ಅಂಬರೀಷ್ ಸಹ ವಿಲನ್ ಇದ್ರು ನಂತ್ರ ಹೀರೋ ಆದ್ರು, ನಾನು ಹಾಗೇ ಆಗುತ್ತೇನೆ: ಯತ್ನಾಳ್‌

By Kannadaprabha NewsFirst Published Dec 25, 2023, 8:23 AM IST
Highlights

ನಾನು ಯಾವತ್ತಿದ್ರು ವಿಲನ್, ನಾನು ಹೀರೋ ಅಲ್ಲ, ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತು ಇರುತ್ತೆ, ಇಲ್ಲದಿದ್ರೆ ಇಲ್ಲ ಎಂದು ಬಿಜೆಪಿಯ ಫೈರ್‌ ಬ್ರ್ಯಾಂಡ್‌ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮನ್ನು ವಿಲನ್‌ಗೆ ಹೋಲಿಕೆ ಮಾಡಿಕೊಂಡು ಮಾತನಾಡಿದ್ದಾರೆ. 

ಕಲಬುರಗಿ (ಡಿ.25): ನಾನು ಯಾವತ್ತಿದ್ರು ವಿಲನ್, ನಾನು ಹೀರೋ ಅಲ್ಲ, ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತು ಇರುತ್ತೆ, ಇಲ್ಲದಿದ್ರೆ ಇಲ್ಲ ಎಂದು ಬಿಜೆಪಿಯ ಫೈರ್‌ ಬ್ರ್ಯಾಂಡ್‌ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮನ್ನು ವಿಲನ್‌ಗೆ ಹೋಲಿಕೆ ಮಾಡಿಕೊಂಡು ಮಾತನಾಡಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ತಮ್ಮನ್ನು ಆಲ್‌ ಪಾರ್ಟಿ ವಿಪಕ್ಷ ನಾಯಕ ಎಂದು ತಾವೇ ಬಣ್ಣಿಸಿಕೊಂಡರಲ್ಲದೆ ಎಲ್ಲದಕ್ಕೂ ಒಂದು ಅಂತ್ಯ ಅಂತ ಇರುತ್ತೆ. ಅದು 2024 ಲೋಕಸಭೆ ಚುನಾವಣೆ ನಂತರದಲ್ಲಿ ಎಲ್ಲರು ಅನುಭವಿಸುತ್ತಾರೆಂದು ಒಗಟಾಗಿ ಹೇಳಿದರು.

ವಿಲನ್ ಇಲ್ಲದಿದ್ರೆ ಹೀರೋ ಯಾರ ಜೋಡಿ ಫೈಟ್ ಮಾಡ್ತಾನೆ‌? ಅಂಬರೀಷ್ ಸಹ ವಿಲನ್ ಇದ್ರು ನಂತ್ರ ಹೀರೋ ಆದ್ರು, ಅದೇ ತರಹ ನಾನು ಆಮೇಲೆ ಹೀರೋ ಆಗಬಯಸೋದು ಎಂದು ಹೇಳುತ್ತ ಬಿಜೆಪಿಯ ಆಂತರಿಕ ಕಚ್ಚಾಟದ ಹಲವು ಸಂಗತಿಗಳನ್ನ ಒಗಟಾಗಿ ವಿಲನ್‌, ಹಿರೋ ಪರಿಕಲ್ಪನೆಯಲ್ಲಿ ಸೋದಾಹರಣವಾಗಿ ವಿವರಿಸಿದರು. ರಾಜ್ಯ ಬಿಜೆಪಿ ಪಧಾಧಿಕಾರಿ‌ ನೇಮಕದಲ್ಲಿ ಬಿಎಸ್ ವೈ ಮೇಲುಗೈ ವಿಚಾರ‌ವಾಗಿ ಮಾತನಾಡಿದ ಅವರು 2024ರ ವರೆಗೆ ತಡೆಯಿರಿ, ಆಮೇಲೆ ಎಲ್ಲವೂ ಬದಾಲವಣೆಯಾಗುತ್ತೆ, ಅವರು ದೊಡ್ಡ ದೊಡ್ಡ ಹುದ್ದೆ ತೆಗೆದುಕೊಂಡಿದ್ದಾರೆ. ಪರಿಷತ್ ವಿಪಕ್ಷ ನಾಯಕ ಸ್ಥಾನವೊಂದು ಎನ್. ರವಿಕುಮಾರ್ ಗೆ ಕೊಡುತ್ತಾರೆ. ರವಿಕುಮಾರ್ ಯಡಿಯೂರಪ್ಪ ಶಿಷ್ಯ ಅಲ್ವಾ? ಅದಕ್ಕೇ ಆ ಹುದ್ದೆ ಅವರಿಗೆ ಗಿಫ್ಟ್‌. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಅವಾಗ ಬದಲಾವಣೆಯಾಗುತ್ತೆ ಎಂದರು.

