Chikkamagaluru: ದತ್ತಮಾಲಾಧಾರಿ ಸಿ.ಟಿ.ರವಿಯಿಂದ ಕಾಫಿನಾಡಿನ ಮನೆಗಳಲ್ಲಿ ಭಿಕ್ಷಾಟನೆ!

By Govindaraj S  |  First Published Dec 25, 2023, 10:20 AM IST

ಜಿಲ್ಲೆಯ ಹಲವೆಡೆ ಅದ್ಧೂರಿಯಾಗಿ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ದತ್ತಮಾಲಾಧಾರಿ ಸಿ.ಟಿ.ರವಿ ಭಿಕ್ಷಾಟನೆ ಮಾಡಿದ್ದಾರೆ. ಹೌದು! ಮನೆ-ಮನೆಗೆ ತೆರಳಿ ಸಿ.ಟಿ.ರವಿ ಪಡಿ ಸಂಗ್ರಹಿಸಿದ್ದಾರೆ. 


ಚಿಕ್ಕಮಗಳೂರು (ಡಿ.25): ಜಿಲ್ಲೆಯ ಹಲವೆಡೆ ಅದ್ಧೂರಿಯಾಗಿ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ದತ್ತಮಾಲಾಧಾರಿ ಸಿ.ಟಿ.ರವಿ ಭಿಕ್ಷಾಟನೆ ಮಾಡಿದ್ದಾರೆ. ಹೌದು! ಮನೆ-ಮನೆಗೆ ತೆರಳಿ ಸಿ.ಟಿ.ರವಿ ಪಡಿ ಸಂಗ್ರಹಿಸಿದ್ದಾರೆ. ಚಿಕ್ಕಮಗಳೂರು ನಗರದ ನಾರಾಯಣಪುರದಲ್ಲಿ ಪಡಿ ಸಂಗ್ರಹಿಸುತ್ತಿರುವ ಸಿ.ಟಿ.ರವಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳ ಸಾಥ್ ನೀಡಿದ್ದಾರೆ.  9 ಮನೆಯಲ್ಲಿ ಭಿಕ್ಷೆ ಬೇಡಿ ಪಡಿ ಸಂಗ್ರಹಿಸಿದ ಸಿ.ಟಿ.ರವಿ, ಆ ಪಡಿ ಸಂಗ್ರಹ ವಸ್ತುಗಳನ್ನ ಇರುಮುಡಿ ರೂಪದಲ್ಲಿ ನಾಳೆ ದತ್ತಪೀಠಕ್ಕೆ ಹೊತ್ತೊಯ್ಯುತ್ತಾರೆ. ಅಕ್ಕಿ, ಬೇಳೆ, ಕಾಯಿ, ಬೆಲ್ಲ ಎಲೆ, ಅಡಿಕೆಯನ್ನು ಚಿಕ್ಕಮಗಳೂರು ನಗರದ ನಾರಾಯಣಪುರ ಬಡಾವಣೆಯಲ್ಲಿ ಜನರು ಸಿ.ಟಿ.ರವಿ ಅವರಿಗೆ ನೀಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ದತ್ತಮಾಲೆ ಧರಿಸಿದ ಆರ್.ಅಶೋಕ್: ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಅವರು ಭಾನುವಾರ ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಧರಿಸಿದರು. ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತ ಜಯಂತಿ ಮೊದಲ ದಿನವಾದ ಭಾನುವಾರದಂದು ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಸಂಜೆ ಆರ್‌. ಅಶೋಕ್‌ ದತ್ತಮಾಲೆಯನ್ನು ಧರಿಸಿದರು.

Latest Videos

undefined

ಯಾರು ಬುರುಡೆ ಬಿಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತು: ಸಿದ್ದುಗೆ ಸಿಂಹ ತಿರುಗೇಟು!

ದತ್ತಮಾಲೆ ಧರಿಸಿದ ಭಕ್ತರು ಸೋಮವಾರ ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು, ಮಂಗಳವಾರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದ ಬಳಿಕ ದತ್ತಮಾಲೆ ವಿಸರ್ಜಿಸುವುದು ಪ್ರತೀತಿ. ಹಾಗಾಗಿ ಎರಡು ದಿನಗಳ ಈ ಕಾರ್ಯಕ್ರಮಗಳಲ್ಲಿ ಆರ್‌. ಆಶೋಕ್‌ ಭಾಗವಹಿಸುವ ಸಾಧ್ಯತೆ ಇದೆ.

ದತ್ತಮಾಲೆ ಧರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌. ಅಶೋಕ್‌, ದತ್ತಪೀಠ ಎನ್ನುವ ಕುರುಹುಗಳು ಅಲ್ಲಿವೆ. ಆದರೆ, ದತ್ತಪೀಠ ಸೇರಿದಂತೆ ಶ್ರೀರಂಗಪಟ್ಟಣ, ಅಯೋಧ್ಯ, ಮಥುರಾ, ಕಾಶಿ ಹೀಗೆ ಹಲವೆಡೆ ಅಕ್ರಮಣ ಆಗಿದೆ. ಇದೊಂದು ಶ್ರದ್ಧಾ ಕೇಂದ್ರ, ನಮ್ಮ ಸರ್ಕಾರ ಇದ್ದಾಗ ದತ್ತಪೀಠಕ್ಕೆ ಅರ್ಚಕರ ನೇಮಕ ಮಾಡಿತ್ತು. ಇದು, ಧಾರ್ಮಿಕ ಸ್ಥಳ ಆಗಬೇಕು. ಆದರೆ, ಆ ಭಾವನೆಯನ್ನು ಮಟ್ಟ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶ ಇತಿಹಾಸದ ಪುಟದಲ್ಲಿ ಬರೆಯುವಂತಿರಲಿ: ಬಿ.ವೈ.ವಿಜಯೇಂದ್ರ

ನ್ಯಾಯಾಲಯ ದಾಖಲೆಗಳು ದತ್ತಪೀಠ ಬೇರೆ, ದರ್ಗಾ ಬೇರೆ ಎಂದು ಹೇಳುತ್ತಿವೆ. ನ್ಯಾಯಾಧೀಶರನ್ನು ನೇಮಕ ಮಾಡಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕು. ಹಿಂದೂಗಳ ಭಾವನೆ ಕೆರಳಿಸುವ ಕೆಲಸ ಆಗಬಾರದು. ಇದು ಹಿಂದೂಸ್ಥಾನ, ದತ್ತಪೀಠ ಆಗಿಯೇ ಉಳಿಯಬೇಕು. ದತ್ತಪೀಠದ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು ಎಂದು ಹೇಳಿದರು.

click me!