
ಹಿರಿಯ ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಮೇಲೆ ನಡೆದ ಗುಂಡಿನ ದಾಳಿ ಇಡೀ ರಾಜಕೀಯ ಜಗತ್ತನ್ನೇ ತಲ್ಲಣಗೊಳಿಸಿದೆ. ನಿನ್ನೆ ಶನಿವಾರ ಮುಂಬೈನಲ್ಲಿ ದಾಳಿಕೋರರು ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಗಣ್ಯಾತಿಗಣ್ಯರು ಆಸ್ಪತ್ರೆಗೆ ಧಾವಿಸಿದ್ದರು. ಬಿಗ್ಬಾಸ್ 18 ಶೂಟಿಂಗ್ನಲ್ಲಿದ್ದ ನಟ ಸಲ್ಮಾನ್ ಖಾನ್ ಕೂಡ, ಶೂಟಿಂಗ್ ಅನ್ನು ಏಕಾಏಕಿ ರದ್ದು ಮಾಡಿ ಆಸ್ಪತ್ರೆಗೆ ದೌಡಾಯಿಸಿದ್ದರು. ಆದರೆ ಅಷ್ಟರಲ್ಲಿಯೇ ಬಾಬಾ ಸಿದ್ದಿಕಿ ಕೊನೆಯುಸಿರು ಎಳೆದಿದ್ದಾರೆ.
ಇವರ ಸಾವು ಕೇವಲ ರಾಜಕೀಯ ಮಾತ್ರವಲ್ಲದೇ ಚಲನಚಿತ್ರೋದ್ಯಮಕ್ಕೂ ಭಾರಿ ಆಘಾತ ತಂದಿದೆ! ಅಷ್ಟಕ್ಕೂ ಸಲ್ಮಾನ್ ಖಾನ್ ಈ ಪರಿ ಶಾಕ್ ಆಗಲು ಕಾರಣವೇನು ಎಂಬ ಹಿಂದೆಯೂ ಕುತೂಹಲದ ಕಥೆಯಿದೆ. ಬಾಲಿವುಡ್ನ ಖಾನ್ಗಳಾದ ಸಲ್ಮಾನ್ ಮತ್ತು ಶಾರುಖ್ಗೂ, ಬಾಬಾ ಸಿದ್ದಿಕಿಗೂ ಬಿಡಿಸಲಾರದ ನಂಟಿದೆ. ಅದಕ್ಕೆ ಕಾರಣ, ಈ ಖಾನ್ದ್ವಯರ ನಡುವೆ ಇದ್ದ ವೈಮನಸ್ಸನ್ನು ದೂರ ಮಾಡಿದ್ದೇ ಬಾಬಾ ಸಿದ್ದಿಕಿ. ಇವರಿಬ್ಬರ ನಡುವಿನ ದ್ವೇಷದಿಂದಾಗಿ ನಷ್ಟ ಅನುಭವಿಸಿದ್ದ ಬಾಲಿವುಡ್ಗೆ ಮತ್ತಷ್ಟು ಚೇತನ ತುಂಬಿದ್ದರು. ಅಷ್ಟಕ್ಕೂ, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವಿನ ಜಗಳ ಕೂಡ ತುಂಬಾ ಹಳೆಯದು. 2008 ರಲ್ಲಿ, ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವೆ ಜಗಳವಾಗಿತ್ತು. ಇಬ್ಬರೂ ಜಗಳವಾಡಿದ ನಂತರ ಇಬ್ಬರೂ ಮಾತನಾಡುವುದನ್ನು ನಿಲ್ಲಿಸಿದ್ದರು.
ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್ 1 ನಟಿ ಆಗ್ತಾರೆ! ಆಮೀರ್ ಖಾನ್ ಹೇಳಿದ್ದೇನು ಕೇಳಿ
ಅಷ್ಟಕ್ಕೂ ಇವರಿಬ್ಬರ ನಡುವೆ ಜಗಳವಾಗುವುದಕ್ಕೆ ಕಾರಣ, ಐಶ್ವರ್ಯ ರೈ. ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಲವ್ ವಿಷಯ ಆಗ ಬಿ-ಟೌನ್ನಲ್ಲಿ ಬಹಳ ಫೇಮಸ್ ಆಗಿತ್ತು. ಆದರೆ ಕತ್ರೀನಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಈ ವಿಷಯವನ್ನು ಶಾರುಖ್ ಮತ್ತೆ ಕೆದಕಿದಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅಷ್ಟಕ್ಕೂ ಶಾರುಖ್ ಮತ್ತು ಸಲ್ಮಾನ್ ಖಾನ್ 1990ರಿಂದಲೂ ತೀವ್ರ ಆಪ್ತರು. ಕರಣ್-ಅರ್ಜುನ್ ಮತ್ತು ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಜೋಡಿ ಸಕತ್ ಫೇಮಸ್ ಕೂಡ ಆಗಿತ್ತು. ಆದರೆ ಈ ವೈಮಸ್ಸಿನಿಂದಾಗಿ ಬಾಲಿವುಡ್ ಇಂಡಸ್ಟ್ರಿಗೂ ತೊಂದರೆಯಾಗಿತ್ತು.
ಇದನ್ನು ಸರಿಪಡಿಸಿದವರೇ ಬಾಬಾ ಸಿದ್ದಿಕಿ. 2013ರಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಸಿದ್ದಿಕಿ ಅವರು ಇಬ್ಬರನ್ನೂ ಕರೆಸಿ ಒಂದುಗೂಡಿಸಿದ್ದರು. ಬಿರಿಯಾನಿ (Biriyani) ಊಟದ ಮೂಲಕ ಇಬ್ಬರೂ ಒಂದಾದರು. ಸಮಾರಂಭದಲ್ಲಿ, ಸಿದ್ದಿಕಿ ಅವರು, ಸಲ್ಮಾನ್ ಅವರ ತಂದೆ ಸಲೀಂ ಖಾನ್ ಅವರ ಪಕ್ಕದಲ್ಲಿ ಶಾರುಖ್ ಖಾನ್ ಅವರನ್ನು ಕುಳ್ಳರಿಸಿ, ಇಬ್ಬರೂ ತಾರೆಗಳು ಮುಖಾಮುಖಿಯಾಗುವಂತೆ ಮಾಡಿದ್ದರು. ಕೊನೆಯಲ್ಲಿ ಶಾರುಖ್ ಮತ್ತು ಸಲ್ಮಾನ್ ಪರಸ್ಪರ ಶುಭಾಶಯ ಕೋರುವ ಮತ್ತು ತಬ್ಬಿಕೊಂಡು ಸುದೀರ್ಘ ದ್ವೇಷವನ್ನು ಕೊನೆಗೊಳಿಸಿದ್ದರು. ಇದರ ಫೋಟೋ ಸಕತ್ ವೈರಲ್ ಆಗುತ್ತಿದೆ.
ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್ ಮಾತಿಗೆ ಪತ್ನಿ ಶಾಕ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.