ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 22,18,055 ಮತದಾರರು: ಡಿಸಿ ಯಶವಂತ ಗುರುಕರ್

By Govindaraj S  |  First Published Apr 29, 2023, 11:30 PM IST

ವಿಧಾನಸಬೆ ಚುನಾವಣೆಗೆ ಇದೇ ಮೇ 10 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಾದ್ಯಂತ 11,21,972 ಪುರುಷರು, 10,95,754 ಮಹಿಳೆಯರು ಹಾಗೂ ಇತರೆ 329 ಸೇರಿ 22,18,055 ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ ಎಂದು ಜಿಲ್ಲಾ‌ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಹೇಳಿದ್ದಾರೆ. 


ಕಲಬುರಗಿ (ಏ.29): ವಿಧಾನಸಬೆ ಚುನಾವಣೆಗೆ ಇದೇ ಮೇ 10 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಾದ್ಯಂತ 11,21,972 ಪುರುಷರು, 10,95,754 ಮಹಿಳೆಯರು ಹಾಗೂ ಇತರೆ 329 ಸೇರಿ 22,18,055 ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ ಎಂದು ಜಿಲ್ಲಾ‌ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯಾದ್ಯಂತ 21,71,211 ಮತದಾರರಿದ್ದರು. 

ವಿಧಾನಸಭೆ ಚುನಾವಣೆ ಘೋಷಣೆ ನಂತರ ಏಪ್ರಿಲ್ 10ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಿದ್ದರಿಂದ  23,423 ಪುರುಷರು, 23,413 ಮಹಿಳೆಯರು ಹಾಗೂ 8 ಇತರೆ ಸೇರಿ 46,844 ಮತದಾರರು ಜಿಲ್ಲೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಪರಿಷ್ಕೃತ ಅಂತಿಮ‌ ಮತದಾರರ ಪಟ್ಟಿ ಪ್ರಕಾರ‌ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ ಹೀಗಿದೆ. 

Tap to resize

Latest Videos

undefined

ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ

34 ಅಫಜಲಪೂರ: 1,17,230 ಪುರುಷರು, 1,10,806 ಮಹಿಳೆಯರು ಹಾಗೂ 21 ಸೇರಿ 2,28,057 ಮತದಾರರಿದ್ದಾರೆ.

35-ಜೇವರ್ಗಿ: 1,21,727 ಪುರುಷರು, 1,18,122 ಮಹಿಳೆಯರು ಹಾಗೂ 28 ಸೇರಿ 2,39,877 ಮತದಾರರಿದ್ದಾರೆ.

36-ಚಿತ್ತಾಪುರ: 1,18,082 ಪುರುಷರು, 1,17,630 ಮಹಿಳೆಯರು ಹಾಗೂ 11 ಸೇರಿ 2,35,723 ಮತದಾರರಿದ್ದಾರೆ.

41-ಸೇಡಂ: 1,11,530 ಪುರುಷರು, 1,14,085 ಮಹಿಳೆಯರು ಹಾಗೂ 30 ಸೇರಿ 2,25,645 ಮತದಾರರಿದ್ದಾರೆ.

42-ಚಿಂಚೋಳಿ: 1,03,757 ಪುರುಷರು, 99,736 ಮಹಿಳೆಯರು ಹಾಗೂ 15 ಸೇರಿ 2,03,508 ಮತದಾರರಿದ್ದಾರೆ.

43-ಗುಲಬರ್ಗಾ ಗ್ರಾಮೀಣ: 1,32,276 ಪುರುಷರು, 1,25,229 ಮಹಿಳೆಯರು ಹಾಗೂ 36 ಸೇರಿ 2,57,541 ಮತದಾರರಿದ್ದಾರೆ.

44-ಗುಲಬರ್ಗಾ ದಕ್ಷಿಣ: 1,38,442 ಪುರುಷರು, 1,40,669 ಮಹಿಳೆಯರು ಹಾಗೂ 56 ಸೇರಿ 2,79,167 ಮತದಾರರಿದ್ದಾರೆ.

45-ಗುಲಬರ್ಗಾ ಉತ್ತರ: 1,52,958 ಪುರುಷರು, 1,54,003 ಮಹಿಳೆಯರು ಹಾಗೂ 98 ಸೇರಿ 3,07,059 ಮತದಾರರಿದ್ದಾರೆ.

46-ಆಳಂದ: 1,25,970 ಪುರುಷರು, 1,15,474 ಮಹಿಳೆಯರು ಹಾಗೂ 34 ಸೇರಿ 2,41,478 ಮತದಾರರಿದ್ದಾರೆ.

click me!