ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಮತ್ತೊಂದು ಹುದ್ದೆ ಆಫರ್ ಕೊಟ್ಟ AICC

By Web DeskFirst Published Jan 4, 2019, 6:56 PM IST
Highlights

ಸಂಸದೀಯ ಕಾರ್ಯದರ್ಶಿ ಹುದ್ದೆ ನಿರಾಕರಿಸಿದ್ದ ರಾಮಲಿಂಗಾ ರೆಡ್ಡಿ ಪುತ್ರಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಎಐಸಿಸಿ ಹೊಸ ಹುದ್ದೆ ನೀಡಿ ಆದೇಶ ಹೊರಡಿಸಿದೆ. ಯಾವ ಹುದ್ದೆ?

ಬೆಂಗಳೂರು, [ಜ.04]: ತಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿಲ್ಲವೆಂದು ಬೇಸರಗೊಂಡು ಸಂಸದೀಯ ಕಾರ್ಯದರ್ಶಿ  ಹುದ್ದೆ ನಿರಾಕರಿಸಿದ್ದ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹೊಸ ಜವಾಬ್ದಾರಿ ನೀಡಿದೆ.

ತಂದೆಗೆ ಸ್ಥಾನ ಸಿಗದ್ದಕ್ಕೆ ಹುದ್ದೆ ತಿರಸ್ಕರಿಸಿದ ಪುತ್ರಿ ಸೌಮ್ಯರೆಡ್ಡಿ

ಅಖಿಲ ಭಾರತ ಮಹಿಳಾ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯಾಗಿ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ನೇಮಕ ಮಾಡಿ ಇಂದು [ಶುಕ್ರವಾರ]  ಅಖಿಲ ಭಾರತ ಕಾಂಗ್ರೆಸ್ ಸಮಿತಿ [ಎಐಸಿಸಿ] ಆದೇಶ ಹೊರಡಿಸಿದೆ.

ಜಯನಗರ ನೂತನ ಶಾಸಕಿ ಸೌಮ್ಯಾ ರೆಡ್ಡಿ ಬಗ್ಗೆ ನಿಮಗಿದು ಗೊತ್ತಾ?

INC COMMUNIQUE

Appointment of various office-bearers in . pic.twitter.com/Anbmm7lSMX

— INC Sandesh (@INCSandesh)

ಈ‌ ಮೊದಲು ಸೌಮ್ಯ ರೆಡ್ಡಿ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಆದರೆ ತಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಸೌಮ್ಯ ರೆಡ್ಡಿ ಅವರು ಸಂಸದೀಯ ಕಾರ್ಯದರ್ಶಿ ಸ್ಥಾನ ನಿರಾಕರಿಸಿದ್ದರು.

click me!