'ಹೆಸರನ್ನ ಅಲ್ಲೇ ಇಟಗೊಂಡು ಕುಂದ್ರಿ' : ಬಿಜೆಪಿ ಪ್ರಚಾರ ಸಮಿತಿಯಲ್ಲಿ ಸೇರಿಸದ್ದಕ್ಕೆ ಸ್ವಪಕ್ಷದ ವಿರುದ್ಧವೇ ಯತ್ನಾಳ್ ಗರಂ

By Ravi JanekalFirst Published Mar 21, 2023, 8:46 AM IST
Highlights

ಬಿಜೆಪಿ ಪ್ರಚಾರ ಸಮಿತಿ ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವುದಕ್ಕೆ ಹಲವು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಫೈರ್‌ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳರ ಹೆಸರು ಪಟ್ಟಿಯಲ್ಲಿ ಇದುವರೆಗೆ ಕಾಣಿಸದಿರುವುದರಿಂದ ಸ್ವಪಕ್ಷದ ವಿರುದ್ಧವೇ  ಯತ್ನಾಳ್ ಕೆಂಡಾಮಂಡಲರಾದರು.

ಕಲಬುರಗಿ (ಮಾ.21) : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿವಿಧ ಪಕ್ಷಗಳು ಪ್ರಚಾರ ಸಮಿತಿ ಪಟ್ಟಿ ಸಿದ್ಧಪಡಿಸಿ ಚುನಾವಣೆಗೆ ಅಣಿಯಾಗಿವೆ. ಅದರಲ್ಲೂ  ಬಿಜೆಪಿ ಈ ಬಾರಿ ಮತ್ತೊಮ್ಮೆ ಗದ್ದುಗೆ ಏರಲು ರಣತಂತ್ರ ರೂಪಿಸುತ್ತಿದೆ. ಈಗಾಗಲೇ ಚುನಾವಣೆಯನ್ನು ಎದುರಿಸಲು ಪ್ರಚಾರ ಸಮಿತಿ, ನಿರ್ವಹಣಾ ಸಮಿತಿ ರಚಿಸಿದ್ದು ಬಿಜೆಪಿ ನಾಯಕರಿಗ ಜವಾಬ್ದಾರಿಗಳನ್ನು ಹಂಚಿ ಚುನಾವಣೆಗೆ ಸಜ್ಜುಗೊಳಿಸಿದೆ

ಬಿಜೆಪಿ ಪ್ರಚಾರ ಸಮಿತಿ ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವುದಕ್ಕೆ ಹಲವು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಫೈರ್‌ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳರ ಹೆಸರು ಪಟ್ಟಿಯಲ್ಲಿ ಇದುವರೆಗೆ ಕಾಣಿಸದಿರುವುದರಿಂದ ಸ್ವಪಕ್ಷದ ವಿರುದ್ಧವೇ  ಯತ್ನಾಳ್ ಕೆಂಡಾಮಂಡಲರಾದರು.

ಪಂಚಮಸಾಲಿ ಮೀಸಲಾತಿ; ಮಾ.23ಕ್ಕೆ ಘೋಷಿಸುವ ನಿರೀಕ್ಷೆ: ಯತ್ನಾಳ್

ಸೇಡಂನಲ್ಲಿ ನಡೆದ ಬಸವೇಶ್ವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಈ ಕುರಿತು ಪ್ರಸ್ತಾಪಿಸಿರುವ ಯತ್ನಾಳ್ ಬಿಜೆಪಿ ಪಕ್ಷದ ವಿರುದ್ಧ ಬಹಿರಂಗವಾಗಿ ಟೀಕಿಸಿದರು. 

ಪ್ರಚಾರ ಸಮಿತಿಯ ಟೀಂನಲ್ಲಿ ನನ್ನ ಹೆಸರು ಹಾಕಿಲ್ಲ. ಹೆಸರನ್ನು ಅಲ್ಲೆ ಇಟಗೊಂಡು ಕುಂದ್ರಿ ಅಂತ ಹೇಳಿದ್ದೀನಿ. ಯಾಕಂದ್ರ ನಾ ಇದ್ರೆ ಸಮಸ್ಯೆ ಅವರಿಗೆಲ್ಲಾ. ಅವರ ಭಾಷಣಾನೇ ಯಾರೂ ಕೇಳಲ್ಲ.ಯತ್ನಾಳರನ್ನ ನಮ್ಮದರಾಗ ಹಾಕಬೇಡಿ, ನಿಮ್ಮದರಾಗ ಹಾಕಬೇಡಿ ಅಂತ ಎಲ್ಲಾದರಾಗ ಬಿಟ್ಟಾರ. ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಾಗೂ ಮಂತ್ರಿಯೊಬ್ಬರು ನನ್ನ ಹೆಸರು ತಗೊಲಿಲ್ಲ ಜನರೇ ಹುಯ್ ಅಂತ ಎದ್ದು ನಿಂತು ಯತ್ನಾಳ ಗೌಡರ ಹೆಸರು ತಗೊಬೇಕು ಅಂದ್ರು ಆದರೆ ನಾನು ನೇರ ಮನುಷ್ಯ ಅದಕ್ಕೆ ಅವರಿಗೆ ಆಗಿಬರಲ್ಲ. ನೋಡೋಣ ಏನು ಮಾಡ್ತಾರೋ ಎಂದು ಬಿಜೆಪಿ ನಡೆ ವಿರುದ್ಧ ಕೆಂಡಕಾರಿದರು. 

'ಅಧಿಕಾರಕ್ಕೆ ಬಂದ್ರೆ ಎಲ್ಲಾ ಮದರಸಾಗಳನ್ನ ಮುಚ್ತೇವೆ..' ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ!

ಚುನಾವಣೆಯ ಹೊತ್ತಲ್ಲಿ ಬಸನಗೌಡ  ಪಾಟೀಲ್ ಯತ್ನಾಳ್ ಬಹಿರಂಗವಾಗಿ ಟೀಕಿಸಿರುವುದು ಇದೀಗ ಬಿಜೆಪಿಗೆ ಹೊಸ ತಲೆನೋವು ಶುರುವಾಗಿರುವುದಂತೂ ನಿಜ.

click me!