

ಮತಪಟ್ಟಿ ಪರಿಷ್ಕರಣೆ ಒತ್ತಡ : ಗುಜರಾತ್‌ನಲ್ಲಿ ಶಿಕ್ಷಕ ಆತ್ಮ*ತ್ಯೆ

ಸೋಮನಾಥ್‌: ದೇಶದಲ್ಲಿ ಮತಪಟ್ಟಿ ಪರಿಷ್ಕರಣೆ ಕೆಲಸದ ಒತ್ತಡ ಆರೋಪ ಹೊರಿಸಿ ಮತ್ತೊಬ್ಬ ಸಿಬ್ಬಂದಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಗುಜರಾತ್‌ನ ಗಿರ್‌ ಸೋಮನಾಥ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಮೂಲಕ ಎಸ್‌ಐಆರ್‌ ಕಾರಣ ನೀಡಿ ಬಲಿಯಾದವರ ಸಂಖ್ಯೆ 9ಕ್ಕೇರಿಕೆಯಾಗಿದೆ. ಇಲ್ಲಿನ ಕೋಡಿನಾರ್‌ ತಾಲೂಕಿನ ಛಾರಾ ಗ್ರಾಮದಲ್ಲಿ ಬಿಎಲ್‌ಒ ಆಗಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಶಿಕ್ಷಕ ಅರವಿಂದ್‌ ವಧೇರ್‌ ಆತ್ಮ*ತ್ಯೆ ಮಾಡಿಕೊಂಡವರು.

ಈ ವೇಳೆ ಅವರು ಡೆತ್‌*ಟ್‌ ಬರೆದಿಟ್ಟಿದ್ದು, ಅದರಲ್ಲಿ ‘ಮತಪಟ್ಟಿ ಪರಿಷ್ಕರಣೆಯ ಕಾರ್ಯದೊತ್ತಡವನ್ನು ದೈನಂದಿನ ಕೆಲಸಗಳ ಜತೆಗೆ ಸರಿದೂಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಇದರಿಂದ ಸುಸ್ತಾಗಿದ್ದೇನೆ’ ಎಂದಿದ್ದಾರೆ. ಇಲ್ಲಿಯವರೆಗೆ ವಿವಿಧ ರಾಜ್ಯಗಳಲ್ಲಿ 9 ಸಿಬ್ಬಂದಿ ಮತಪಟ್ಟಿ ಪರಿಷ್ಕರಣೆ ಆರಂಭವಾದ ಬಳಿಕ ಸಾವನ್ನಪ್ಪಿದ್ದಾರೆ. ಅದರಲ್ಲಿ ನಾಲ್ವರು ಕಾರ್ಯದೊತ್ತಡ ತಾಳಲಾಗದೆ ಆತ್ಮ*ತ್ಯೆ ಮಾಡಿಕೊಂಡಿದ್ದರೆ, ಉಳಿದವರು ಹೃದಯಾಘಾತಕ್ಕೆ ತುತ್ತಾದವರು.

ಬಂಗಾಳದಲ್ಲಿ ನೋಟಿಸ್:

ಈ ನಡುವೆ, ಸರಿಯಾಗಿ ಮತಪಟ್ಟಿ ಪರಿಷ್ಕರಣೆ ಕೆಲಸ ಮಾಡದ 7 ಚುನಾವಣಾ ಸಿಬ್ಬಂದಿಗೆ ಬ.ಬಂಗಾಳದಲ್ಲಿ ನೋಟಿಸ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