Amit Shah Interview: ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲವಾಗಿದೆ, ಮುಸ್ಲಿಂ ಮೀಸಲಾತಿ 1 ವರ್ಷ ಮೊದಲೇ ತೆಗೆಯಬೇಕಿತ್ತು: ಅಮಿತ್ ಶಾ

By BK Ashwin  |  First Published Apr 30, 2023, 11:35 PM IST

ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಸಂಘಟನೆಯನ್ನ ಬಲಪಡಿಸಿದ್ದೇವೆ, ಹೆಚ್ಚು ಸ್ಥಾನ ಪಡೆಯಲು ನಾವು ಪ್ರಯತ್ನ ಪಡ್ತಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 


ಬೆಂಗಳೂರು (ಏಪ್ರಿಲ್ 30, 2023): ಕರ್ನಾಟಕದಲ್ಲಿ ಬಹುಮತದ ಸರ್ಕಾರ ಅನ್ನೋ ವಿಶ್ವಾಸದೊಂದಿಗೆ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಕೇಂದ್ರದ ನಾಯಕರು ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಬಿಜೆಪಿ ಪೂರ್ಣಬಹುಮತದ ಸರ್ಕಾರ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ, ರಾಜ್ಯದಲ್ಲಿನ ಚುನಾವಣೆ, ಬಿಜೆಪಿ ಜನರಿಗೆ ನೀಡಿರುವ ಅಭಿವೃದ್ಧಿ, ಸರ್ಕಾರ ರಚನೆ ಕುರಿತು ಮಾತನಾಡಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ..

ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾನ ಪಡೆಯಲು ನಾವು ಪ್ರಯತ್ನ ಪಡ್ತಿದ್ದೇವೆ. ಸ್ವಾಭಾವಿಕವಾಗಿ ಈ ಭಾಗದಲ್ಲಿ ಕಾಂಗ್ರೆಸ್ - ಜೆಡಿಎಸ್ ಮಧ್ಯೆ ಹೋರಾಟ ನಡೀತಾ ಇತ್ತು. ನಾವು ಪ್ರಯತ್ನ ಪಟ್ಟು 4 ವರ್ಷದಲ್ಲಿ ಸಂಘಟನೆಯನ್ನ ಬಲಪಡಿಸಿದ್ದೇವೆ.​ ಚುನಾವಣೆ ಘೋಷಣೆಯಾಗೋ 2 ತಿಂಗಳು ಮುಂಚೆ ಮಂಡ್ಯದಲ್ಲಿ ನಾನು ಒಂದು ರ‍್ಯಾಲಿ ಮಾಡಿದೆ.. ಮೋದಿ ಕೂಡ​ ಒಂದು ರ‍್ಯಾಲಿ ಮಾಡಿದ್ದಾರೆ. 

Tap to resize

Latest Videos

ಇದನ್ನು ಓದಿ: Amit Shah Interview: ಮೋದಿ ಬಂದ ಬಳಿಕ ಈಶಾನ್ಯ ಭಾರತ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ತೀವ್ರ ಕಡಿಮೆಯಾಗಿದೆ: ಅಮಿತ್ ಶಾ

ನಾವು ಈ ಬಾರಿ ಅಲ್ಲಿ ತುಂಬಾ ಏಕಾಗ್ರತೆಯಿಂದ ಪ್ರಯತ್ನ ಹಾಕಿದ್ದೇವೆ.. ಅಶೋಕ್ ಅವರನ್ನ ಕಣಕ್ಕೆ ಇಳಿಸಿದ್ದೇವೆ. ಸೋಮಣ್ಣ ಸ್ಪರ್ಧೆ ಮಾಡ್ತಿದ್ದಾರೆ. . ನಮ್ಮ ಪಾರ್ಟಿಯನ್ನ ವಿಸ್ತರಣೆ ಮಾಡುತ್ತಿದ್ದೇವೆ. ಅಶೋಕ್ ಅವರು ನಮ್ಮ ಅತಿದೊಡ್ಡ ಒಕ್ಕಲಿಗ ನಾಯಕ, ಅವರು ಅಲ್ಲಿ ಸ್ಪರ್ಧಿಸಿದರೆ ಜನರಿಂದ ಪ್ರತಿಕ್ರಿಯೆ ಸಿಗಲಿದೆ. ಹಾಗೆ, ಸೋಮಣ್ಣ ದೊಡ್ಡ ಲಿಂಗಾಯತ ನಾಯಕ. ಅವರು ಸ್ಪರ್ಧೆ ಮಾಡೋದ್ರಿಂದ ಅಲ್ಲಿ ನಮಗೆ ಉತ್ತಮ ರೆಸ್ಪಾನ್ಸ್ ಸಿಗಲಿದೆ ಎಂದಿದ್ದಾರೆ.

