ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ಕೇಂದ್ರದ ನಾಯಕರ ಭರ್ಜರಿ ಪ್ರಚಾರ ಹೊಸ ಅಲೆ ಸೃಷ್ಟಿಸಿದೆ. ಸತತ ಸಮಾವೇಶ, ರೋಡ್ ಶೋ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಶನದಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ, ಮೇ.13 ಬಿಜೆಪಿಗೆ ಶುಭದಿನ ಅನ್ನೋದನ್ನು ಹೇಳಿದ್ದಾರೆ.
ಬೆಂಗಳೂರು(ಏ.30): ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ. ಬಿಜೆಪಿ ಸೇರಿದಂತೆ ಎಲ್ಲಾ ಪಾರ್ಟಿಗಳು ಭರ್ಜರಿ ಪ್ರಚಾರ ನಡೆಸುತ್ತಿದೆ. ಈ ಬಾರಿ ಪೂರ್ಣಬಹುಮತದ ಬಿಜೆಪಿ ಸರ್ಕಾರ ಅನ್ನೋ ಘೋಷಣಾ ವಾಕ್ಯದೊಂದಿಗೆ ಬಿಜೆಪಿ ಪ್ರಚಾರ ಮಾಡುತ್ತಿದೆ. ಈ ಅಬ್ಬರದ ಪ್ರಚಾರದ ನಡುವೆ ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಶಾ, ಸುವರ್ಣನ್ಯೂಸ್ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ ಅನ್ನೋದನ್ನು ಹೇಳಿದ್ದಾರೆ. ಇದೇ ವೇಳೆ ಮೇ.13 ಬಿಜೆಪಿಗೆ ಶುಭದಿನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಜಿತ್ ಹನುಮಕ್ಕನವರ್: ತುಂಬಾ ಸರ್ವೇ ಮಾಡಿಸುತ್ತೀರಿ ನೀವು.. ನಿಮಗೆ ಎಷ್ಟು ಸ್ಥಾನ ಬರಬಹುದು?
ಅಮಿತ್ ಶಾ: ನಾನು ಸರ್ವೇಗಿಂತ ಕಾರ್ಯಕರ್ತರ ಮೇಲೆ ಹೆಚ್ಚು ವಿಶ್ವಾಸ ಇಡ್ತೀನಿ.. ತುಂಬಾ ಚಾನೆಲ್‌ಗಳಲ್ಲಿ ಬಿಜೆಪಿ ಹಿಂದಿದ್ದಾರೆ ಅಂದರು.. ಚುನಾವಣೆ ಘೋಷಣೆ ಆದ್ಮೇಲೆ ಸ್ವಲ್ಪ ಮುಂದಿದ್ದಾರೆ ಅಂದ್ರು.. ಚುನಾವಣೆ ದಿನ ಸಮ ಮಾಡಿ ತೋರಿಸ್ತಾರೆ.. ಎಕ್ಸಿಟ್ ಪೋಲ್‌ನಲ್ಲಿ ಗೆಲ್ತಾರೆ ಅಂತಾರೆ... ಕೊನೆಗೆ ನಾವು ಗೆಲ್ತೇವೆ.. ನಾನೊಬ್ಬ ರಾಜಕೀಯ ವಿದ್ಯಾರ್ಥಿಯಾಗಿ ಎಲ್ಲಾ ಸಮೀಕ್ಷೆಗಳನ್ನು ಅಧ್ಯಯನ ಮಾಡಿ ಈ ಮಾತು ಹೇಳುತ್ತಿದ್ದೇನೆ.
Amit Shah Interview ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ, ಅಭಿವೃದ್ಧಿ ಪರ ಇದ್ದಾನೆ ಮತದಾರ;ಅಮಿತ್ ಶಾ!
ಅಜಿತ್ ಹನುಮಕ್ಕನವರ್: ಎಷ್ಟು ಸೀಟು ಬರಬಹುದು?
