ಹೊಸಕೋಟೆ: ಎಂಟಿಬಿ ನಾಗರಾಜ ಅಧಿಕಾರ ದುರ್ಬಳಕೆ: ಶರತ್ ಬಚ್ಚೇಗೌಡ ಆರೋಪ

By Ravi Janekal  |  First Published Feb 15, 2023, 7:22 AM IST

ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಒಂದಾಗಿರುವ ಹೊಸಕೋಟೆಯಲ್ಲಿ ಮತ್ತೊಂದು ಸುತ್ತಿನ ಟಾಕ್ ವಾರ್ ಆರಂಭವಾಗಿದೆ.
 


ಹೊಸಕೋಟೆ (ಫೆ.15) :  ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಒಂದಾಗಿರುವ ಹೊಸಕೋಟೆಯಲ್ಲಿ ಮತ್ತೊಂದು ಸುತ್ತಿನ ಟಾಕ್ ವಾರ್ ಆರಂಭವಾಗಿದೆ.
 
ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿರುವಾಗ ಹೊಸಕೋಟೆ ರಣರಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಶಾಸಕ ಶರತ್‌ ಬಚ್ಚೇಗೌಡ (MLA Sharath Bachhegowda)ಮತ್ತು ಸಚಿವ ಎಂಟಿಬಿ ನಾಗರಾಜ್‌(MTB Nagaraj) ಒಂದು ರೀತಿ ಹಾವು ಮುಂಗುಸಿಯ ಹಾಗೆ ಇದಕ್ಕೆ ಉದಾಹರಣೆ ಎಂಬಂತೆ ಹೊಸಕೋಟೆ(Hoskote)ಯಲ್ಲಿ ಸಚಿವ MTB ನಾಗರಾಜ್ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆಂದು ಆರೋಪಿಸಿ ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ  ಬೃಹತ್ ಪ್ರತಿಭಟನೆ ನಡೆಸಲಾಯಿತು. ಶಾಸಕ ಶರತ್ ಪ್ರತಿಭಟನೆಗೆ ಮಾಜಿ ಸ್ವೀಕರ್ ರಮೇಶ್ ಕುಮಾರ್ ಸಾಥ್ ನೀಡಿದ್ದರು

ಶರತ್ ಬಚ್ಚೇಗೌಡ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಆಕ್ರೋಶ: ಸಭೆಯಲ್ಲಿ ಬೆಂಬಲಿಗರ ಗಲಾಟೆ

Latest Videos

undefined

 ಸಚಿವ ಎಂಟಿಬಿ ನಾಗರಾಜ್ ವಿರುದ್ದ ಶಾಸಕ ಶರತ್ ಬಚ್ಚೇಗೌಡ್ರು ಹೊಸಕೋಟೆ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ರ್ಯಾಲಿ ನಡೆಸಿ ತಾಲೂಕಿನಲ್ಲಿ ಪೊಲೀಸ್ ಮತ್ತು ಅಧಿಕಾರಿಗಳ ದುರ್ಬಳಕೆ ಮಾಡ್ತಿದ್ದಾರೆ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆ ಪ್ರವಾಸಿ ಮಂದಿರದಿಂದ ತಾಲೂಕು ಕಛೇರಿವರೆಗೂ   ಪ್ರತಿಭಟನಾ ರ್ಯಾಲಿ ನಡೆಸಲಾಯಿತು. 

ಪ್ರತಿಭಟನೆಯಲ್ಲಿ ನೂರಾರು ಜನ ಕಾರ್ಯಕರ್ತರು ಭಾಗಿಯಾಗಿದ್ದರು. ಸಚಿವ ಎಂಟಿಬಿ ವಿರುದ್ದ  ದಿಕ್ಕಾರದ ಫಲಕ ಹಿಡಿದು ಆಕ್ರೋಶ ಹೊರಹಾಕಿ ಪದೇ ಪದೇ ಕಾನೂನು ಬಾಹಿರವಾಗಿ ಅಧಿಕಾರಿಗಳನ್ನ ದುರ್ಬಳಕೆ ಮಾಡ್ತಿದ್ದಾರೆಂದು ಶಾಸಕ. ಶರತ್ ಬಚ್ಚೇಗೌಡ್ರು ಆಕ್ರೋಶ ಹೊರಹಾಕಿದರು

ಮಾತು ಮುಂದುವರೆಸಿದ ಶರತ್  ಕಾರ್ಯಾಂಗವನ್ನು ದುರ್ಬಳಕೆ ಮಾಡಲಾಗುತ್ತಿದೆ  ತಾಲೂಕು ಕಛೇರಿಯಲ್ಲಿ ಕೆಲಸದ ಸಮಯವೇ ಇಲ್ಲ  ತಮಗಿಷ್ಟ ಬಂದ ರೀತಿ ಕೆಲಸ ಮಾಡುತ್ತಿದ್ದಾರೆ ಹೇಳೋರು ಕೇಳೋರು ಯಾರು ಇಲ್ಲವೆಂದು ಶರತ್ ಬಚ್ಚೇಗೌಡ್ರು  ವಾಗ್ಧಾಳಿ ಮಾಡಿದರು.

ಹೊಸಕೋಟೆ ಸ್ವಾಭಿಮಾನ ಮಾರಾಟಕ್ಕಿಲ್ಲ, ಎಂಟಿಬಿಗೆ ಠಕ್ಕರ್ ನೀಡಿದ ಶರತ್ ಬಚ್ಚೇಗೌಡ

ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತಾನಾಡಿ, ಬಿಜೆಪಿ ಸರ್ಕಾರಕ್ಕೆ ದಿನಗಣನೆ ಆರಂಭವಾಗಿದೆ, ಇದೇಲ್ಲದಕ್ಕೂ ಅಂತ್ಯವನ್ನ ನೀವಾಡಬೇಕಿದೆಯೆಂದು  ಕಾಂಗ್ರೇಸ್ ಕಾರ್ಯಕರ್ತರಿಗೆ ಶರತ್ ಬಚ್ಚೇಗೌಡ್ರರನ್ನ ಮತ್ತೊಮ್ಮೆ ಗೆಲ್ಲಿಸಿಕೊಳ್ಳಲು ಕರೆ ನೀಡಿದರು

click me!