* ಕ್ಷೇತ್ರ ಬದಲಾವಣೆ ಮಾಡಲ್ಲ ಎದುರಾಳಿ ಯಾರೇ ಬರಲಿ
* ಶ್ರೀರಾಮುಲುಗೆ ಪರೋಕ್ಷವಾಗಿ ಟಕ್ಕರ್ ನೀಡಿದ ಶಾಸಕ ನಾಗೇಂದ್ರ
* ಕೂಡ್ಲಿಗಿ, ಸಿರಗುಪ್ಪ ಎಲ್ಲ ಊಹಾಪೋಹ ಬಳ್ಳಾರಿ ಗ್ರಾಮಾಂತರ ಕ್ಷೇತ್ರವೇ ಖಚಿತ
* 2023ರ ಚುನಾವಣೆ ಗೆ ಶ್ರೀರಾಮುಲು ವರ್ಸಸ್ ನಾಗೇಂದ್ರ?
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ, (ಜೂನ್.13) : ಶ್ರೀರಾಮುಲು ಅಲ್ಲ ಯಾರೇ ಬಂದ್ರೂ ಕ್ಷೇತ್ರ ಬದಲಾವಣೆ ಮಾಡೋದಿಲ್ಲ. 2023ರ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡ್ತಾರೆ ಅಲ್ಲಿಗೆ ಹೋಗ್ತಾರೆ ಇಲ್ಲಿಗೆ ಬರುತ್ತಾರೆಂದು ಊಹಾಪೋಹದ ಸುದ್ದಿಯನ್ನು ಹರಡಿಸೋ ಮೂಲಕ ರಾಜಕೀಯ ಮಾಡ್ತಿದ್ದಾರೆ. ಆದ್ರೇ, ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಬಿಟ್ಟು ನಾನೇಲ್ಲೂ ಹೋಗಲ್ಲ ಎಂದು ಶಾಸಕ ನಾಗೇಂದ್ರ ಪರೋಕ್ಷವಾಗಿ ಎದುರಾಳಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ
ಹೌದು,..ಶ್ರೀರಾಮುಲು ಬಳ್ಳಾರಿ ಉಸ್ತುವಾರಿಯಾದ ಬಳಿಕ ಸ್ವಕ್ಷೇತ್ರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚು ಓಡಾಡ್ತಿದ್ದಾರೆ. ಮಸೀದಿ ಮಂದಿರ ಸೇರಿದಂತೆ ಹಲವು ಕಡೆ ದೇಣಿಗೆ ನೀಡೋ ಮೂಲಕ ಮತ್ತೊಮ್ಮೆ ತವರೊಗೆ ಮರಳೋ ಸಂದೇಶ ನೀಡಿದ್ರು.ಇದರಿಂದಾಗಿ ಹಾಲಿ ಶಾಸಕ ನಾಗೇಂದ್ರ ಕ್ಷೇತ್ರ ಬದಲಿಸುತ್ತಾರೆ ಎನ್ನಲಾಗಿತ್ತು.. ಆದ್ರೆ, ಯಾರೇ ಬಂದ್ರೂ ಕ್ಷೇತ್ರ ಬದಲಾವಣೆ ಮಾಡೋ ಪ್ರಶ್ನೆಯೇ ಇಲ್ಲವೆಂದ ಶಾಸಕ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ..
