Shimoga constituency: ರೇಸ್‌ನಲ್ಲಿ ಆಯನೂರು ಮಂಜುನಾಥ್‌, ಎಸ್‌.ದತ್ತಾತ್ರಿ, ಧನಂಜಯ ಸರ್ಜಿ

Published : Dec 21, 2022, 08:10 AM IST
 Shimoga constituency: ರೇಸ್‌ನಲ್ಲಿ ಆಯನೂರು ಮಂಜುನಾಥ್‌, ಎಸ್‌.ದತ್ತಾತ್ರಿ, ಧನಂಜಯ ಸರ್ಜಿ

ಸಾರಾಂಶ

ಈಶ್ವರಪ್ಪ ಕ್ಷೇತ್ರದಲ್ಲಿ ಹುಟ್ಟಿಕೊಂಡ ಸ್ಪರ್ಧಾಕಾಂಕ್ಷಿಗಳು! ಜಿಲ್ಲೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ಚುನಾವಣೆ ಟಿಕೆಟ್‌ ಪೈಪೋಟಿ  ಕೆ.ಎಸ್‌. ಈಶ್ವರಪ್ಪ ಕ್ಷೇತ್ರ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಕ್ಷೇತ್ರ ಹೈಕಮಾಂಡ್‌ ಈಶ್ವರಪ್ಪರಿಗೆ ಮಣೆ ಹಾಕಿದರೆ ಇವರಾರ‍ಯರೂ ಸ್ಪರ್ಧಿಸಲ್ಲ ಈಶ್ವರಪ್ಪಗೆ ಟಿಕೆಟ್‌ ತಪ್ಪಿದರೂ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್‌ ನೀಡಬೇಕೆಂಬುದು ಆಗ್ರಹ

ಶಿವಮೊಗ್ಗ (ಡಿ.21) : ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಎಂದರೆ ಅದು ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಅವರ ಕ್ಷೇತ್ರ ಎಂದೇ ಬಿಂಬಿತವಾಗಿದ್ದು, ಈ ಬಾರಿ ಚುನಾವಣಾ ಸ್ಪರ್ಧಾ ಕಣದಲ್ಲಿ ಹಲವು ಹೊಸ ಹೆಸರುಗಳು ಕೇಳಿ ಬರಲಾರಂಭಿಸಿವೆ. ಆಯನೂರು ಮಂಜುನಾಥ್‌ ಮತ್ತು ಎಸ್‌.ದತ್ತಾತ್ರಿ ಸೇರಿದಂತೆ ಪ್ರಭಾವಿ ಮುಖಂಡರ ಹೆಸರುಗಳು ಸೇರ್ಪಡೆ ಆಗಿರುವುದು ಕುತೂಹಲ ಮೂಡಿಸಿದೆ.

ಕೆ.ಎಸ್‌.ಈಶ್ವರಪ್ಪ ಅವರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಲು ಹೈಕಮಾಂಡ್‌ ನಿರ್ಧರಿಸಿದರೆ ಈ ಯಾರೂ ಸ್ಪರ್ಧಾ ಕಣದಲ್ಲಿ ಪೈಪೋಟಿಗೆ ಇಳಿಯುವುದಿಲ್ಲ. ಆದರೆ ವಯಸ್ಸಿನ ಆಧಾರದ ಮೇಲೆ ಈಶ್ವರಪ್ಪ ಅವರಿಗೆ ಟಿಕೆಟ್‌ ನಿರಾಕರಿಸಿದರೆ ಮಾತ್ರ ಆಕಾಂಕ್ಷಿಗಳ ಪೈಪೋಟಿ ಜೋರಾಗಿರುತ್ತದೆ.

ಮಂತ್ರಿಗಿರಿ ಲಾಬಿ ಬಿಟ್ಟು ಈಶ್ವರಪ್ಪ ಸದನಕ್ಕೆ ಹೋಗಲಿ: ಕೆ.ಬಿ.ಪ್ರಸನ್ನಕುಮಾರ್‌

ತಮಗೆ ಟಿಕೆಟ್‌ ನೀಡುತ್ತಾರೆ ಎಂದು ಈಶ್ವರಪ್ಪ ಬಲವಾಗಿ ನಂಬಿದ್ದಾರೆ. ಚುನಾವಣಾ ಸಿದ್ಧತೆಗಳನ್ನು ಕೂಡ ನಡೆಸಿದ್ದಾರೆ. ಒಂದು ಪಕ್ಷ ತಮಗೆ ವಯಸ್ಸಿನ ಕಾರಣಕ್ಕೆ ಟಿಕೆಟ್‌ ನಿರಾಕರಿಸಿದ್ದೇ ಆದರೆ ತಮ್ಮ ಪುತ್ರ ಕೆ. ಇ. ಕಾಂತೇಶ್‌ ಅವರಿಗೆ ಟಿಕೆಟ್‌ ನೀಡಬೇಕು ಎನ್ನುವುದು ಅವರ ಆಗ್ರಹವಾಗಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹೊಸದೇನಲ್ಲ. ಹೀಗಾಗಿ ಉಳಿದವರಿಗೆ ಅನ್ವಯಿಸುವ ನ್ಯಾಯವೇ ನನಗೂ ಅನ್ವಯಿಸುತ್ತದೆ ಎಂಬುದು ಅವರ ಮಾತು.

ಈಗಾಗಲೇ ಕೆ.ಇ. ಕಾಂತೇಶ್‌ ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ತಮ್ಮ ತಂದೆ ಈಶ್ವರಪ್ಪ ಅವರ ಪ್ರಭಾವ ಮತ್ತು ಸಂಪರ್ಕವನ್ನು ಉಳಿಸಿ, ಬೆಳೆಸಿಕೊಳ್ಳುತ್ತಿದ್ದಾರೆ. ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿ ಒಂದು ಅವಧಿಯಲ್ಲಿ ಕೆಲಸ ಮಾಡುವ ಮೂಲಕ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.

