ರಾಜ್ಯ ಆಳೋದು ಒಂದೇ, ಈ ಶಾಸಕನ ಕಂಟ್ರೋಲ್‌ ಮಾಡೋದು ಒಂದೇ: ಬಿಜೆಪಿ ಶಾಸಕ ಅಭಯ ಪಾಟೀಲ

Published : Jun 07, 2023, 08:28 PM ISTUpdated : Jun 07, 2023, 08:58 PM IST
ರಾಜ್ಯ ಆಳೋದು ಒಂದೇ, ಈ ಶಾಸಕನ ಕಂಟ್ರೋಲ್‌ ಮಾಡೋದು ಒಂದೇ: ಬಿಜೆಪಿ ಶಾಸಕ ಅಭಯ ಪಾಟೀಲ

ಸಾರಾಂಶ

ಯಾವುದೇ ವರ್ಕ ಆರ್ಡರ್‌ ಇಲ್ಲದೆ ಕೆಲಸ ಮಾಡಿಸಿದ್ದಾರೆ. ಈಗಾಗಲೇ ಅವುಗಳನ್ನು ಸ್ಥಗಿತಗೊಳಿಸಿದ್ದಾರೆ. ಕಳಪೆ ಕಾಮಗಾರಿಯಾಗಿದ್ದಾವೆ. ಸ್ಮಾರ್ಟ್‌ ಸಿಟಿ ಸಮಸ್ಯೆ ಇದೆ. ಬುಡಾದಲ್ಲಿ, ಮಹಾ ನಗರ ಪಾಲಿಕೆಯಲ್ಲಿ ಸಮಸ್ಯೆ ಇದೆ. ಎಲ್ಲ ಕಡೆ ಸಮಸ್ಯೆ ಸೃಷ್ಠಿ ಮಾಡಿದ್ದಾನೆ ಆ ಬಿಜೆಪಿಯ ಒಬ್ಬ ಶಾಸಕ. ಅದನ್ನು ರಿಪೇರಿ ಮಾಡಲು ಬಹಳ ಸಮಯಬೇಕಾಗುತ್ತದೆ: ಅಭಯ ಪಾಟೀಲ 

ಬೆಳಗಾವಿ(ಜೂ.07):  ಪ್ರಧಾನಿ ಮೋದಿ ಅವರನ್ನು ನಾವು ಮೆಚ್ಚಿಸಬಹುದು, ಆದರೆ, ಬೆಳಗಾವಿಯಲ್ಲಿನ ಬಿಜೆಪಿ ಶಾಸಕನನನು ಮೆಚ್ಚಿಸುವುದು ಅಷ್ಟುಸುಲಭವಲ್ಲ, ಅನು ಟಫ್‌. ಮೋದಿ, ಶಾ ಅವರು ಕೇಳಬಹುದು, ಆದರೆ, ಈ ವ್ಯಕ್ತಿಯ ಆಡಳಿತ ನೋಡಿದ್ದೇವೆ. ಅದು ಹಾರೀಬಲ್‌ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪರೋಕ್ಷವಾಗಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನ ಕೈಯಲ್ಲಿರುವ ಅಧಿಕಾರಿಗಳನ್ನು ಬದಲಾವಣೆ ಮಾಡುವುದು ದೊಡ್ಡ ಚಾಲೆಂಜ್‌ ಇದೆ ನಮಗೆ. ಇಡೀ ರಾಜ್ಯ ಆಳುವುದು ಒಂದೇ ಈ ಎಂಎಲ್‌ಎ ಕಂಟ್ರೋಲ್‌ ಮಾಡುವುದು ಒಂದೇ ನಮಗೆ ಎಂದರು.

ಸರಳ ಪ್ರಕ್ರಿಯೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಯಾವುದೇ ವರ್ಕ ಆರ್ಡರ್‌ ಇಲ್ಲದೆ ಕೆಲಸ ಮಾಡಿಸಿದ್ದಾರೆ. ಈಗಾಗಲೇ ಅವುಗಳನ್ನು ಸ್ಥಗಿತಗೊಳಿಸಿದ್ದಾರೆ. ಕಳಪೆ ಕಾಮಗಾರಿಯಾಗಿದ್ದಾವೆ. ಸ್ಮಾರ್ಟ್‌ ಸಿಟಿ ಸಮಸ್ಯೆ ಇದೆ. ಬುಡಾದಲ್ಲಿ, ಮಹಾ ನಗರ ಪಾಲಿಕೆಯಲ್ಲಿ ಸಮಸ್ಯೆ ಇದೆ. ಎಲ್ಲ ಕಡೆ ಸಮಸ್ಯೆ ಸೃಷ್ಠಿ ಮಾಡಿದ್ದಾನೆ ಆ ಬಿಜೆಪಿಯ ಒಬ್ಬ ಶಾಸಕ. ಅದನ್ನು ರಿಪೇರಿ ಮಾಡಲು ಬಹಳ ಸಮಯಬೇಕಾಗುತ್ತದೆ ಎಂದರು.

ಭ್ರಷ್ಟಾಚಾರ ನಡೆದಿರುವ ಪ್ರಕರಣದಲ್ಲಿ ಸಂಪೂರ್ಣ ತನಿಖೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ಜೂ. 7 ರಂದು ಸಭೆ ನಡೆಸಿ ನೋಡುತ್ತೇವೆ. ಅಲ್ಲಿ ಏನೇನೂ ಸಮಸ್ಯೆ ಹೊರಗಡೆ ಬರುತ್ತದೆ ಎಂಬುದನ್ನು ಕಾದು ನೋಡಬೇಕು. ಕಾನೂನು ಬಿಟ್ಟು ಕೆಲಸ ಮಾಡಿದ ಅಧಿಕಾರಿಗಳಿಗೆ ಜಿಲ್ಲೆಯಿಂದ ಹೊರಗೆ ಕಳುಹಿಸಿ ಒಳ್ಳೆಯ ಅಧಿಕಾರಿಗಳನ್ನು ಜನಪರ ಕೆಲಸ ಮಾಡುವ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಾಕ್‌ ಸ್ವಾತಂತ್ರ್ಯ ಕಡಿವಾಣಕ್ಕೆ ದ್ವೇಷ ಭಾಷಣ ಮಸೂದೆ: ಆರ್.ಅಶೋಕ್ ಕಿಡಿ
ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