ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಣಾಳಿಕೆಯನ್ನು ಮನೆಮನೆಗೂ ತಲುಪಿಸಿದ್ದರಿಂದ ಮತದಾರರ ಒಲವು ಗಳಿಸಲು ಸಾಧ್ಯವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಕೊಪ್ಪ (ಮೇ.29): ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಣಾಳಿಕೆಯನ್ನು ಮನೆಮನೆಗೂ ತಲುಪಿಸಿದ್ದರಿಂದ ಮತದಾರರ ಒಲವು ಗಳಿಸಲು ಸಾಧ್ಯವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಭಾನುವಾರ ಪಟ್ಟಣದ ಕೆಳಗಿನಪೇಟೆಯ ಶಂಕರ್ ರೈಸ್ ಮಿಲ್ ಬಳಿ ನಡೆದ ಕಾಂಗ್ರೆಸ್ ವಿಜಯೋತ್ಸವ ಹಾಗೂ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು 34 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ 5ಕ್ಕೆ 5 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತ ವೈಫಲ್ಯದಿಂದ ಕಂಗೆಟ್ಟಜನತೆ ಕಾಂಗ್ರೆಸ್ಸನ್ನು ಒಪ್ಪಿಕೊಂಡು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸುವ ಪಕ್ಷ ಎಂದು ಈಗಾಗಲೇ ಸಾಬೀತು ಪಡಿಸಿಕೊಂಡಿದೆ. ಈ ಬಾರಿಯೂ ಭರವಸೆಗಳನ್ನು ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು ಕ್ಷೇತ್ರದಲ್ಲಿ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ವಿರುದ್ಧ, ವೈಯಕ್ತಿಕವಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದ್ದರೂ ಎಲ್ಲಾ ವರ್ಗ ಜನಾಂಗದವರು ಈ ಬಾರಿ ಕಾಂಗ್ರೆಸ್ಸಿಗೆ ಮತ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾಮಗಾರಿಗೆ ತಡೆ ಅಭಿವೃದ್ಧಿ ಹಿನ್ನಡೆ: ಸಿ.ಟಿ.ರವಿ ಆರೋಪ
ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ರಾಜೇಗೌಡರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜೇಗೌಡರ ವಿರುದ್ಧ ನಡೆದ ನಿರಂತರ ಅಪ ಪ್ರಚಾರದಿಂದ ಕಡಿಮೆ ಅಂತರದಲ್ಲಿ ಗೆಲ್ಲುವಂತಾಯಿತು. ಯಾವುದೇ ಭ್ರಷ್ಟಾಚಾರದಲ್ಲಿ ತೊಡಗದ ತಾವು ಕ್ಷೇತ್ರದಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಜನರಿಗೋಸ್ಕರ ತಮ್ಮ ಮೃದು ಸ್ವಭಾವವನ್ನು ಕೈಬಿಟ್ಟು ಗಟ್ಟಿಧ್ವನಿಯಾಗಬೇಕು ಎಂದರು.
ಬಾಳೆಹೊನ್ನೂರಿನಲ್ಲಿ ಪ್ರಚಾರ ಮಾಡಿದ ಪ್ರಿಯಾಂಕ ಗಾಂಧಿ, ಮುಖಂಡರಾದ ಬಿ.ಕೆ.ಹರಿಪ್ರಸಾದ್, ಮಾಜಿ ಸಂಸದೆ ತಾರಾದೇವಿ, ಆರತಿ ಕೃಷ್ಣ ಮುಂತಾದವರು ಕಾಂಗ್ರೆಸ್ ಪರ ಪ್ರಚಾರ ಮಾಡಿ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಟಿ.ಡಿ.ರಾಜೇಗೌಡರ ಗೆಲುವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು ಈ ಜಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರು, ಮೂರೂ ತಾಲೂಕುಗಳ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
ಪ್ರತೀ ಬೂತ್ ಹಾಗೂ ಗ್ರಾ.ಪಂ ಮಟ್ಟದಲ್ಲಿರುವ ಸಮಸ್ಯೆಗಳನ್ನು ಅರಿತು ಅದನ್ನು ಸರಿಪಡಿಸುವ ಕೆಲಸ ಮಾಡಲು ಮುಂದಾಗಬೇಕು. ಸಿಎಎ, ಎನ್‌ಆರ್‌ಸಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಜನರ ಭಾವನೆಯನ್ನು ಹಾಳುಮಾಡಲು ಪ್ರಯತ್ನಿಸಿತೋ ಆಗಾ ಮತದಾರರು ಕಾಂಗ್ರೆಸ್ ಪಕ್ಷ ಮಾತ್ರ ರಕ್ಷಣೆ ಮಾಡುತ್ತದೆ ಎಂದು ಹಾಕಿದ್ದಾರೆ. ಎಲ್ಲಿ ನಮ್ಮ ಪಕ್ಷಕ್ಕೆ ಜಾಸ್ತಿ ಮತ ಸಿಕ್ಕಿದಿಯೋ ಅಲ್ಲಿ ಜಾತ್ಯತೀತ ಪರಂಪರೆಯನ್ನು ಒಪ್ಪಿಕೊಂಡಿದೆ ಎಂಬಾ ವಾಸ್ತವಿಕ ಸತ್ಯವನ್ನು ಒಪ್ಪಿಕೊಳ್ಳಬೇಕು.
ಚುನಾವಣಾ ಭರವಸೆ ಈಡೇರಿಸಲು ಸರ್ಕಾರ ಬದ್ಧ: ಶಾಸಕ ಪ್ರದೀಪ್ ಈಶ್ವರ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಿಕ್ಕಮಗಳೂರಿನಿಂದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿಯಿಂದ, ಚುನಾವಣಾ ಪ್ರಚಾರ ಆರಂಭಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಮತದಾರರಿಗೆ ಸಂದೇಶ ನೀಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು
-ಡಾ.ಅಂಶುಮಂತ್ ಜಿಲ್ಲಾಧ್ಯಕ್ಷ