ಅಮಿತ್ ಶಾ: ನನಗೆ ಅನಿಸುತ್ತೆ ಮೆಜಾರಿಟಿಗಿಂತ ಕನಿಷ್ಠ 15ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ
ಅಜಿತ್ ಹನುಮಕ್ಕನವರ್: ಮೆಜಾರಿಟಿ ಬರದೇ ಹೋದ್ರೆ?
ಅಮಿತ್ ಶಾ: ಮೆಜಾರಿಟಿ ಬರದೇ ಇರೋ ಪ್ರಶ್ನೆಯೇ ಇಲ್ಲ ಬಿಡಿ.. ಜನರ ಮಧ್ಯೆ ಓಡಾಡ್ತೀನಿ... ಅವರ ರೆಸ್ಪಾನ್ಸ್ ನೋಡಿದ್ರೆ 100% ಬಹುಮತದ ಬಿಜೆಪಿ ಸರ್ಕಾರ ಬಂದೇ ಬರುತ್ತೆ
ಅಜಿತ್ ಹನುಮಕ್ಕನವರ್: 2018ರಲ್ಲೂ ನಿಮ್ಮನ್ನ ನಾನೇ ಸಂದರ್ಶನ ಮಾಡಿದ್ದೆ... ಆಗಲು ನೀವು ಇದೇ ಮಾತನ್ನ ಹೇಳಿದ್ರಿ
ಅಮಿತ್ ಶಾ: ಆಗ ಎಷ್ಟು ಸೀಟ್ ಗೆದ್ದಿದ್ವಿ 106.. ದೊಡ್ಡ ಪಾರ್ಟಿ ಆಗಿದ್ವಿ.. ಬಹುಮತಕ್ಕೆ 6 ಸೀಟ್ ಕಡಿಮೆ ಬಂದಿತ್ತು ಅಂತಾ ದೊಡ್ಡ ಅಂತರವೇನು ಇರಲಿಲ್ಲ..
ಅಜಿತ್ ಹನುಮಕ್ಕನವರ್: ಸದ್ಯಕ್ಕೆ ಜೆಡಿಎಸ್ ಜೊತೆ ಮೈತ್ರಿಯ ಪ್ರಶ್ನೆಯಿಲ್ಲ?
ಅಮಿತ್ ಶಾ: ಸದ್ಯಕ್ಕಲ್ಲ... ಯಾವಾಗಲೂ ಇಲ್ಲ... ಕರ್ನಾಟಕದ ಜನತೆಗೆ ಮನವಿ ಮಾಡ್ತೀನಿ ಜೆಡಿಎಸ್ಗೆ ವೋಟ್ ಹಾಕಿದ್ರೆ ಕಾಂಗ್ರೆಸ್ಗೆ ವೋಟ್ ಹಾಕಿದಂತೆ... ನೀವು ನಿಮ್ಮ ಮತ ಯಾರಿಗೆ ಅಂತ ನಿರ್ಧರಿಸಿ
Karnataka election 2023: ಮಹದಾಯಿ ಸಮಸ್ಯೆ ಬಗೆಹರಿಸಿದ್ದು ಬಿಜೆಪಿ ಸರ್ಕಾರ: ಅಮಿತ್ ಶಾ
ಅಜಿತ್ ಹನುಮಕ್ಕನವರ್: ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಹೇಳ್ತಿದ್ದೀರಾ? ಒಂದು ವೇಳೆ ಕೇಂದ್ರದಲ್ಲಿ ಬೇರೆ ಪಕ್ಷ ರಾಜ್ಯದಲ್ಲಿ ಬೇರೆ ಪಕ್ಷ ಇದ್ರೆ ಏನಾಗುತ್ತೆ?
