ಕಾಂಗ್ರೆಸ್ ಪಕ್ಷ ಮುಳುಗುವ ಹಡಗಲ್ಲ:, ಡಾ. ಖರ್ಗೆ ಕುರಿತಂತೆ ಸಿಎಂ ಬೊಮ್ಮಾಯಿ ಟೀಕೆಗೆ ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಟಾಂಗ್
ಕಲಬುರಗಿ(ಅ.21): ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅದರ ಸ್ಟಿಯರಿಂಗ್ ಖರ್ಗೆ ಕೈಗೆ ಈಗ ಕೊಟ್ಟಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಮಾಡಿರುವ ಟೀಕೆ ಸರಿಯಲ್ಲ, ಯಾವಾಗಲೂ ಟೀಕೆಗೋಸ್ಕರ ಟೀಕೆ ಮಾಡದೆ ವಿಷಯ ಅರಿತು ಟೀಕೆ ಮಾಡಬೇಕು. ಡಾ. ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿದೆ. ಪಕ್ಷದ ಪುನರುತ್ಥಾನವಾಗಿ ಭಾರತದಾದ್ಯಂತ ಪಕ್ಷ ಬಲಿಷ್ಠವಾಗಲಿದೆ ಎಂದು ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ.ಖರ್ಗೆ ಕಾರ್ಯವೈಖರಿ ಹತ್ತಿರದಿಂದ ಬಲ್ಲವರು ಅವರಿಗೆ ಕಾಂಗ್ರೆಸ್‌ನ ಬಹುದೊಡಡ ಹುದ್ದೆ ಸಿಕ್ಕಿದ್ದಕ್ಕೆ ಸಂತಸದಲ್ಲಿದ್ದಾರೆ. ಇಲ್ಲಿ ಪಕ್ಷಭೇದ ಮರೆತು ಕನ್ನಡಿಗನಿಗೆ ಇಇಂತಹ ರಾಷ್ಟ್ರೀ ಹುದ್ದೆ ಸಿಕಕಿರುವ ಬಗ್ಗೆ ಸಿಎ ಬೊಮ್ಮಾಯಿ ಸ್ವಾಗತ ಮಾಡಬೇಕಿತತು. ಅದನ್ನು ಬಿಟ್ಟು ಇಲ್ಲಿಯೂ ರಾಜಕೀಯವಾಗಿ ಟೀಕೆ ಮಾಡಿರೋದು ಸರಿಯಲ್ಲ ಎಂದು ಹೇಳಿದ್ದಾರೆ.
ರಮೇಶ ಜಾರಕಿಹೊಳಿ ಮತ್ತೆ ಮಂತ್ರಿಯಾಗ್ತಾರೆ: ನಳಿನ್ ಕುಮಾರ ಕಟೀಲ್
ಕಲ್ಯಾಣ ನಾಡಿನವರು, ಕರ್ನಾಟಕದವರು ಯಾರೊಬ್ಬರೂ ಬೇಡಿಕೆ ಇಡದಿದ್ದರೂ ಪರವಾಗಿಲ್ಲ, ತಾವೆ ಈ ಬಾಗಕ್ಕೆ, ಈ ನಾಡಿಗೆ ಅದೇನು ಬೇಕೆಂಬುದನ್ನು ಅರಿತು, ರೇಲ್ವೆ ಸಚಿವರಾಗಿದ್ದಾಗ, ಕಾರ್ಮಿಕ ಸಚಿವರಾಗಿದ್ದಾಗ ಸಾಕಷ್ಟುಕೊಡುಗೆ ಈ ಬಾಗಕ್ಕೆ ನೀಡಿದ್ದಾರೆ. ಕಲಬುರಗಿ ಹೊಸ ರೇಲ್ವೆ ಪಿಟ್‌ಲೈನ್, ವಿಭಾಗೀಯ ಕಚೇರಿ, ಬೀದರ್- ಕಲಬುರಗಿ ರೇಲ್ವೆ ಮಾರ್ಗ, ಇಎಸ್‌ಐಸಿ ಆಸ್ಪತ್ರೆ, ವಿಮಾನ ನಿಲ್ದಾಣ ಹೀಗೆ ಸಾಲುಸಾಲು ಪ್ರಗತಿ ಯೋಜನೆಗಳು ಡಾ. ಖರ್ಗೆಯವರ ಕೊಡುಗೆ ರೂಪದಲ್ಲಿ ದಕ್ಕಿವೆ.
ಕಲ್ಯಾಣ ನಾಡಿನ 7 ಜಿಲ್ಲೆಗಳಿಗೆ , ಹಿಂದುಳಿದ ಈ ಭಾಗಕ್ಕೆ ಲಂ 371 (ಜೆ) ರೂಪದಲ್ಲಿ ಉದ್ಯೋಗ, ಶಿಕ್ಷಣ, ಅಭಿವೃದ್ಧಿಯಲ್ಲಿ ಮೀಸಲಾತಿ, ಅನುದಾನ ರೂಪದಲ್ಲಿ ಭಾರಿ ಕೊಡುಗೆ ನೀಡಿದ್ದಾರೆ. ಇಂತಹ ಸಾಧನೆ ಮಾಡಿದವರು ಈಗ ದೇಶದ ಹಳೆಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಖರ್ಗೆಯವರು ತಮ್ಮ ಸಮರ್ಥ ಕಾರ್ಯದಕ್ಷೆಯಿಂದ ಇಲ್ಲಿಯೂ ತಮ್ಮ ಛಾಪು ಮೂಡಿಸುವ ಭರವಸೆ ದೇಶದ ಎಲ್ಲ ಕಾಂಗ್ರೆಸ್ಸಿಗರ, ಜನರ ಮನದಲ್ಲಿ ಮೂಡಿದೆ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಎಂದಿಗೂ ಮುಳುಗುವ ಹಡಗಲ್ಲ, ಪ್ರಜಾಪ್ರಭುತ್ವವಾದಿ ಪಕ್ಷ ನಮ್ಮದು. ಸೂರ್ಯ, ಚಂದ್ರ ಇರುವವರೆಗೂ ಈ ಪಕ್ಷ ಇರುತ್ತದೆ. ಬಲಗೊಂಡು ದೇಶವನ್ನಾಳುತ್ತದೆ. ಖರ್ಗೆ ಅವದಿಯಲ್ಲಿ ಪಕ್ಷ ಇನ್ನೂ ಬಲಗೊಂಡು ದೇಶಾದ್ಯಂತ ನಳನಳಿಸುತ್ತದೆ, ಸಿಎಂ ಬೊಮ್ಮಾಯಿಯವರೇ ಇದನ್ನೆಲ್ಲ ನೋಡಲಿದ್ದಾರೆಂದು ಅಲ್ಲಂಪ್ರಭು ಪಾಟೀಲ್ ಸಿಎಂ ಟೀಕಾ ಮಾತುಗಳಿಗೆ ಪ್ರತಿಯಾಗಿ ಟಾಂಗ್ ನೀಡಿದ್ದಾರೆ.