ಕಾಂಗ್ರೆಸ್‌ ಗ್ಯಾರಂಟಿ ಕೊಟ್ಟಿಲ್ಲ ಏಕೆಂದು ಕೇಳಿ: ಹಳ್ಳಿ ಹಳ್ಳಿಯಲ್ಲಿ ರೇಣುಕಾಚಾರ್ಯ ಜಾಗೃತಿ

By Kannadaprabha News  |  First Published May 29, 2023, 12:55 PM IST

ಯಾರೂ ಕರೆಂಟ್‌ ಬಿಲ್‌ ಕಟ್ಟಬೇಡಿ. ಸರ್ಕಾರಿ ಬಸ್‌ ಹತ್ತಿದರೆ ಮಹಿಳೆಯರು ಟಿಕೆಟ್‌ ಪಡೆಯಬೇಡಿ. ಇನ್ನೂ ನಮ್ಮ ಖಾತೆಗೆ ಯಾಕೆ ಹಣ ಹಾಕಿಲ್ಲವೆಂಬುದಾಗಿ ಕೇಳಿ ಎಂಬುದಾಗಿ ಮಹಿಳೆಯರಿಗೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ. 


ದಾವಣಗೆರೆ (ಮೇ.29): ಯಾರೂ ಕರೆಂಟ್‌ ಬಿಲ್‌ ಕಟ್ಟಬೇಡಿ. ಸರ್ಕಾರಿ ಬಸ್‌ ಹತ್ತಿದರೆ ಮಹಿಳೆಯರು ಟಿಕೆಟ್‌ ಪಡೆಯಬೇಡಿ. ಇನ್ನೂ ನಮ್ಮ ಖಾತೆಗೆ ಯಾಕೆ ಹಣ ಹಾಕಿಲ್ಲವೆಂಬುದಾಗಿ ಕೇಳಿ ಎಂಬುದಾಗಿ ಮಹಿಳೆಯರಿಗೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ. ಹೊನ್ನಾಳಿ ಕ್ಷೇತ್ರದ ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಅಲ್ಲಿನ ಜನರು, ವಿಶೇಷವಾಗಿ ಮಹಿಳೆಯರು, ನಿರುದ್ಯೋಗಿ ಯುವ ಜನರ ಉದ್ದೇಶಿಸಿ, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷದವರು ನೀಡಿದ್ದ ಗ್ಯಾರಂಟಿ ಕಾರ್ಡ್‌ ಯೋಜನೆ, ಸೌಲಭ್ಯಗಳ ಕೊಡುವಂಗೆ ಕೇಳಿ ಎಂಬ ಸಲಹೆ ಮುಕ್ತೇನಹಳ್ಳಿ ಸೇರಿ ಇತರೆಡೆ ಗ್ರಾಮಸ್ಥರಿಗೆ ನೀಡುತ್ತಿದ್ದಾರೆ.

Tap to resize

Latest Videos

ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷವು 5 ಗ್ಯಾರಂಟಿ ಭರವಸೆಗಳ ಕಾರ್ಡ್‌ ನೀಡಿದೆ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಅದೆಲ್ಲವನ್ನೂ ಈಡೇರಿಸಬೇಕು. ಇಲ್ಲದಿದ್ದರೆ, ಕಾಂಗ್ರೆಸ್ಸಿನವರು ವಚನಭ್ರಷ್ಟರಾಗುತ್ತೀರಿ ಎಂಬುದು ಮರೆಯಬೇಡಿ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 1 ಗಂಟೆಯೊಳಗಾಗಿ ಐದೂ ಭರವಸೆ ಅನುಷ್ಠಾನ ಮಾಡುತ್ತೇವೆಂಬ ಭರವಸೆ ನೀಡಿದ್ದವರು ಇಲ್ಲಿವರೆಗೂ ಅದನ್ನು ಕಾರ್ಯ ರೂಪಕ್ಕೆ ತಂದಿಲ್ಲ. ಚುನಾವಣೆ ಹಾಗೂ ಅಧಿಕಾರಕ್ಕಾಗಿ ರಾಜ್ಯದ ಆರೂವರೆ ಕೋಟಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಸಿನ ನಡೆಯನ್ನು ಇನ್ನೂ ಸ್ವಲ್ಪ ದಿನ ಕಾದು ನೋಡುತ್ತೇವೆ ಎಂದು ಹೇಳಿದರು.

ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ಗಣೇಶ ವಿಗ್ರಹವನ್ನ ಹೊಡೆದು ವಿಘ್ನಗೊಳಿಸಿದ ದುಷ್ಕರ್ಮಿಗಳು

ಬೀದಿಗಿಳಿದು ಹೋರಾಟ: ಈಗಾಗಲೇ ರಾಜ್ಯದ ಅನೇಕ ಕಡೆ ವಿದ್ಯುತ್‌ ಉಚಿತ ಭರವಸೆ ನಂಬಿರುವ ಜನರು, ವಿಶೇಷವಾಗಿ ಮಹಿಳೆಯರು ಕರೆಂಟ್‌ ಬಿಲ್‌ ಕೇಳಲು ಬಂದರೆ, ಪೊರಕೆ ಸೇವೆ ಮಾಡುತ್ತೇವೆಂಬುದಾಗಿ ಹೇಳುತ್ತಿದ್ದಾರೆ. ಯಾರೂ ವಿದ್ಯುತ್‌ ಬಿಲ್‌ ಕಟ್ಟಬೇಡಿ ಅಂತಲೇ ನಾವೂ ಮನವಿ ಮಾಡುತ್ತೇವೆ. ನಾವೂ ಸ್ವಲ್ಪ ದಿನ ಕಾದು ನೋಡುತ್ತೇವೆ. ಒಂದು ವೇಳೆ ರಾಜ್ಯದ ಜನತೆಗೆ ಕಾಂಗ್ರೆಸ್‌ ನೀಡಿರುವ ಐದೂ ಗ್ಯಾರಂಟಿ ಭರವಸೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟವನ್ನೂ ನಡೆಸುತ್ತೇವೆ ಎಂದು ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.

ಕಾಂಗ್ರೆಸ್‌ ಜಯ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸಲ್ಲುತ್ತದೆ: ಶಾಸಕ ರಾಜೇಗೌಡ

ಕಾಂಗ್ರೆಸ್ಸಿನವರು ಗ್ಯಾರಂಟಿ ಕಾರ್ಡ್‌ ಕೊಟ್ಟು, ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ. ಪ್ರತಿ ಹಳ್ಳಿ ಹಳ್ಳಿಗೂ ಹೋಗಿ, ಜನರಲ್ಲಿ ಜಾಗೃತಿ ಮೂಡಿಸಿ, ಎಚ್ಚರಿಸುವುದೇ ನನ್ನ ಕೆಲಸ. ಜೂನ್‌ 1ರ ನಂತರ ಕಾಂಗ್ರೆಸ್‌ ಪಕ್ಷದ 5 ಗ್ಯಾರಂಟಿ ಯೋಜನೆ ನೀಡುವಂತೆ ಜನರೇ ಕೇಳಬೇಕು. ಅಷ್ಟರಮಟ್ಟಿಗೆ ಅರಿವು ಮೂಡಿಸುತ್ತೇವೆ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ

click me!