ಅಮಿತ್ ಶಾ: ಉದಾಹರಣೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ.. ನಾವು ಕುಮಾರಸ್ವಾಮಿ ಸರ್ಕಾರದಿಂದ ರೈತರ ಪಟ್ಟಿ ಕೇಳಿದ್ವಿ ... ಅವರು 17 ಲಕ್ಷ ಜನರ ಪಟ್ಟಿಯನ್ನ ಕಳಿಸಿಕೊಟ್ರು.. ಆದ್ರೆ ಅಲ್ಲಿ ಇದ್ದದ್ದು 54 ಲಕ್ಷ ಜನ. ಅವರಿಗೆ ಭಯವಿತ್ತು ಮೋದಿ ಡೈರೆಕ್ಟ್ ಹಣವನ್ನ ಅವರ ಅಕೌಂಟ್ಗೆ ಹಾಕಿದ್ರೆ.. ಇವರ ಪಾಸಿಬಿಲಿಟಿ ಕಡಿಮೆ ಆಗುತ್ತೆ ಅಂತಾ
ಈಗ ಅರ್ಥ ಆಯ್ತಾ ಡಬಲ್ ಇಂಜಿನ್ ಸರ್ಕಾರದ ಲಾಭ ಏನು ಅಂತಾ ಇದೇ ಥರಹ ಮನೆಗಳ ಪಟ್ಟಿ ದೊಡ್ಡದಾಯ್ತು.. ಆಯುಷ್ಮಾನ್ ಭಾರತದ ಪಟ್ಟಿ ದೊಡ್ಡದಾಯ್ತು ಅದು ಸ್ವಾಭಾವಿಕ.. ಇನ್ನೂ ಕೂಡ ಕೇಜ್ರಿವಾಲ್ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ಕೊಟ್ಟಿಲ್ಲ. ಕಾರಣ ಅಲ್ಲಿ ಡಬಲ್ ಇಂಜಿನ್ ಸರ್ಕಾರವಿಲ್ಲ.. ಮಮತಾ ಬ್ಯಾನರ್ಜಿ ಕೂಡ ಶುರು ಮಾಡಿಲ್ಲ.. ಯಾಕೆಂದರೆ ಅಲ್ಲಿ ಡಬಲ್ ಇಂಜಿನ್ ಸರ್ಕಾರವಿಲ್ಲ.. ಅವರಿಗೆ ಭಯವಿದೆ.. ಒಂದು ವೇಳೆ 5 ಲಕ್ಷ ಆರೋಗ್ಯ ವಿಮೆ ಕೊಟ್ಟರೆ.. ಅವರಿಗೆ ಕಷ್ಟ ಆಗುತ್ತೆ ಅಂತಾ.. ಅದೇ ಬಿಜೆಪಿ ಸರ್ಕಾರವಿದ್ರೆ ಜನರಿಗೆ ಸೌಲಭ್ಯ ಸಿಗ್ತಿತ್ತು.
ಅಜಿತ್ ಹನುಮಕ್ಕನವರ್: ಕರ್ನಾಟಕ ಬಿಜೆಪಿಯಲ್ಲಿ ನೀವು ಗುಜರಾತ್ ಮಾಡೆಲ್ ತರಲು ಹೊರಟಿದ್ದೀರಾ..? ಗುಜರಾತ್ ತರ ಟಿಕೆಟ್ ಹಂಚಿಕೆ, ಗುಜರಾತ್ ತರ ಟಿಕೆಟ್ ಮಿಸ್ ಮಾಡಿದ್ರಿ? ಅದನ್ನೇ ಕರ್ನಾಟಕ ಬಿಜೆಪಿಯಲ್ಲೂ ಪ್ರಯೋಗ ಮಾಡಲು ಮುಂದಾದ್ರಾ..?
ಅಮಿತ್ ಶಾ: ಹಾಗೇ.. ಭಾರತೀಯ ಜನತಾ ಪಾರ್ಟಿ ಟಿಕೆಟ್ ಬದಲಾವಣೆ ಮಾಡುತ್ತೆ.. 20 ಪರ್ಸೆಂಟ್ ಟಿಕೆಟ್ ಬದಲಾವಣೆ ನಿಯಮ ಮೊದಲಿನಿಂದಲೂ ಇದೆ.
ಅಜಿತ್ ಹನುಮಕ್ಕನವರ್: ಗುಜರಾತ್ ಮಾಡೆಲ್ ಅಂತ ಇಲ್ಲಿ ಚರ್ಚೆಯಾಯ್ತು..
