ಮತದಾನದ ಜಾಗೃತಿಗಾಗಿ ನಗೆ ಹಬ್ಬ: ಮತದಾನದ ಮಹತ್ವ ತಿಳಿಸಿದ ಹಾಸ್ಯ ಕಲಾವಿದೆ ಇಂದುಮತಿ

Published : Apr 29, 2023, 11:59 PM IST
ಮತದಾನದ ಜಾಗೃತಿಗಾಗಿ ನಗೆ ಹಬ್ಬ: ಮತದಾನದ ಮಹತ್ವ ತಿಳಿಸಿದ ಹಾಸ್ಯ ಕಲಾವಿದೆ ಇಂದುಮತಿ

ಸಾರಾಂಶ

ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,‌ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಚಿತ್ತಾಪುರ ತಾಲೂಕಾ ಪಂಚಾಯತ್ ವತಿಯಿಂದ ಚಿತ್ತಾಪುರ ಬಸ್‌ ನಿಲ್ದಾಣದಲ್ಲಿ ನಗೆ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕಲಬುರಗಿ (ಏ.29): ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,‌ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಚಿತ್ತಾಪುರ ತಾಲೂಕಾ ಪಂಚಾಯತ್ ವತಿಯಿಂದ ಚಿತ್ತಾಪುರ ಬಸ್‌ ನಿಲ್ದಾಣದಲ್ಲಿ ನಗೆ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲಬುರಗಿ ಜಿಲ್ಲಾ ಚುನಾವಣಾ ಸ್ವೀಪ್ ರಾಯಭಾರಿ ಹಾಗೂ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರು ತಮ್ಮ ಹಾಸ್ಯ ಶೈಲಿಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಸಂವಿಧಾನಬದ್ಧವಾದ ಹಕ್ಕನ್ನು ಚಲಾಯಿಸಬೇಕು. ಆಸೆ,‌ ಆಮೀಷಕ್ಕೆ ಬಲಿಯಾಗದೆ ಉತ್ತಮರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. 

ಮೊತ್ತೊಬ್ಬ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ಹಾಸ್ಯದ ಮೂಲಕ ಉತ್ತರ ಕನ್ನಡ ಶೈಲಿಯಲ್ಲಿ ಜನರಿಗೆ ರಂಜಿಸಿದಲ್ಲದೆ ಮತದಾನದ ಮಹತ್ವವನ್ನು ತಿಳಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ವಾಕಥಾನ್: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,‌ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಕಲಬುರಗಿ ನಗರದಲ್ಲಿ ಆಯೋಜಿಸಿದ ವಾಕ್ ಥಾನ್ ನಡೆಯಿತು.  ವಾಕ್ ಥಾನ್ ಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಚಾಲನೆ ನೀಡಿದರು.

ಕಾಂಗ್ರೆಸ್‌ ನೀಡಿದ್ದ ಅನುದಾನ ಇಳಿಸಿದ್ದು ಎಚ್‌ಡಿಕೆ: ಜಮೀರ್‌ ಅಹಮದ್‌ ಖಾನ್‌

ಜಗತ್ ವೃತ್ತದಿಂದ ನಗರೇಶ್ವರ ಶಾಲೆ ವರೆಗೆ  ಹೋಗಿ ಮರಳಿ ಜಗತ್ ವೃತ್ತಕ್ಕೆ ಬಂದು ಕಾಲ್ನಡಿಗೆ ಜಾಥಾ ಕೊನೆಗೊಂಡಿತು.  ಜಾಥಾ ಉದ್ದಕ್ಕೂ ಮೇ 10ಕ್ಕೆ ಕಡ್ಡಾಯವಾಗಿ ಮತ‌ ಚಲಾಯಿಸಿ ಎಂದು‌ ನಿಲಯದ ವಿದ್ಯಾರ್ಥಿಗಳು ಘೋಷಣೆ‌ ಕೂಗುತ್ತಾ ಸಾಗಿದರು. ಸಮಾಜ‌ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಸೇರಿದಂತೆ ವಸತಿ ನಿಲಯದ ನೂರಾರು ವಿದ್ಯಾರ್ಥಿಗಳು ಸಿಬ್ಬಂದಿಗಳು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?