ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಕಾಂಗ್ರೆಸ್‌ನ ನಾಲ್ಕನೇ ಗ್ಯಾರಂಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಇದೀಗ ಬೋಗಸ್ ಕಾರ್ಡ್ ಗ್ಯಾರಂಟಿ ಸರಣಿ ಪ್ರಾರಂಭಿಸಿದೆ.
ಹುಬ್ಬಳ್ಳಿ (ಮಾ.21): ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಕಾಂಗ್ರೆಸ್‌ನ ನಾಲ್ಕನೇ ಗ್ಯಾರಂಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಇದೀಗ ಬೋಗಸ್ ಕಾರ್ಡ್ ಗ್ಯಾರಂಟಿ ಸರಣಿ ಪ್ರಾರಂಭಿಸಿದೆ. ಈಗಾಗಲೇ ಅವರು ಮೂರು ಬೋಗಸ್ ಕಾರ್ಡ್ ಘೋಷಣೆ ಮಾಡಿದ್ದರು. ಇದೀಗ ಬೆಳಗಾವಿಯಲ್ಲಿ ಬಿಡುಗಡೆಯಾಗಿರುವುದು ನಾಲ್ಕನೇ ಬೋಗಸ್ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಸ್ಥಾನದಲ್ಲಿ ಪದವೀಧರರಿಗೆ ಪ್ರತಿತಿಂಗಳು .3,500 ಮಾಸಾಶನ ಕೊಡುತ್ತೇವೆ ಎಂದಿದ್ದರೂ ಈವರೆಗೂ ಕೊಟ್ಟಿಲ್ಲ.
ಛತ್ತೀಸ್‌ಗಡನಲ್ಲಿ 1500 ಕೊಡುತ್ತೇವೆ ಅಂತ ಹೇಳಿದ್ದರು. ಅದನ್ನೂ ಈವರೆಗೆ ಕೊಟ್ಟಿಲ್ಲ. ಹೀಗೆ ಅವರು 4 ರಾಜ್ಯಗಳಲ್ಲಿ ಹೇಳಿದಂತೆ ಎಲ್ಲೂ ನಡೆದುಕೊಂಡಿಲ್ಲ. ಅವರ ಭರವಸೆಗಳ ಪಟ್ಟಿಯನ್ನು ನಾವು ಶೀಘ್ರ ಬಿಡುಗಡೆ ಮಾಡುತ್ತೇವೆ ಎಂದರು. ಕಾಂಗ್ರೆಸ್‌ನವರು ಬೋಗಸ್, ಸುಳ್ಳು ಹೇಳಲು ಅವರ ಹತಾಶೆಯೇ ಕಾರಣ. ಅವರು ಗೆಲ್ಲಲು ಅಸಾಧ್ಯವಾಗಿರುವ ಕಾರಣ ಬೋಗಸ್ ಘೋಷಣೆ ಮಾಡುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನು ಮೋಸ ಮಾಡಲು ಹೊರಟ್ಟಿದ್ದಾರಷ್ಟೆ. ಇದನ್ನು ಜನ ನಂಬಲ್ಲ ಎಂದರು. ಹಿಂದೆ ಇವರೇ 2013ರಲ್ಲಿ ಹತ್ತು ಕೆ.ಜಿ. ಅಕ್ಕಿ ಕೊಡುತ್ತಿದ್ದರು.
undefined
ಕಾಂಗ್ರೆಸ್‌ನವರಿಗೆ ಮತ ಕೇಳುವ ಯಾವ ನೈತಿಕ ಹಕ್ಕಿಲ್ಲ: ಬಿ.ಎಸ್.ಯಡಿಯೂರಪ್ಪ
ಬಳಿಕ ಇವರೇ 5 ಕೆ.ಜಿ. ಅಕ್ಕಿ ಕೊಡುವುದನ್ನು ನಿಲ್ಲಿಸಿದರು. ಚುನಾವಣೆ ಬಂದಾಗ ಏಳು ಕೆ.ಜಿ. ಅಕ್ಕಿಯನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಚುನಾವಣೆ ಬಂದಾಗ ಈ ರೀತಿ ಬೋಗಸ್ ನೀತಿ ಮಾಡಿ, ಸುಳ್ಳು ಹೇಳುವುದು ಕಾಂಗ್ರೆಸ್‌ನ ಗುಣಧರ್ಮ ಎಂದರು. ರಾಹುಲ್ ಗಾಂಧಿ ಮಹಾನ್ ನಾಯಕರು. ಅವರು ಹೊರದೇಶಕ್ಕೆ ಹೋಗಿ ಬಂದವರು, ಈ ದೇಶದ ಬಗ್ಗೆ ಗೌರವ ಇರುವವರು. ವಿದೇಶಕ್ಕೆ ಹೋದಾಗ ಅವರು ಕೀಳುಮಟ್ಟದಲ್ಲಿ ಮಾತನಾಡುತ್ತಾರೆ. ಅವರಿಗೆ ಕರ್ನಾಟಕದ ಬಗ್ಗೆ ವಿಶ್ವಾಸ, ಪ್ರೀತಿ, ಬದ್ಧತೆ ಇಲ್ಲ. ಹೀಗಾಗಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದ ಜನ ಅದಕ್ಕೆ ಮರಳಾಗಲ್ಲ ಎಂದರು.
ವಿವಿಧ ಕಾಮಗಾರಿಗಳಿಗೆ ಸಿಎಂ ಶಂಕು: ಸವಣೂರು, ಶಿಗ್ಗಾಂವಿ ಹಾಗೂ ಬಂಕಾಪುರದಲ್ಲಿ ಜನರಿಗೆ ವಿಶೇಷವಾಗಿ ಜಿ ಪ್ಲಸ್ ಮನೆ ನಿರ್ಮಿಸಲಾಗಿದೆ. ಮುಂದಿನ ಹಂತದಲ್ಲಿ 1020 ಮನೆ ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪುರಸಭೆ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಜನಾರ್ದನ ರೆಡ್ಡಿ
ಹಳೆ ಪುರಸಭೆ ಕಾರ್ಯಾಲಯ ಕಟ್ಟಡ ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು, ಬೆಣ್ಣೆ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆನಿರ್ಮಾಣಕ್ಕೆ ಗುದ್ದಲಿ ಪೂಜೆ, 64 ಕೋಟಿ ವೆಚ್ಚದಲ್ಲಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, 3 ಕೋಟಿ ವೆಚ್ಚದಲ್ಲಿ ಎಸಿ ಆಫೀಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶೈಲಾ ಮುದಿಗೌಡ್ರ, ಪುರಸಭೆ ಸದಸ್ಯರಾದ ರೇಖಾ ಬಂಕಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಎಸ್‌ಡಿಎಂಸಿ ಉಪಾಧ್ಯಕ್ಷ ಮಂಜುನಾಥ ಗಾಣಿಗೇರ, ಉಪವಿಭಾಗ ಅಧಿಕಾರಿ ರಾಯಪ್ಪ ಹುಣಸಗಿ, ತಾಲೂಕು ದಂಡಾಧಿಕಾರಿ ಅನಿಲಕುಮಾರ ಜಿ., ಉಪಸ್ಥಿತರಿದ್ದರು.