ಬೆಳಗಾವಿ ಆಯ್ತು, ಬಳ್ಳಾರಿ ಕಾಂಗ್ರೆಸ್‌ ಸಭೆಯಲ್ಲೂ ಅಸಮಾಧಾನ ಸ್ಫೋಟ: ಎಐಸಿಸಿ ಸದಸ್ಯರ ಮುಂದೆಯೇ ವಾಗ್ವಾದ

By Sathish Kumar KH  |  First Published Oct 19, 2023, 7:31 PM IST

ನಿನ್ನೆ ಬೆಳಗಾವಿ ಆಯ್ತು, ಇಂದು ಬಳ್ಳಾರಿ ಕಾಂಗ್ರೆಸ್‌ ಸಭೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಲೋಕಸಭಾ ಚುನಾವಣೆ ಸಮೀಪದಲ್ಲಿ ಕಾಂಗ್ರೆಸ್‌ಗೆ ತಲೆನೋವು ಶುರುವಾಗಿದೆ. 


ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್ 

ಬಳ್ಳಾರಿ (ಅ.19): ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಾಲೀಮು ನಡೆಸಿರೋ ಕಾಂಗ್ರೆಸ್ ಹತ್ತು ಹಲವು ಕಾರ್ಯಕ್ರಮ ಮಾಡೋ ಮೂಲಕ ಕಾರ್ಯರ್ತಕರನ್ನು ಜೊತೆಗೆ ಕರೆದುಕೊಂಡು ಹೋಗುವ ಯತ್ನ ಮಾಡುತ್ತಿದೆ. ಎಸ್ಸಿ,ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರಿಗಾಗಿಯೇ ಕಾಂಗ್ರೆಸ್ ಈ ಬಾರಿ ಲೀಡರ್ಶಿಪ್ ಡೆವಲಪ್ಮೆಂಟ್ ಮಿಷನ್ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದ್ರೇ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಮುಖಂಡರ ಪೋಟೋ ಹಾಕಿಲ್ಲವೆಂದು ಕಾರ್ಯಕರ್ತರು ಗಲಾಟೆ ಮಾಡೋ ಮೂಲಕ ಮತ್ತೊಮ್ಮೆ ಬಳ್ಳಾರಿ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸಿದ್ದಾರೆ.

Latest Videos

undefined

ಬಳ್ಳಾರಿ, ರಾಯಚೂರು, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆ ಮುಖಂಡರ ಸಭೆಯಲ್ಲಿ ಅಸಮಾಧಾನ.. ಎಐಸಿಸಿ ಸದಸ್ಯರ ಮುಂದೆಯೇ ಬಳ್ಳಾರಿ ಕಾರ್ಯಕರ್ತರ ಅಸಮಾಧಾನ ಸ್ಪೋಟ.. ಭಾಷಣದಲ್ಲಿಯೇ ಕೈಮುಗಿದು ಸುಮ್ಮನಿರಿ ಎಂದ ಸಚಿವ ನಾಗೇಂದ್ರ.. ಹೌದು, ಬಳ್ಳಾರಿ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಭಿತಾಗಿದೆ. ವಿಧಾನ ಸಭೆ ಚುನಾವಾಣೆ ಮಾದರಿಯಲ್ಲಿ ಲೋಕಸಭೆ ಚುನಾವಣೆಗೂ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಗಟ್ಟಿ ಮಾಡುವ ನಿಟ್ಟಿನಲ್ಲಿ  ಎಸ್ಟಿ ಮೀಸಲು ಕ್ಷೇತ್ರವಾಗಿರೋ ಬಳ್ಳಾರಿ, ರಾಯಚೂರು ಜಿಲ್ಲೆಯ ಮುಖಂಡರಿಗಾಗಿ ವಿಶೇಷವಾದ ಲೀಡರ್ ಶಿಪ್ ಡೆವಲಪ್ಮೆಂಟ್ ಮಿಷನ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಭಾರಿ ಮುಜುಗರ: ಸತೀಶ್‌ ಜಾರಕಿಹೊಳಿ ದಸರಾ ಟೀಮ್‌ನಿಂದ ತಿರುಗೇಟು!

