ಅಚ್ಚರಿ ಮೂಡಿಸಿದ ಬೆಂಗ್ಳೂರು ಸೆಂಟ್ರಲ್ ಅಭ್ಯರ್ಥಿ ಪ್ರಕಾಶ್ ರೈ-ಕೇಜ್ರಿವಾಲ್ ಭೇಟಿ..!

Published : Jan 10, 2019, 06:53 PM IST
ಅಚ್ಚರಿ ಮೂಡಿಸಿದ ಬೆಂಗ್ಳೂರು ಸೆಂಟ್ರಲ್ ಅಭ್ಯರ್ಥಿ ಪ್ರಕಾಶ್ ರೈ-ಕೇಜ್ರಿವಾಲ್ ಭೇಟಿ..!

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ನಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ನಟ ಪ್ರಕಾಶ್ ರೈ ಆಪ್ ವರಿಷ್ಠರನ್ನು ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ನವದೆಹಲಿ, [ಜ.10]: ನಟ ಪ್ರಕಾಶ್ ರೈ ವರು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರನ್ನ ಭೇಟಿ ಮಾಡಿದ್ದಾರೆ.

ಇಂದು [ಗುರುವಾರ]  ಪ್ರಕಾಶ್ ರೈ ಅವರು ದೆಹಲಿಯಲ್ಲಿರುವ ಅರವಿಂದ್ ಕೇಜ್ರಿವಾಲ್​ ಅವರ  ನಿವಾಸಕ್ಕೆ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದರು. 

ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರೈ ಸ್ಪರ್ಧೆ : ಕ್ಷೇತ್ರವೂ ಬಹಿರಂಗ..!

ಈ ಬಗ್ಗೆ ಆಪ್,​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ನಟ ಪ್ರಕಾಶ್ ರೈ, ದೆಹಲಿ ಸಿಎಂ ಹಾಗೂ ಆಪ್ ವರಿಷ್ಠ ಅರವಿಂದ್ ಕೇಜ್ರಿವಾಲ್​ ಅವರನ್ನ ಭೇಟಿ ಆದರು. ಈ ವೇಳೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿಸಿದೆ. 

ಸದ್ಯ ಪ್ರಕಾಶ್ ರೈ ಯಾಕೆ ಅರವಿಂದ್ ಕೇಜ್ರಿವಾಲ್​ರನ್ನು ಭೇಟಿಯಾದರು?  ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ? ಅನ್ನೋದರ ಬಗ್ಗೆ ಅಚ್ಚರಿ ಮೂಡಿಸಿದೆ.

ಲೋಕಸಭಾ ಚುನಾವಣೆಗೆ ಪ್ರಕಾಶ್ ರೈ ಸ್ಪರ್ಧೆ!: ಯಾವ ಪಕ್ಷ, ಕ್ಷೇತ್ರದಿಂದ ಸ್ಪರ್ಧಿಸ್ತಾರೆ?

ಈಗಾಗಲೇ ಬೆಂಗಳೂರು ಕೇಂದ್ರದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಪ್ರಕಾಶ್ ರೈ ಘೋಷಿಸಿದ್ದಾರೆ. 

ಇನ್ನು ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ರೈಗೆ ಬೆಂಬಲ ನೀಡುತ್ತೇವೆಂದು ಈಗಾಗಲೇ ಕರ್ನಾಟಕ ರಾಜ್ಯ ಆಪ್ ಘೋಷಿಸಿದೆ.

ಈ ಬಗ್ಗೆ ಏನಾದ್ರೂ ಚರ್ಚೆ ಮಾಡಿರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಲೋಕಸಭಾ ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ರೈ ತ್ತ-ಇತ್ತ ಓಡಾಡುತ್ತಿದ್ದು, ಇದೀಗ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!