ಎಸ್‌.ದತ್ತಾತ್ರಿ:

ಇನ್ನೊಂದೆಡೆ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷರಾದ ಎಸ್‌. ದತ್ತಾತ್ರಿ ಕೂಡ ಟಿಕೆಟ್‌ ಆಕಾಂಕ್ಷಿ. ಅತಿ ಹೆಚ್ಚು ಬ್ರಾಹ್ಮಣ ವಿಧಾನಸಭಾ ಕ್ಷೇತ್ರದಲ್ಲಿ ಶಿವಮೊಗ್ಗವೂ ಒಂದು. ಹೀಗಾಗಿ ಈಶ್ವರಪ್ಪನವರಿಗೆ ಟಿಕೆಟ್‌ ನೀಡುವುದಿಲ್ಲ ಎಂದಾದರೆ ಅದು ತಮಗೆ ಸಿಗಬೇಕು. ಬ್ರಾಹ್ಮಣ ಸಮುದಾಯದಿಂದ ಬಂದಿರುವ ತಮಗೆ ಸಂಘ ಪರಿವಾರದ ಹಿನ್ನೆಲೆಯೂ ಇದ್ದು, ಹಲವು ದಶಕಗಳ ಕಾಲ ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ದುಡಿದಿದ್ದು, ದೊಡ್ಡ ಸಂಪರ್ಕ ತಮಗೆ ಲಾಭ ಎಂದು ಹೇಳುತ್ತಾರೆ.

ಡಾ.ಧನಂಜಯ ಸರ್ಜಿ:

ಇದೀಗ ಬಿಜೆಪಿ ಸೇರಿರುವ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಅವರು ಶಿವಮೊಗ್ಗದಲ್ಲಿ ದೊಡ್ಡ ಹವಾ ಎಬ್ಬಿಸಿ ಎಲ್ಲರನ್ನೂ ಒಂದರ್ಥದಲ್ಲಿ ಕಂಗಾಲು ಮಾಡಿದ್ದರು. ಕಾಂಗ್ರೆಸ್‌ ಮುಖಂಡರ ಜೊತೆ, ಪ್ರಗತಿಪರರ ಜೊತೆ ಗುರುತಿಸಿಕೊಂಡು ಕೆಲವರ ಹುಬ್ಬೇರುವಂತೆ ಮಾಡಿದ್ದರು. ಸ್ವತಂತ್ರವಾಗಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಅಲ್ಲಲ್ಲಿ ತೋಡಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಸೇರುವ ಮೂಲಕ ಎಲ್ಲರ ಹುಬ್ಬು ಏರುವಂತೆ ಮಾಡಿದ್ದರು. ಈಗ ಬಿಜೆಪಿಯಲ್ಲಿ ಟಿಕೆಟ್‌ ಪಡೆಯಲು ಸದ್ದಿಲ್ಲದೆ ಪ್ರಯತ್ನ ಆರಂಭಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಆರ್‌ಎಸ್‌ಎಸ್‌ ಹಿನ್ನೆಲೆ, ವೀರಶೈವ ಸಮುದಾಯದಿಂದ ಬಂದಿರುವುದು ಇವರಿಗೆ ಪ್ಲಸ್‌ ಪಾಯಿಂಟ್‌ ಎನ್ನಲಾಗುತ್ತಿದೆ.

ಆಯನೂರು ಮಂಜುನಾಥ್‌ ಪ್ರವೇಶ:

ಇದರ ನಡುವೆಯೇ ಇದೀಗ ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌ ತಾವು ಸ್ಪರ್ಧಾಕಾಂಕ್ಷಿ ಎಂದು ಮಾಧ್ಯಮ ವಲಯಗಳಲ್ಲಿ ಸುದ್ದಿ ಬಿತ್ತಿದ್ದಾರೆ. ಕರ್ನಾಟಕದ ಎರಡೂ ಸದನಗಳಾದ ವಿಧಾನಸಭೆ, ವಿಧಾನ ಪರಿಷತ್ತು, ದೆಹಲಿಯ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ನಾಲ್ಕು ಸದನಗಳ ಸದಸ್ಯರಾದ ಹೆಮ್ಮೆ ಹೊಂದಿದ್ದರು. ಕಾರ್ಮಿಕ ಹೋರಾಟದ ಹಿನ್ನೆಲೆ, ವೀರಶೈವ ಲಿಂಗಾಯಿತ ಸಮುದಾಯದಿಂದ ಬಂದಿರುವುದು, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೀಲಿಗಣ್ಣಿನ ಹುಡುಗ ಎಂದು ಆ ವಲಯದಲ್ಲಿ$ಗುರುತಿಸಲ್ಪಡುತ್ತಿದ್ದಾರೆ.

Shivamogga: ಸಾಗರ ಕೋರ್ಟ್ ಗೆ ವಿವಾದಾತ್ಮಕ ಸಾಹಿತಿ ಭಗವಾನ್ ಹಾಜರು

ಇದೀಗ ಆಯನೂರು ಮಂಜುನಾಥ್‌ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಿರುವ ಸುದ್ದಿ ಹೊರಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕಾಣಿಸುತ್ತಿದೆ. ಅದರಲ್ಲಿಯೂ ಬಿಜೆಪಿ ವಲಯದಲ್ಲಿ ಭಾರಿ ಪ್ರತಿಕ್ರಿಯೆ ಕೇಳಿಬರುತ್ತಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದನದ ಗೌರವ ಎತ್ತಿಹಿಡಿಯಿರಿ: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಮಾತು
ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