ಸಿಡ್ಲ್ಯೂಸಿ ಸದಸ್ಯ ರಾಜು, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ನೇತೃತ್ವದಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ  ಪ್ರತಿಯೊಬ್ಬ ಕಾರ್ಯಕರ್ತ ಲೀಡರ್ ಎನ್ನುವ ಸಂದೇಶ ಸಾರುವ  ಪ್ರಯತ್ನ ಇದಾಗಿತ್ತು. ಆದ್ರೇ, ಕಾರ್ಯಕ್ರದಲ್ಲಿ ಸಚಿವ ನಾಗೇಂದ್ರ ಕಾಂಗ್ರೆಸ್ ಎಸ್ಸಿ,ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರ ಪರ ಇದೆ ಎಂದು ಭಾಷಣ ಮಾಡುತ್ತಿರವಾಗಲೇ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ. ರಾಷ್ಟ್ರದಲ್ಲಿಯೇ ಏಕೈಕ ಮುಸ್ಲಿಂ ರಾಜ್ಯಸಭೆ ಸದಸ್ಯ ಬಳ್ಳಾರಿಯವರೇ ಆದ ನಾಸೀರ್ ಹುಸೇನ್ ಅವರ ಪೋಟೋ ಬ್ಯಾನರ್ ನಲ್ಲಿ ಯಾಕೆ ಹಾಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಪಸಂಖ್ಯಾತರ ಮತಕಕ್ಕಾಗಿ ಬೇಕು. ಆದ್ರೇ, ಅವರ ಪೋಟೋ ಯಾಕೆ ಹಾಕಲ್ಲವೆಂದು ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುಮಾಯೂನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು

ನಾಸೀರ್ ಹುಸೇನ್ ಪೋಟೋ ಮಿಸ್: ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಅವರ ಪೋಟೋಗಾಗಿ ಮಾಜಿ ಬುಡಾ ಅಧ್ಯಕ್ಷ ಹುಮಾಯೂನ್ ಖಾನ್ ಅಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಕೆಲ ಕಾಂಗ್ರೆಸ್ ಕಾರ್ಯಕರ್ತರ ತಮ್ಮ ತಮ್ಮ ನಾಯಕರ ಪೋಟೋ ಇಲ್ಲವೆಂದು ಜೋರು ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ್ರು. ಈ ವೇಳೆ ನಾಗೇಂದ್ರ ವೇದಿಕೆಯಲ್ಲಿಯೇ ಕೈಮುಗಿದು ಇದು ಕಾಂಗ್ರೆಸ್ ಇದೊಂದು ದೊಡ್ಡ ಸಮುದ್ರ ಇಲ್ಲಿ ಯಾರನ್ನು ಬೇಕೆಂದು ಬಿಡೋದಿಲ್ಲ. ಶಿಷ್ಟಾಚಾರದ ಪ್ರಕಾರವೇ ಪೋಟೋ ಹಾಕಿರುತ್ತಾರೆ. ಇನ್ಮೂಂದೆ ಬಳ್ಳಾರಿ ಕಮೀಟಿಯಿಂದಲೇ ಪ್ರತ್ಯೇಕ ಶಿಷ್ಟಾಚಾರ ಮಾಡೋ ಮೂಲಕ ಪ್ರತಿಯೊಬ್ಬರ ಪೋಟೋ ಹಾಕುತ್ತೇನೆ ಎಂದರು.

ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್..ಡ್ಯಾಶ್..: ಡಿಕೆಶಿಗೆ ತಿವಿದ ಮಾಜಿ ಸಚಿವ ಸಿ.ಟಿ. ರವಿ

ಎಸ್ಸಿ,ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರಿಗಾಗಿಯೇ ಕಾರ್ಯಕ್ರಮ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಐದಕ್ಕೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ರು. ನಿಗಮ ಮಂಡಳಿ ನೀಡ್ತಿಲ್ಲ ಮತ್ತು ಶಾಸಕ ಸಚಿವರು ಕೈಗೆ ಸಿಗೋದಿಲ್ಲ ಅನ್ನೋ ಅಸಮಾಧಾನ ಕಾಂಗ್ರೆಸ್ ಕಾರ್ಯಕರ್ತರ ಮನದಲ್ಲಿತ್ತು. ಇದೀಗ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅದು ಸ್ಟೋಟವಾಗಿದೆ. ಆದ್ರೇ, ಇದು ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

click me!