
ಬೆಂಗಳೂರು (ಮಾ.14): ಆರೋಗ್ಯ ಕ್ಷೇತ್ರದಲ್ಲಿ ಡಾ ಮಂಜುನಾಥ್ ಸೇವೆ ಅನನ್ಯ. ಅವರನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತುಕತೆ ಆದಾಗ ಅವರ ಮಗ ನನ್ನ ಪ್ರಶ್ನೆ ಮಾಡಿದ್ದರು. 'ನಾವು ನೆಮ್ಮದಿಯಾಗಿದ್ದೇವೆ, ರಾಜಕೀಯ ಯಾಕೆ ನಮಗೆ' ಎಂದಿದ್ದರು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ದೇಶದಲ್ಲಿ, ಆರೋಗ್ಯ ಸೇವೆಯಲ್ಲಿ ಅವರಿಂದ ಇನ್ನೂ ದೊಡ್ಡ ಮಟ್ಟಿನ ಸೇವೆ ಬೇಕು ಅಂತ ನನಗನಿಸಿದೆ. ನಮ್ಮ ಮೇಲೆ ಏನು ಬೇಕಾದರೂ ಮಾತಾಡಿ. ಆದರೆ ಡಾ ಮಂಜುನಾಥ್ ಅವರ ಬಗ್ಗೆ ಮಾತಾಡುವ ಅರ್ಹತೆ ನಿಮಗಿಲ್ಲ ಎಂದು ಪರೋಕ್ಷವಾಗಿ ಸಂಸದ ಡಿಕೆ ಸುರೇಶ್ ಗೆ ತಿವಿದರು.
ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಯಾರೋ ನನಗೆ ಗೊತ್ತಿಲ್ಲ ಎಂದ ಡಿಕೆ ಸುರೇಶ್`!
ನಾನು ದೂರದೃಷ್ಟಿ ಇಟ್ಟುಕೊಂಡಿದ್ದೇನೆ, ನಮ್ಮ ಪಕ್ಷಕ್ಕೆಕ ಹಿನ್ನೆಡೆಯಾಗಲು ಬಿಡುವುದಿಲ್ಲ. ನಾನೇ ಡಾ ಮಂಜುನಾಥ್ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದೇನೆ ಹೊರತು ಅವರಾಗಿಯೇ ಚುನಾವಣೆಗೆ ನಿಂತಿದ್ದಲ್ಲ. ಅಂತಹವರ ವಿರುದ್ಧ ನೀವು ಏನೇ ಟೀಕೆ ಮಾಡಿದ್ರೂ ನಿಮ್ಮ ಗರ್ವ, ದುರಾಹಂಕಾರಕ್ಕೆ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ. ನೀವು ಎಷ್ಟು ಮನೆ ಹಾಳುಮಾಡಿದ್ದೀರಿ ಅನ್ನೋದು ನನಗೆ ಗೊತ್ತಿದೆ ಎಂದು ಸಂಸದ ಡಿಕೆ ಸುರೇಶ್ ಗೆ ಟಾಂಗ್ ಕೊಟ್ಟರು. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷವನ್ನು ಬೆಂಬಲಿಸುವಂತೆ ನೆರೆದಿದ್ದ ಮಹಿಳಾ ಕಾರ್ಯಕರ್ತರಿಗೆ ಎಚ್‌ಡಿ ಕುಮಾರಸ್ವಾಮಿ ಕರೆ ನೀಡಿದರು.
ರಾಯಚೂರು: ಬೆಳಗ್ಗೆ 11 ಕ್ಕೆ ನಡೆಯಬೇಕಿದ್ದ ಗ್ಯಾರಂಟಿ ಸಮಾವೇಶ 1 ಗಂಟೆಯಾದ್ರೂ ಸಿಎಂ, ಡಿಸಿಎಂ ಸುಳಿವಿಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.