undefined
Karnataka Politics: ಬಿಜೆಪಿಯಲ್ಲಿ ಶ್ರೀರಾಮುಲು ಮೂಲೆಗುಂಪು: ಶಾಸಕ ನಾಗೇಂದ್ರ
ಶ್ರೀರಾಮುಲು vs ನಾಗೇಂದ್ರ ಹೈವೋಲ್ಟೆಜ್ ಕ್ಷೇತ್ರ
ಎರಡು ಬಲಿಷ್ಠ ನಾಯಕರ ಮಧ್ಯೆ ಈ ಬಾರಿ ಬಹುತೇಕ ಚುನಾವಣೆ ನಡೆಯೋದು ಬಹುತೇಕ ಫಿಕ್ಸ್ ಆಗೋ ರೀತಿಯಲ್ಲಿ ವಾತಾವರಣ ಸೃಷ್ಟಿಯಾಗ್ತಿದೆ. 2008 ರಲ್ಲಿ ಬಿಜೆಪಿ ಮತ್ತು 2013 ರಲ್ಲಿ ಪಕ್ಷೇತರರಾಗಿ ಕೂಡ್ಲಿಗಿಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದ ಶಾಸಕ ನಾಗೇಂದ್ರ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ್ರು. ಪಕ್ಷದ ಸೂಚನೆ ಮೇರೆಗೆ ಮತ್ತು ಇಷ್ಟಪಟ್ಟು ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಬಂದು ಇಲ್ಲಿಯೂ ಶ್ರೀರಾಮುಲು ಸಹೋದರ ಸಣ್ಣ ಫಕೀರಪ್ಪ ವಿರುದ್ಧ ಸ್ಪರ್ಧೆ ಮಾಡಿ ಗೆದ್ರು.
ಕಾಂಗ್ರೆಸ್ ನಲ್ಲಾದಂತೆ ಬಿಜೆಪಿಯಲ್ಲಿ ನಡೆದ ದಿಢೀರ್ ಬದಲಾವಣೆಯಿಂದ ಶ್ರೀರಾಮುಲು ತಮ್ಮ ಸ್ವಕ್ಷೇತ್ರ ಬಳ್ಳಾರಿ ಗ್ರಾಮಾಂತರ ಬಿಟ್ಟು ಮೊಳಕಾಲ್ಮೂರು ಮತ್ತು ಬಾದಾಮಿ ಎರಡು ಕಡೆ ಸ್ಪರ್ಧೆ ಮಾಡಿದ್ರು. ಬಾದಾಮಿಯಲ್ಲಿ ಸೋತ್ರೇ ಮೊಳಕಾಲ್ಮೂರಿನಲ್ಲಿ ಗೆದ್ರು. ಆದ್ರೇ ಇದೀಗ ಮತ್ತೊಮ್ಮೆ ಕ್ಷೇತ್ರ ಬದಲಾವಣೆ ಚಿಂತನೆ ಮಾಡಿರೋ ಶ್ರೀರಾಮುಲು ತವರು ಕ್ಷೇತ್ರ ಬಳ್ಳಾರಿ ಗ್ರಾಮಾಂತರ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಶ್ರೀರಾಮುಲು ಬಂದ್ರೇ ನಾಗೇಂದ್ರ ತವರು ಕ್ಷೇತ್ರ ಕೂಡ್ಲಿಗಿಗೆ ಹೋಗ್ತಾರೆ ಅಥವಾ ಸಿರಗುಪ್ಪ ಕ್ಷೇತ್ರಕ್ಕೆ ಹೋಗ್ತಾರೆ ಎನ್ನಲಾಗಿತ್ತು. ಇದು ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು.
