
ತಮಿಳುನಾಡಿನಲ್ಲಿ ನಟನಾಗಿ ರಾಜಕಾರಣಿಯಾಗಿ ಬದಲಾಗಿರುವ ನಟ ದಳಪತಿ ವಿಜಯ್ ನಿನ್ನೆ ತಿರುಚಿಯ ದೇಗುಲವೊಂದರಲ್ಲಿ ಮೊಣಕಾಲೂರಿ ನಡೆದು ಪ್ರಾರ್ಥನೆ ಸಲ್ಲಿಸಿದ್ದರು. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಟ್ರೋಲ್‌ಗೆ ಒಳಗಾಗಿದ್ದಾರೆ. ವಿಜಯ್ ನಿನ್ನೆ ತಮಿಳುನಾಡಿನ ತಿರುಚಿಯ ಸೇಂಟ್ ಅಂಥೋನಿ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿ ವಿಜಯ್ ಅವರು ಮೊಣಕಾಲಿನಲ್ಲಿ ನಡೆದು ಹೋಗಿ ನಂತರ ಪ್ರಾರ್ಥನೆ ಸಲ್ಲಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಮ್ಮ ಕೃತ್ಯದ ಮೂಲಕ ವಿಜಯ್ ತನ್ನೊಬ್ಬ ಅಪ್ಪಟ್ಟ ಕ್ರಿಶ್ಚಿಯನ್ ಎಂಬುದನ್ನು ತೋರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ನೆಟ್ಟಿಗರು ಟ್ರೋಲ್ ಮಾಡ್ತಿರೋದೇಕೆ?
ವಿಜಯ್ ತಮ್ಮ ಬಹುತೇಕ ಸಿನಿಮಾಗಳಲ್ಲಿ ಹಿಂದೂ ಧರ್ಮದ ನಂಬಿಕೆ ಹಾಗೂ ಸಂಪ್ರದಾಯಗಳನ್ನು ನಿರಂತರವಾಗಿ ಅವಹೇಳನ ಮಾಡಿಕೊಂಡು ಬಂದಿದ್ದಾರೆ. ದೇವರನ್ನು ನಂಬದಿರುವ ಹಾಗೂ ಅವಮಾನಿಸುವ ಕೆಲಸವನ್ನು ಮಾಡಿದ್ದಾರೆ. ಆದರೆ ತಮ್ಮ ನಂಬಿಕೆಯ ವಿಚಾರ ಬಂದಾಗ ಅವರು ಶಿಸ್ತುಬದ್ಧವಾಗಿ ಸಂಪ್ರದಾಯ ಧರ್ಮದ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಹೀಗಿರುವಾಗ ಅವರಿಗೆ ಹೇಗೆ ಅವರ ಧರ್ಮದ ಮೇಲೆ ನಂಬಿಕೆ ಇದೆಯೋ ಹಾಗೆಯೇ ಇತರರಿಗೂ ತಮ್ಮ ಧರ್ಮದ ಮೇಲೆ ನಂಬಿಕೆ ಭರವಸೆ ಇದೆ ಎಂಬುದು ವಿಜಯ್‌ಗೆ ಏಕೆ ಅರ್ಥವಾಗಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದು, ಈ ಕಾರಣಕ್ಕೆ ವಿಜಯ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ತಂಗಿಯನ್ನು ಚುಡಾಯಿಸಿದಕ್ಕೆ ಯುವಕನ ಎತ್ತಾಕೊಂಡೋಗಿ ಸರಿಯಾಗಿ ಬಾರಿಸಿದ ಅಕ್ಕ
ವಿಜಯ್ ಅವರು ರಾಜಕೀಯ ಪ್ರವೇಶಕ್ಕಾಗಿ ತಮಿಳ್ ವೆಟ್ರಿ ಕಾಳಗಂ (ಟಿವಿಕೆ) ಪಕ್ಷವನ್ನು ಸ್ಥಾಪಿಸಿ ತಮಿಳಿನಾಡಿನಲ್ಲಿ ಚುನಾವಣಾ ಆಖಾಡಕ್ಕೆ ಇಳಿದಿದ್ದಾರೆ. ಇದೇ ವೇಳೆ ತಿರುಚಿಯ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿರು ಚರ್ಚ್‌ಗೆ ಭೇಟಿ ನೀಡಿ ಹೀಗೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸಿದರು. ವಿಜಯ್ ಅವರ ಈ ವರ್ತನೆಯನ್ನು ಅಲ್ಪಸಂಖ್ಯಾತರ ಮತ ಸೆಳೆಯುವ ಯತ್ನ ಎಂದು ಇತರ ರಾಜಕೀಯ ಪಕ್ಷಗಳು ಬಣ್ಣಿಸಿವೆ. ಇಲ್ಲಿ ಶೇಕಡಾ 25ರಷ್ಟು ಕ್ರಿಶ್ಚಿಯನ್ ಮತದಾರರಿದ್ದಾರೆ. ಹಾಗೆಯೇ ಇಲ್ಲಿಂದ ಕಣಕ್ಕಿಳಿಯುವ ವಿಜಯ್ ಅವರ ನಿರ್ಧಾರವೂ ಒಂದು ಸುರಕ್ಷಿತ ಕಾರ್ಯತಂತ್ರದ ಭಾಗ ಎಂದು ಬಣ್ಣಿಸಲಾಗಿದೆ.
ಇದನ್ನೂ ಓದಿ: ಜರ್ಮನಿಯ ಗುರುದ್ವಾರದಲ್ಲಿ ಘರ್ಷಣೆ: ರಕ್ಷಿಸಲು ಬಳಸುವ ಕಿರ್ಪಾನ್ ಆಯುಧದಿಂದಲೇ ರಕ್ತ ಹರಿಸಿದರು: 11 ಜನರಿಗೆ ಗಾಯ
ತಮಿಳುನಾಡು ಚುನಾವಣೆ ಏಪ್ರಿಲ್ 23ರಂದು ನಡೆಯಲಿದ್ದು, ಕೇವಲ ಒಂದೂವರೆ ದಿನವಷ್ಟೇ ಬಾಕಿ ಇದೆ. ಹೀಗಾಗಿ ತಮಿಳುನಾಡಿನಲ್ಲಿ ಹಲವು ರಾಜಕೀಯ ಪಕ್ಷಗಳು ಭರ್ಜರಿ ಮತ ಪ್ರಚಾರದಲ್ಲಿ ತೊಡಗಿವೆ. ಆದರೆ ವಿಜಯ್ ಮಾತ್ರ ಕಳೆದ ನಾಲ್ಕು ದಿನಗಳಿಂದ ಯಾವುದೇ ಪ್ರಚಾರ ಚಟುವಟಿಕೆಯಿಂದ ದೂರವಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆ ವಿಜಯ್ ನಿನ್ನೆ ತಿರುಚಿಯಲ್ಲಿ ರೋಡ್ ಶೋ ನಡೆಸಿದ್ದರು. ಮತ್ತೊಂದೆಡೆ ತಮಿಳುನಾಡಿನಲ್ಲಿ ಕ್ರಿಶ್ಚಿಯನ್ ಬಿಶಾಪ್‌ಗಳು ಹಾಲಿ ಮುಖ್ಯಮಂತ್ರಿ ಎಂಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.