'ರಾಹುಲ್ ಗಾಂಧಿ ಸಿಂಹಸ್ವಪ್ನವಾಗಿದ್ದಾರೆ : ಹುಟ್ಟಿದೆ ನಡುಕ'

Suvarna News   | Asianet News
Published : Apr 11, 2021, 12:25 PM ISTUpdated : Apr 11, 2021, 01:22 PM IST
'ರಾಹುಲ್ ಗಾಂಧಿ ಸಿಂಹಸ್ವಪ್ನವಾಗಿದ್ದಾರೆ : ಹುಟ್ಟಿದೆ ನಡುಕ'

ಸಾರಾಂಶ

  ರಾಹುಲ್ ಗಾಂಧಿ ಪಶ್ಚಿಮ ಬಂಗಾಳಕ್ಕೂ ಹೋಗ್ತಾರೆ. ರಾಹುಲ್ ಗಾಂಧಿ ನಿಮ್ಮ ಕನಸಲ್ಲೂ‌ ಬರ್ತಾರೆ ಅಂತಾ ಅರ್ಥ. ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರುತ್ತಾರೆ. ಆದ್ರಿಂದ ಪದೇ ಪದೇ ಅವರ ಬಗ್ಗೆ ಮಾತಾಡುತ್ತಾರೆ.  ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹಸ್ವಪ್ನ ಆಗಿದ್ದಾರೆ ಎಂದು ಕೈ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ  ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಳಗಾವಿ (ಏ.11): ರಾಹುಲ್ ಗಾಂಧಿಯವರು ಬಂದರೆ ಬಂದ್ರಿ ಅಂತೀರಾ.. ಬರದಿದ್ದರೆ ಬಂದಿಲ್ಲ ಎನ್ನುತ್ತೀರಾ ಎಂದು  ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಆಗಮಿಸಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. 

ಬೆಳಗಾವಿಯಲ್ಲಿಂದು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ  ರಾಹುಲ್ ಗಾಂಧಿ ಪಶ್ಚಿಮ ಬಂಗಾಳಕ್ಕೂ ಹೋಗ್ತಾರೆ. ರಾಹುಲ್ ಗಾಂಧಿ ನಿಮ್ಮ ಕನಸಲ್ಲೂ‌ ಬರ್ತಾರೆ ಅಂತಾ ಅರ್ಥ. ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರುತ್ತಾರೆ. ಆದ್ರಿಂದ ಪದೇ ಪದೇ ಅವರ ಬಗ್ಗೆ ಮಾತಾಡುತ್ತಾರೆ.  ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹಸ್ವಪ್ನ ಆಗಿದ್ದಾರೆ ಎಂದು ಹೇಳಿದರು. 

'ಬೈ ಎಲೆಕ್ಷನ್‌ ಬಳಿಕ ಅಡ್ರಸ್‌ ಕಳೆದುಕೊಳ್ಳುವ ಕಾಂಗ್ರೆಸ್‌ : 3 ಕ್ಷೇತ್ರಗಳಲ್ಲಿ ಜಯ ಖಚಿತ' ...

 ಸತೀಶ್ ಜಾರಕಿಹೊಳಿ‌ ಭಾರತೀಯ ಸಂಸ್ಕೃತಿ ವಿರೋಧಿ ಎಂಬ ಅರುಣ್ ಸಿಂಗ್ ಹೇಳಿಕೆಗೂ ಈ ವೇಳೆ ಪ್ರತಿಕ್ರಿಯಿಸಿದ ಖರ್ಗೆ  ಸತೀಶ್ ಜಾರಕಿಹೊಳಿ‌ ಇವತ್ತು ಹುಟ್ಟಿ ಬೆಳೆದಿರುವ ಮನುಷ್ಯ ಅಲ್ಲ.  ಬಸವೇಶ್ವರ ತತ್ವ ಏನು ಹೇಳುತ್ತದೆ ಎಂದರೆ ಅಂಧ ಶ್ರದ್ಧೆ ನಂಬ ಬೇಡಿ ಎನ್ನುತ್ತದೆ. ಅದೇ ರೀತಿ ಅವರಿದ್ದಾರೆ.   

ಬಸವಣ್ಣನವರು ಮಾಡಿದ ಕೆಲಸ ಸತೀಶ್ ಜಾರಕಿಹೊಳಿ‌ ಮಾಡುತ್ತಿದ್ದಾರೆ .  ಸಂವಿಧಾನ ಬದ್ಧವಾಗಿ ಸತೀಶ್ ಜಾರಕಿಹೊಳಿ‌ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