ಅಲ್ಲದೆ, ಹಳೇ ಮೈಸೂರು ಭಾಗದಲ್ಲಿ ಸೀಟ್ ಅಂತೂ ಖಂಡಿತವಾಗಿ ಹೆಚ್ಚಾಗುತ್ತೆ.. ಈ ಬಾರಿಯ ಚುನಾವಣೆಯಲ್ಲಿ ಇದು ನಮ್ಮ ದುರ್ಬಲ ಪ್ರದೇಶವಂತೂ ಆಗಿರೋದಿಲ್ಲ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Amit Shah Interview ಮೇ.13 ಬಿಜೆಪಿಗೆ ಶುಭದಿನ, ಗೆಲುವಿನ ನಂಬರ್ ಬಿಚ್ಚಿಟ್ಟ ಅಮಿತ್ ಶಾ!

ರಾಜ್ಯ ಸರ್ಕಾರದ ಒಳಮೀಸಲಾತಿಗೆ ಬಂಜಾರ ಸಮುದಾಯ ಸಿಟ್ಟಾದಂತೆ ಕಾಣ್ತಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅಮಿತ್ ಶಾ, ನಾವು ಬಂಜಾರ ಸಮುದಾಯಕ್ಕಾಗಿ ಸಾಕಷ್ಟು ಮಾಡಿದ್ದೇವೆ. ಅವರ ಜಮೀನಿನ ಹಕ್ಕು ಪತ್ರಗಳನ್ನ ಬಿಜೆಪಿ ಸರ್ಕಾರ ನೀಡಿದೆ. ಅಲ್ಲದೆ, ಒಳಮೀಸಲಾತಿ ವಿಚಾರದಲ್ಲಿ ಬ್ಯಾಲೆನ್ಸ್ ಮಾಡಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಯಾರಿಗೂ ಅನ್ಯಾಯವಾಗುವ ಪ್ರಶ್ನೆಯಿಲ್ಲ ಎಂದಿದ್ದಾರೆ.

ಇನ್ನು, ಯಡಿಯೂರಪ್ಪ ಮನೆಗೆ ಕೆಲವರು ಕಲ್ಲು ಹೊಡೆದ್ರು. ಆದ್ರೆ ನಾವು ಅವರ ಮುಖಂಡರಿಗೆ ನಮ್ಮ ಕಾರ್ಯಕರ್ತರು ಲೆಕ್ಕ ತೋರಿಸಿದ್ದಾರೆ.ಈಗಿನ ಒಳಮೀಸಲಾತಿಯಿಂದಲೇ ಹೆಚ್ಚು ಲಾಭವಾಗುತ್ತೆ ಅಂತ ಅವರಿಗೆ ಮೀಸಲಾತಿ ಬಗ್ಗೆ ಮನವರಿಕೆ ಮಾಡಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.
ಹಾಗೂ, ಬಂಜಾರ ಸಮುದಾಯದವರು ನಮ್ಮಿಂದ ಖಂಡಿತ ದೂರ ಹೋಗೋದಿಲ್ಲ.. ಬೇರೆ ಪಕ್ಷದ ಆ ಸಮುದಾಯದ ಮೋರ್ಚಾ ಪ್ರತಿಕ್ರಿಯಿಸಿರುತ್ತೆ. ಆಗ ಇಡೀ ಸಮುದಾಯವೇ ವಿರೋಧ ಮಾಡಿದೆ ಎಂದು ಅನಿಸುತ್ತೆ ಎಂದು ಹೇಳಿದ್ದಾರೆ. ಆದರೂ, ಎಡಗೈ ಸಮುದಾಯ ಸಂಪೂರ್ಣವಾಗಿ ನಮ್ಮ ಜೊತೆ ಬರೋದಿಲ್ಲ ಎಂದೂ ಒಪ್ಪಿಕೊಂಡಿದ್ದಾರೆ.

ಚುನಾವಣೆ ಹಿನ್ನೆಲೆ ಮೀಸಲಾತಿ ವಿಚಾರದ ಬಗ್ಗೆ ತುಂಬಾ ಅವಲಂಬಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ ನಾವು ಅವಲಂಬನೆ ಆಗಿಲ್ಲ. ಜನರಿಗೆ ಸಾಮಾಜಿಕ ನ್ಯಾಯ ಕೊಡಲೇ ಬಾರದ? ಯಾಕೆ ಎಲ್ಲವನ್ನೂ ಚುನಾವಣೆ ಕನ್ನಡಕದಲ್ಲಿ ನೋಡ್ತೀರಾ ಎಂದಿದ್ದಾರೆ. ಹಾಗೆ, ​ಮುಸ್ಲಿಂ ಮೀಸಲಾತಿಯನ್ನ ಒಂದು ವರ್ಷ ಮುಂಚೆಯೇ ತೆಗೆಯಬೇಕಿತ್ತು, ಸ್ವಲ್ಪ ತಡವಾಗಿದೆ. ಹಾಗಂತ ತಡವಾಗಿದೆ ಅಂತಾ ಇನ್ನೂ ತಡ ಮಾಡಬೇಕಾ ಎಂದೂ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರವನ್ನು ಏಷ್ಯಾನೆಟ್‌ ಪ್ರಧಾನ ಸಂಪಾದಕರಾದ ಅಜಿತ್ ಹನುಮಕ್ಕನವರ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮಿತ್‌ ಶಾ  ಸಮರ್ಥಿಸಿಕೊಂಡಿದ್ದಾರೆ.

click me!