ರಾಷ್ಟ್ರೀಯ ಪಕ್ಷ ಇಲ್ಲಿ ಇಷ್ಟ ಬಂದಹಾಗೇ ನಡೆಯಲ್ಲ
ಇನ್ನೂ ಕ್ಷೇತ್ರದಲ್ಲಿ ಹಬ್ಬಿರೋ ಎಲ್ಲ ಊಹಾಪೋಹಗಳಿಗೆ ತೆರೆಯೊಳೆಯೋ ಪ್ರಯತ್ನ ಮಾಡಿರೋ ಶಾಸಕ ನಾಗೇಂದ್ರ
ನಾನೀರೋದು ರಾಷ್ಟ್ರೀಯ (ಕಾಂಗ್ರೆಸ್) ಪಕ್ಷದಲ್ಲಿ ಯಾರೋ ಬರುತ್ತಾರೆಂದು ಕ್ಷೇತ್ರ ಬದಲಾವಣೆ ಮಾಡೋಕೆ ಆಗ್ತದೆಯೇ..? ಅಪಪ್ರಚಾರ ಮಾಡೋರಿಗೆ ಏನು ಹೇಳೋಕೆ ಅಗ್ತದೆ.. ಅಪಪ್ರಚಾರ ಕೂಡ ರಾಜಕೀಯವೇ ಆಗಿದೆ ಇದಕ್ಕೆ ಬಗ್ಗೋ ಪ್ರಶ್ನೆಯೇ ಇಲ್ಲ ಎಂದು ತಮ್ಮ ಎದುರಾಳಿಗಳಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ..
ಹೈಕಮೆಂಡ್ ನಿಂದ ಗ್ರಿನ್ ಸಿಗ್ನಲ್
ಈಗಾಗಲೇ ಶಾಸಕ ನಾಗೇಂದ್ರ ಅವರಿಗೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆ ಮಾಡಲು ಹೈಕಮೆಂಡ್ ಸಿಗ್ನಲ್ ಕೊಟ್ಟಿದೆಯಂತೆ. ಎರಡು ಬಾರಿ ಕೂಡ್ಲಿಗಿ ಮತ್ತು ಒಂದು ಬಾರಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿದ್ದು ಯಾರಿಗೂ ಹೆದರಿ ಕ್ಷೇತ್ರ ಬದಲಾವಣೆ ಮಾಡಲ್ಲ ಎನ್ನುವದು ಶಾಸಕ ನಾಗೇಂದ್ರ ಸೇರಿದಂತೆ ಅವರ ಬೆಂಬಲಿಗರ ಬಲವಾದ ವಾದವಾಗಿದೆ. ಹೀಗಾಗೊ ಪರೋಕ್ಷವಾಗಿ ಶ್ರೀರಾಮುಲುಗೆ ಕ್ಷೇತ್ರ ಬದಲಾವಣೆ ಇಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನು ನಾಗೇಂದ್ರ ರವಾನೆ ಮಾಡಿದ್ದಾರೆ..
2004 ರಿಂದ ಈವರೆಗೂ ಶ್ರೀರಾಮುಲು ಮತ್ತು 2008 ರಿಂದ ಈವರೆಗೂ ಶಾಸಕ ನಾಗೇಂದ್ರ ಸೋಲನ್ನೇ ಕಂಡಿಲ್ಲ. ವಿವಿಧ ಕ್ಷೇತ್ರ ಮತ್ತು ಬೇರೆ ಬೇರೆ ಎದುರಾಳಿಗಳ ಜೊತೆಗೆ ಸ್ಪರ್ಧೆ ಮಾಡಿರೋ ಒಂದು ಕಾಲದ ಆಪ್ತರು ಭರ್ಜರಿಯಾಗಿಯೇ ಗೆದ್ದಿದ್ದಾರೆ. ಆದ್ರೇ ಇದೀಗ ಪರಸ್ಪರ ಎದುರಾದ್ರೇ ಮಾತ್ರ ರಾಜ್ಯದಲ್ಲಿ ಗಮನ ಸೆಳೆಯೋ ದೊಡ್ಡ ಕ್ಷೇತ್ರ ಇದಾಗೋದ್ರಲ್ಲಿ ಎರಡು ಮಾತಿಲ್ಲ. ಅಲ್ಲದೇ ಯಾರೇ ಸೋತ್ರ ಅವರ ರಾಜಕೀಯ ಭವಿಷ್ಯ ಮುಂದಿನ ಐದು ವರ್ಷ ಡೋಲಾಯಮಾನ ಆಗೋದ್ರಲ್ಲಿ ಎರೆಡು ಮಾತಿಲ್ಲ..