ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ನಮ್ಮ ಪ್ರಧಾನಿ ಮೋದಿ ಭೇಟಿ: ಹಲವು ಮಹತ್ವದ ಒಪ್ಪಂದಗಳಿಗೆ ಸಹಿ

By Anusha Kb  |  First Published Jun 22, 2024, 6:27 PM IST

ದ್ವೀಪಕ್ಷೀಯ ಮಾತುಕತೆಗಾಗಿ ಭಾರತದ ಮಿತ್ರರಾಷ್ಟ್ರ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು ಎರಡು ದಿನ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವೀಪಕ್ಷೀಯ ಮಾತುಕತೆ ನಡೆಸಿದರು.


ನವದೆಹಲಿ: ದ್ವೀಪಕ್ಷೀಯ ಮಾತುಕತೆಗಾಗಿ ಭಾರತದ ಮಿತ್ರರಾಷ್ಟ್ರ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು ಎರಡು ದಿನ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವೀಪಕ್ಷೀಯ ಮಾತುಕತೆ ನಡೆಸಿದರು. 2024ರ ಲೋಕಸಭೆ ಚುನಾವಣೆ ನಡೆದು ಭಾರತದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಹಸೀನಾ ಅವರ ಮೊದಲ ಭೇಟಿ ಇದಾಗಿದೆ. 

ನಿನ್ನೆ ಭಾರತಕ್ಕೆ ಆಗಮಿಸಿದ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಇಂದು ಮುಂಜಾನೆ ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ ರಾಜ್‌ಘಾಟ್‌ಗೆ ಭೇಟಿ ನೀಡಿ ನಮನ ಸಲ್ಲಿಸಿದರು.  ಇದಕ್ಕೂ ಮೊದಲು ಶೇಕ್ ಹಸೀನಾ ಅವರಿಗೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಅದ್ದೂರಿ ಸ್ವಾಗತ ನೀಡಲಾಯ್ತು.  ಪ್ರಧಾನಿ ಮೋದಿ,  ವಿದೇಶಾಂಗ ಸಚಿವ ಎಸ್, ಜೈಶಂಕರ್, ಕೇಂದ್ರ ಸಚಿವ ಜೆಪಿ ನಡ್ಡಾ ಹಾಗೂ ಕೇಂದ್ರ ರಾಜ್ಯ ಖಾತೆ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ಕೃತಿ ವರ್ಧನ್ ಸಿಂಗ್ ಅವರು ಬಾಂಗ್ಲಾದ ನಾಯಕಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.

Tap to resize

Latest Videos

undefined

ಬಾಂಗ್ಲಾದೇಶದಲ್ಲಿ ಬಾಯ್ಕಾಟ್ ಭಾರತ ಅಭಿಯಾನ, ಪ್ರಧಾನಿ ಸವಾಲಿಗೆ ವಿಪಕ್ಷಗಳು ಮೌನ!

ಭಾರತ ಮತ್ತು ಬಾಂಗ್ಲಾದೇಶ ಹಲವಾರು ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಈ ಇಬ್ಬರು ನಾಯಕರು ಹಲವು ಸರಣಿ ಒಪ್ಪಂದಗಳಿಗೆ ಸಹಿ ಹಾಕಿದರು. ಈ ಮೂಲಕ ಈ ಭೇಟಿ ಬಾಂಗ್ಲಾದೇಶ ಹಾಗೂ ಭಾರತದ ನಡುವಣ ಭವಿಷ್ಯನ್ನು ಗಟ್ಟಿಗೊಳಿಸಿದೆ. ಡಿಜಿಟಲ್ ಡೊಮೇನ್‌ನಲ್ಲಿ ಸಂಬಂಧಗಳನ್ನು ವೃದ್ಧಿಸುವುದು, ಗ್ರೀನ್ ಪಾರ್ಟ್‌ನರ್‌ಶಿಪ್, ಎರಡು ದೇಶಗಳ ನಡುವೆ ರೈಲ್ವೆ ಸಂಪರ್ಕವನ್ನು ಹೆಚ್ಚಿಸುವುದು ಹಾಗೂ ಎರಡು ದೇಶಗಳ ಕಡಲ ಪ್ರದೇಶಗಳಲ್ಲಿ ನೀಲಿ ಆರ್ಥಿಕತೆಯನ್ನು ಬಲಪಡಿಸುವುದು ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 

ವ್ಯಾಪಾರ, ಸಂಪರ್ಕ ಹಾಗೂ ಇಂಧನ ವಲಯದಲ್ಲಿ ಪ್ರಧಾನಿ ಮೋದಿ ಹಾಗೂ ಶೇಕ್ ಹಸೀನಾ ಅವರು ಪ್ರಮುಖವಾಗಿ ಮಾತುಕತೆ ನಡೆಸಿದ್ದು, ಇವರ ಮಾತುಕತೆಗಳು ಈ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕ್ ಹಸೀನಾ ಅವರ ಈ ಭೇಟಿ ಹಾಗೂ ಸಹಿ ಮಾಡಲಾದ ಒಪ್ಪಂದಗಳು ಎರಡು ದೇಶಗಳ ನಡುವೆ ಬಹುಮುಖಿಯಾದ ಸಹಕಾರವನ್ನು ಬೆಳೆಸುವ ಪರಸ್ಪರ ಬದ್ಧತೆಯನ್ನು ತೋರಿಸುತ್ತಿದೆ.

ಶೇಖ್‌ ಹಸೀನಾ ಜೊತೆ ಮಂಡಿಯೂರಿ ರಿಷಿ ಮಾತುಕತೆ: ಸುಧಾಮೂರ್ತಿ ಅಳಿಯನ ಸಂಸ್ಕಾರಕ್ಕೆ ಎಲ್ಲೆಡೆ ಶ್ಲಾಘನೆ

ಈ ಭೇಟಿ ವೇಳೆ ಭಾರತ ಹಾಗೂ ಬಾಂಗ್ಲಾದೇಶದ ಐತಿಹಾಸಿಕ ಸಂಬಂಧಗಳ ಬಗ್ಗೆ ಶೇಕ್ ಹಸೀನಾ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತವೂ ಬಾಂಗ್ಲಾದೇಶದ ಪ್ರಮುಖ ನೆರೆಯ ವಿಶ್ವಾಸಾರ್ಹ ಸ್ನೇಹಿತ ದೇಶವಾಗಿದ್ದು, 197ರ ಬಾಂಗ್ಲಾದೇಶ ವಿಮೋಚನೆಯ ಸಮಯದಲ್ಲಿ ಭಾರತ ನೀಡಿದ ನೆರವನ್ನು ಉಲ್ಲೇಖಿಸಿ ಎರಡು ದೇಶಗಳ ನಡುವೆ ಬೇರೂರಿರುವ ಆಳವಾದ ಸಂಬಂಧವನ್ನು ಒತ್ತಿ ಹೇಳಿದರು.

ಶೇಕ್ ಹಸೀನಾ ಅವರು ಜೂನ್ 9 ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೂ ಆಗಮಿಸಿದ್ದರು. ಇವರು ಸೇರಿದಂತೆ ಹಿಂದೂ ಮಹಾ ಸಾಗರ ಪ್ರದೇಶದ ಏಳು ದೇಶಗಳ ನಾಯಕರು ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

click me!