ಅಮಿತ್ ಶಾ: ನೀವು ನಮ್ಮ ಎಲ್ಲಾ ಟಿಕೆಟ್ ಲಿಸ್ಟ್ ತೆಗೆದು ನೋಡಿ... 20 ಪರ್ಸೆಂಟ್ ಟಿಕೆಟ್ ಬದಲಾವಣೆ ಆಗಿರುತ್ತೆ..
ಕಾಂಗ್ರೆಸ್ಸಿಗರಿಗೇ ಮೌಲ್ಯವಿಲ್ಲ, ಇನ್ನು ಅವರ ಗ್ಯಾರಂಟಿ ಕಾರ್ಡ್‌ಗಿದೆಯೇ?: ಅಮಿತ್ ಶಾ
ಅಜಿತ್ ಹನುಮಕ್ಕನವರ್: ಈ ಪ್ರಯೋಗ, ಹಿಮಾಚಲ ಪ್ರದೇಶದಲ್ಲಿ ಪರಿಣಾಮ ಬೀರಲಿಲ್ಲ
ಅಮಿತ್ ಶಾ: ಹೌದು.. ಚುನಾವಣೆ ಅಂದ್ರೆ ಗೆಲುವು, ಸೋಲು ಇದ್ದಿದ್ದೇ. ಆದ್ರೆ ನಮ್ಮ ಪಕ್ಷ ಸಂಘಟನಾತ್ಮಕ ನಿರ್ಧಾರಗಳ ಮೇಲೆ ನಡೆಯುತ್ತೆ
ಅಜಿತ್ ಹನುಮಕ್ಕನವರ್: ಆಡಳಿತ ವಿರೋಧಿ ಅಲೆ ಕರ್ನಾಟಕದಲ್ಲಿ ಯಾವಾಗಲೂ ಕೆಲಸ ಮಾಡಿದೆ. ಪ್ರತಿ ಚುನಾವಣೆಯಲ್ಲೂ ಆಡಳಿತ ವಿರೋಧಿ ಅಲೆ ಕೆಲಸ ಮಾಡುತ್ತೆ..
ಅಮಿತ್ ಶಾ: ಕೌಂಟಿಂಗ್ ಆಗೋವರೆಗೂ ಕಾಯಿರಿ..
ಅಜಿತ್ ಹನುಮಕ್ಕನವರ್: ಒಂದು ವಿಚಾರ ದೇಶಾದ್ಯಂತ ಚರ್ಚೆ ಆಗ್ತಿದೆ.. ಕರ್ನಾಟಕದಲ್ಲೂ ಆಗ್ತಿದೆ.. ಸಿಬಿಐ, ಇಡಿಯನ್ನ ದುರುಪಯೋಗ ಮಾಡಿಕೊಳ್ತಿದ್ದಾರೆ ಅಂತಾ? ಕಾಂಗ್ರೆಸ್ನವರನ್ನ ಕೇಳಿದ್ರೆ ಮೋದಿ, ಅಮಿತ್ ಶಾ, ಯೋಗಿ ಬಂದ ಮೇಲೆ ಪರಿಸ್ಥಿತಿ ಬದಲಾಗಬಹುದು ಅಂದ್ರೆ, ಕಾಂಗ್ರೆಸ್ ನವರು ಹೇಳ್ತಾರೆ, ಮೋದಿ , ಅಮಿತ್ ಶಾ, ಯೋಗಿ, ಸಿಬಿಐ, ಇಡಿ ಎಲ್ಲಾ ಬರ್ತಾರೆ.. ಎಲ್ಲರೂ ಸೇರಿ ಬಿಜೆಪಿ ಪರ ಚುನಾವಣೆ ಮಾಡ್ತಾರೆ ಅಂತಾರೆ
ಅಮಿತ್ ಶಾ: ಇದು ಸಾಕಷ್ಟು ವರ್ಷಗಳಿಂದ ನಡೀತಿದೆ.. ನಾನು ಸಮರ್ಥನೆ ಮಾಡಿಕೊಳ್ಳೋದಿಲ್ಲ.. ಅವರಿಗೆ ತಪ್ಪು ಅನಿಸಿದ್ರೆ ಕೋರ್ಟ್ಗೆ ಹೋಗಲಿ.. ಇ.ಡಿ, ಸಿಬಿಐ ಕೋರ್ಟ್ನ ಅಧೀನದಿಂದ ಹೊರತಾಗಿಲ್ಲ. ಅವರಿದ್ದಾಗ ತುಂಬಾ ಜನರ ಮೇಲೆ ಕೇಸ್ ಹಾಕಿದ್ರು.. ಎಲ್ಲರೂ ಕೋರ್ಟ್ಗೆ ಹೋದರು.