ಕಾಂಗ್ರೆಸ್ ಗ್ಯಾರಂಟಿಗಳಿಂದ ರೈತ ಕುಟುಂಬಗಳಿಗೆ ಹೆಚ್ಚು ಅನುಕೂಲ: ಎಚ್.ಆಂಜನೇಯ

ನಾನೀಗ ಸ್ವತಂತ್ರ: ರಾಜ್ಯದಲ್ಲಿರುವ ಎಲ್ಲಾ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆಂದಿದ್ದಾರೆ. ಒಂದು ಕಡಿಮೆಯಾದ್ರೂ ಮುಂದೆ ರಾಜಸ್ಥಾನ, ಮಧ್ಯಪ್ರದೇಶದಲ್ಲಾದಂತೆ ಕರ್ನಾಕದಲ್ಲೂ ಆಗುತ್ತದೆ. ಇದು ಮೀಲಾಪಿ ಕುಸ್ತಿಯಿದೆ ಎಂದರು. ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಹೋಗುತ್ತದೆ. ಕನಕಪುರದಲ್ಲಿ ಅಶೋಕ ಠೇವಣಿ ಹೊಗುತ್ತದೆ ಅಂದ್ರೆ ಏನ್ ಅರ್ಥ? ಪಾಪ ಸೋಮಣ್ಣ ಬೆಂಗಳೂರಲ್ಲಿ ಗೆಲ್ತಿದ್ರು, ಅವರನ್ನೆ ಎರಡೂ ಕಡೆ ನಿಲ್ಲಿಸಿ ಸೋಲಿಸಿದ್ರು ಎಂದು ಪಕ್ಷದಲ್ಲಿನ ರಾಜಕೀಯವನ್ನು ವಿವರಿಸಿದರು. ನಾನು ಏನ್ ಮಾತನಾಡದ್ರು ನಂಗೆ ಯಾರು ನೋಟಿಸ್ ಗಿಟೀಸ್‌ ಕೊಡೋದಿಲ್ಲವೆಂದು ಹೇಳುತ್ತಲೇ ತಾವೀಗ ಸರ್ವ ಸ್ವತಂತ್ರ ಎಂದರು.

ಸಿದ್ದುಗೆ ಅರವು ಮರವು: ಹಿಜಾಬ್ ನಿಷೇಧ ವಾಪಸ್ ಬಗ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯಾತ್ನಾಳ್‌ ಸಿಎಂ ಸಿದ್ದರಾಮಯ್ಯ ಅವರಿಗೆ ಅರಿವು ಮರಿವು ಶುರುವಾಗಿದೆ, ಮೊನ್ನೆ ವಾಪಸ್ ಅಂದ್ರು ನಿನ್ನೆ ಬೇರೆ ಮಾತನಾಡಿದ್ದಾರೆ. ಹಿಜಾಬ್ ನಿಷೇಧ ವಾಪಸ್ ಆದ್ರೆ ನಾನೇ ಕೇಸರಿ ಶಾಲಿಗೆ ಕರೆ ನೀಡುತ್ತೇನೆ, ‌ನಮ್ಮ ಹುಡುಗರಿಗೆ ಕೇಸರಿ ಶಾಲು ಹಾಕಿಕೊಳ್ಳೋಕೆ ಹೇಳುತ್ತೇನೆಂದರು.

ಅವ್ರು ಹಿಬಾಜ್ ಧರಿಸಿದ್ರೆ ನಾವು ಕೇಸರಿ ಶಾಲು ಧರಿಸುತ್ತೇವೆ: ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು

ಸಿದ್ದುಗೂ ಮೋದಿಯೇ ಪಿಎಂ ಆಗಬೇಕೆಂಬ ಒಲವು: ಕಾಂಗ್ರೆಸ್‌ನವರು ಮತ್ತೆ ಮುಸ್ಲಿಂ ವೋಟ್ ಮೇಲೆ ಗೆಲ್ಲಬೇಕು ಎಂದಿದ್ದಾರೆ. ಅದು ಆಗೋದಿಲ್ಲ, ತುಷ್ಟಿಕರಣ ಮಾಡಿದ್ರೆ ಬಿಜೆಪಿ ಬರುತ್ತೆ ಅಂತ ಅವರಿಗೂ ಗೊತ್ತು. ರಾಹುಲ್ ಗಾಂಧಿ ಹುಚ್ಚ , ಪ್ರಧಾನಿಯಾದ್ರೆ ಅವರ (ಸಿದ್ದು) ಕುರ್ಚಿಗೆ ಕಂಟಕ ಇದೆ, ಸಿಎಂ ಕುರ್ಚಿಗೆ ಹತ್ತಲು ಇ‌ನ್ನೊಂದು ಎತ್ತು ತಯ್ಯಾರಿದೆ, ಅದಕ್ಕೆ ಅವರಿಗೂ ಮೋದಿ ಪ್ರಧಾನಿಯಾದ್ರೆ ಒಳೆಯದು ಎನ್ನೋ ಭಾವನೆಯಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

click me!