ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಇಡೀ ದೇಶದ ಜನರಲ್ಲಿ ವಿಶ್ವಾಸವಿತ್ತು. ಆ ಕಾಣಕ್ಕಾಗಿಯೇ ಮಾಧ್ಯಮ, ಜನ ಸಮುದಾಯದಲ್ಲಿ ಜನರ ಅಭಿಪ್ರಾಯ ಕಾಂಗ್ರೆಸ್ ಪರವಾಗಿಯೇ ಇತ್ತು. ಆದಾಗ್ಯೂ ಚುನಾವಣಾ ಫಲಿತಾಂಶ ಬೇರೆಯದ್ದೇ ರೀತಿಯಲ್ಲಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ(ಅ.13): ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದು ತಮಗೆ ತೀವ್ರ ಬೇಸರ ಉಂಟು ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಇಡೀ ದೇಶದ ಜನರಲ್ಲಿ ವಿಶ್ವಾಸವಿತ್ತು. ಆ ಕಾಣಕ್ಕಾಗಿಯೇ ಮಾಧ್ಯಮ, ಜನ ಸಮುದಾಯದಲ್ಲಿ ಜನರ ಅಭಿಪ್ರಾಯ ಕಾಂಗ್ರೆಸ್ ಪರವಾಗಿಯೇ ಇತ್ತು. ಆದಾಗ್ಯೂ ಚುನಾವಣಾ ಫಲಿತಾಂಶ ಬೇರೆಯದ್ದೇ ರೀತಿಯಲ್ಲಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
undefined
ಜಾತಿಗಣತಿ ವರದಿ ಬಗ್ಗೆ ರಾಜ್ಯ ನಾಯಕರನ್ನೇ ಕೇಳಿ: ಮಲ್ಲಿಕಾರ್ಜುನ ಖರ್ಗೆ
ಈ ರೀತಿಯ ವ್ಯತಿರಿಕ್ತ ಫಲಿತಾಂಶ ಬರಲು ಏನು ಕಾರಣ ಎನ್ನುವುದರ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೂತ್‌ಮಟ್ಟದಿಂದ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಆ ವರದಿ ಬಂದ ಬಳಿಕ ಫಲಿತಾಂಶದ ಕುರಿತು ಸ್ಪಷ್ಟವಾಗಿ ಮಾತನಾಡುವುದು ಸರಿ ಎನಿಸುತ್ತದೆ. ಎಲ್ಲವೂ ನಮ್ಮ ಪರವಾಗಿಯೇ ಇದ್ದರೂ ಫಲಿತಾಂಶ ಮಾತ್ರ ಏಕೆ ಹೀಗಾಯಿತು ಎಂಬುದು ತಿಳಿಯದಾಗಿದೆ ಎಂದು ಅಚ್ಚರಿ ಹೊರಹಾಕಿದರು.
ಚುನಾವಣಾ ಪ್ರಕ್ರಿಯೆ ಸರಿ ಇದೆಯೋ, ಇಲ್ಲವೋ ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲ್ಲ ಎಂದರಲ್ಲದೆ, ಬೂತ್ ಮಟ್ಟದ ವರದಿ ಕೈ ಸೇರಿದ ನಂತರ ಯಾವ ಹಂತದಲ್ಲಿ ತಪ್ಪಾಗಿದೆ ಎಂಬುದು ಗೊತ್ತಾಗಲಿದೆ ಎಂದು ನುಡಿದರು.
ಒಂದೊಮ್ಮೆ ವರದಿ ಬಂದ ಬಳಿಕ ತಪ್ಪು ನಮ್ಮ ಪಕ್ಷದ ಕಾರ್ಯಕರ್ತರದ್ದೋ, ಚುನಾವಣಾ ಪ್ರಕ್ರಿಯೆಯಲ್ಲಿ ಏನಾದರೂ ಗಡಿಬಿಡಿ ನಡೆದಿದೆಯೋ ಎಂಬುದರ ಕುರಿತು ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಇದ್ದರು.