'ಒನ್ ನೇಷನ್-ಒನ್ ಎಲೆಕ್ಷನ್ ಪ್ಲಾನ್ ಇದೆ : ಬಿಜೆಪಿ ಗೆಲುವು ಪಕ್ಕಾ ಎಂದು ಭವಿಷ್ಯ ನುಡಿದ ನಾಯಕ'

By Kannadaprabha NewsFirst Published Apr 11, 2021, 12:45 PM IST
Highlights

ಬಿಜೆಪಿ  ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇರಳದಲ್ಲಿಯೂ ಬಿಜೆಪಿ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು. 

ಕಲಬುರಗಿ (ಏ.11):  ಮೋದಿ ವಿರೋಧಿಗಳಿಗೆ ಪಂಚ ರಾಜ್ಯಗಳ ಚುನಾವಣೆ ಉತ್ತರ ಕೊಡಲಿದೆ.  ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕೇರಳದಲ್ಲಿ ಪಕ್ಷದ ಪರಿಸ್ಥಿತಿ ಸುಧಾರಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಕಲಬುರಗಿಯಲ್ಲಿಂದು ಮಾತನಾಡಿದ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ  ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.   ಕೇಂದ್ರ ಸರ್ಕಾರ ಕೃಷಿ ವಲಯದಲ್ಲಿ ಸುಧಾರಣೆ ತರುವ ಕಾಯ್ದೆಗಳನ್ನ ಜಾರಿಗೆ ತಂದಿದೆ .  ಚುನಾವಣೆ ಕ್ಷೇತ್ರದಲ್ಲಿ ಸಹ ಸಾಕಷ್ಟು ಸುಧಾರಣೆ ಆಗಬೇಕಿದೆ .  ಮುಂದಿನ ಹೆಜ್ಜೆ 'ಓನ್ ನೇಶನ್' 'ಓನ್ ಎಲೆಕ್ಷನ್' ಈ ಪ್ಲಾನ್ ಈಗಾಗಲೇ ಸರ್ಕಾರ ಹಾಕಿಕೊಂಡಿದೆ. ಬಿಜೆಪಿ  ಹೆಚ್ಚು ಸ್ಥಾನಗಳನ್ನು ಪಡೆಯುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. 

'ಬೈ ಎಲೆಕ್ಷನ್‌ ಬಳಿಕ ಅಡ್ರಸ್‌ ಕಳೆದುಕೊಳ್ಳುವ ಕಾಂಗ್ರೆಸ್‌ : 3 ಕ್ಷೇತ್ರಗಳಲ್ಲಿ ಜಯ ಖಚಿತ' ...

ಸಿದ್ರಾಮಯ್ಯ, ಡಿಕೆಶಿ ವಿರುದ್ಧ ಸಿಟಿ ರವಿ ಆಕ್ರೋಶ : ಕಾಂಗ್ರೆಸ್ ಮುಖಡ ಸಿದ್ದರಾಮಯ್ಯ ನೈತಿಕತೆ ಬಗ್ಗೆ , ಡಿಕೆಶಿ ನೀತಿ ಬಗ್ಗೆ ಮಾತಾಡುತ್ತಾರೆ.  ಸಿದ್ದರಾಮಯ್ಯ ಅವರೇ ಯಾವುದು ನೈತಿಕತೆ ?  ಲೋಕಾಯುಕ್ತ  ದುರ್ಬಲಗೊಳಿಸಿ ಎಸಿಬಿ ತಂದು ಬೇಕಾದವರನ್ನು ಕ್ಲೀನ್ ಚೀಟ್ ಕೊಡಿಸಿದ್ರಲ್ಲ. ಇದು ನೈತಿಕತೆಯಾ  ಎಂದು ಪ್ರಶ್ನೆ ಮಾಡಿದ್ದಾರೆ.  

ನೀತಿಗಳ ಬಗ್ಗೆ ಮಾತನಾಡುವ ಡಿ.ಕೆ ಶಿವಕುಮಾರ್ ಅವರೇ ನಿಮ್ಮ ಪಕ್ಷಕ್ಕೂ ನೀತಿಗೂ ಸಂಬಂಧವೇ ಇಲ್ಲ.  ಕೇರಳಲ್ಲಿ ಕಮ್ಯುನಿಷ್ಟ್ ಜೊತೆ ಕುಸ್ತಿ.  ತಮಿಳು ನಾಡು,  ಬಂಗಾಳದಲ್ಲಿ ಅವರ ಜೊತೆಗೆ ದೋಸ್ತಿ. ಇದೇನಾ ನಿಮ್ಮ ನೀತಿ ಎಂದು ಸೀಟಿ ರವಿ ಪ್ರಶ್ನೆ ಮಾಡಿದ್ದಾರೆ.

ಭಾರತ್ ಮಾತಾಕೀ ಜೈ ಎಂದರೆ ಕಾಂಗ್ರೆಸ್‌ಗೆ ಮೈಯಲ್ಲಿ ಹುಳ ಬಿಟ್ಟುಕೊಂಡಂಗೆ ಆಗುತ್ತದೆ.  ಇವರಿಗೆ ದೇಶದ ಬಗ್ಗೆ ಅಭಿಮಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!