ಅಜಿತ್ ಹನುಮಕ್ಕನವರ್: ಚುನಾವಣೆ ಹತ್ತಿರ ಬಂದಾಗ ಡಿಕೆಶಿ ಕೇಸ್ನಲ್ಲಿ ಡೆವಲಪ್ಮೆಂಟ್ ಆಗುತ್ತೆ
ಅಮಿತ್ ಶಾ: ಅವರ ಮೇಲೆ ಮೂರು ವರ್ಷದ ಹಿಂದೆಯೇ ಕೇಸ್ ಮಾಡಲಾಗಿದೆ. ಡಿಕೆ ಶಿವಕುಮಾರ್ ಕೇಸ್ಗೂ ಚುನಾವಣೆಗೂ ಎಲ್ಲಿಯ ಸಂಬಂಧ..? ಮೂರು ನಾಲ್ಕು ವರ್ಷದ ಹಿಂದೆಯೇ ಕೇಸ್ ಆಗಿದೆ.. ಆಗಿನಿಂದಲೇ ಅವರು ಗಡ್ಡ ಬೆಳೆಸ್ತಿದ್ದಾರೆ..
ಅಜಿತ್ ಹನುಮಕ್ಕನವರ್: 2024ರ ಚುನಾವಣೆಗೂ ಮೊದಲು 3 ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಇದೆ
ಅಮಿತ್ ಶಾ: ನಾವು ತುಂಬಾ ಬಲಿಷ್ಠವಾಗಿರೋ ರಾಜ್ಯಗಳು.. ನಾವು ಉತ್ತಮ ಪ್ರದರ್ಶನ ತೋರುತ್ತೇವೆ.. ಚುನಾವಣೆ ಹತ್ತಿರ ಬಂದಾಗ ಅದರ ಬಗ್ಗೆ ಮಾತಾಡ್ತೀನಿ. 2024ರ ಚುನಾವಣೆಗಾಗಿ ನಾನು ದೇಶದ ತುಂಬಾ ಓಡಾಡ್ತಿದ್ದೀನಿ. ಜನರ ಪ್ರತಿಕ್ರಿಯೆಗಳನ್ನೂ ನೋಡ್ತಿದ್ದೀನಿ. ಮತ್ತೊಮ್ಮೆ 300ಕ್ಕೂ ಹೆಚ್ಚು ಸೀಟಿನಲ್ಲಿ ಜಯಗಳಿಸಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗುವುದು ನಿಶ್ಚಿತ.. ಲೋಕಸಭೆ ಚುನಾವಣೆಗೂ ಓಡಾಟ ಶುರು ಮಾಡಿದ್ದೇವೆ.. ಜನರ ನಾಡಿ ಮಿಡಿತ ನಮಗೆ ಅರ್ಥವಾಗುತ್ತೆ.
ಅಜಿತ್ ಹನುಮಕ್ಕನವರ್: ನಿಮಗೆ ಅನಿಸುತ್ತೆ ಮೇ 13 ಬಿಜೆಪಿಗೆ ಒಂದು ಒಳ್ಳೆ ದಿನವಾಗಿರುತ್ತೆ ಅಂತಾ?
ಅಮಿತ್ ಶಾ: ಖಂಡಿತವಾಗಿ ನಾವು ಪೂರ್ಣಬಹುಮತದ ಸರ್ಕಾರ ರಚನೆ ಮಾಡುತ್ತೇವೆ. ತುಂಬಾ ಒಳ್ಳೆಯ ದಿನವಾಗುತ್ತೆ ನಮಗೆ