ವಿಧಾನ ಪರಿಷತ್ ನಾಮನಿರ್ದೇಶನ: JDSನಿಂದ ಅಚ್ಚರಿ ಹೆಸರು

Published : Jan 10, 2019, 05:32 PM ISTUpdated : Jan 10, 2019, 05:34 PM IST
ವಿಧಾನ ಪರಿಷತ್ ನಾಮನಿರ್ದೇಶನ: JDSನಿಂದ ಅಚ್ಚರಿ ಹೆಸರು

ಸಾರಾಂಶ

ವಿಧಾನ ಪರಿಷತ್ ನಾಮನಿರ್ದೇಶನ ಒಂದು ಸ್ಥಾನಕ್ಕೆ ಜೆಡಿಎಸ್ ನಿಂದ ಅಚ್ಚರಿ ಹೆಸರು!ದೇವೇಗೌಡರ ಕುಟುಂಬಕ್ಕೆ ಆಪ್ತರಾಗಿರುವ ವ್ಯಕ್ತಿಗೆ ಅವಕಾಶ!ಹಲವು ದಶಕಗಳಿಂದ ದೇವೇಗೌಡರ ಜೊತೆ ಕೆಲಸ ಮಾಡುತ್ತಿರುವ ವ್ಯಕ್ತಿ. ಯಾರವರು? ಇಲ್ಲಿದೆ ಡಿಟೇಲ್ಸ್

ಬೆಂಗಳೂರು, (ಜ.10): ಜೆಡಿಎಸ್ ಪಾಲಿನ ಒಂದು ವಿಧಾನ ಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಅಚ್ಚರಿ ಹೆಸರು ತೇಲಿಬಂದಿದೆ.

ದೇವೇಗೌಡರ ಕುಟುಂಬದ ಆಪ್ತರಿಗೆ ವಿಧಾನ ಪರಿಷತ್ ನಾಮನಿರ್ದೇಶನ ಮಾಡಲು ಜೆಡಿಎಸ್ ನಲ್ಲಿ ಮಾತುಕತೆಗಳು ನಡೆದಿವೆ.

ಲೋಕ ಚುನಾವಣೆ : ಜೆಡಿಎಸ್-ಕಾಂಗ್ರೆಸ್ ಮೈತ್ರಿ - ಯಾರಿಗೆ ಯಾವ ಕ್ಷೇತ್ರ?

ದೇವೇಗೌಡ ಪ್ರಧಾನಿಯಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದ ಹಾಸನ ಮೂಲದ ಕುರುಬ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ವಿಧಾನ ಪರಿಷತ್ ನಾಮನಿರ್ದೇಶನ ಜೆಡಿಎಸ್ ನಿರ್ಧರಿಸಿದೆ.

ಈ ಬಗ್ಗೆ ದೇವೇಗೌಡ ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ನಿನ್ನೆ (ಬುಧವಾರ) ರಾತ್ರಿ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಜೆಡಿಎಸ್ ಮೂಲಕಗಳಿಂದ ತಿಳಿದುಬಂದಿದೆ.

ಸಧ್ಯ ತಿಪ್ಪೇಸ್ವಾಮಿ ಅವರು ಸಚಿವ ಎಚ್.ಡಿ.ರೇವಣ್ಣ ಅವರ ಕಚೇರಿಯ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ಈ ವಿಧಾನಪರಿಷತ್ ಸ್ಥಾನಕ್ಕೆ ಜೆಡಿಎಸ್ ಮುಖಂಡ ಕೋನರೆಡ್ಡಿ ಸಹ ಪೈಪೋಟಿ ನಡೆಸಿದ್ದು, ಇವರಿಗೆ ಧಾರವಾಡ ಲೋಕಸಭಾ ಟಿಕೇಟ್ ನೀಡಿ ಸಮಧಾನ ಪಡಿಸಲು ದೊಡ್ಡಗೌಡ್ರು ಚಿಂತನೆ ನಡೆಸಿದ್ದಾರೆ.

ಅಂತಿಮವಾಗಿ ಯಾರು ವಿಧಾನಪರಿಷತ್ ಗೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ಇನ್ನೆರಡು ದಿನಗಳಲ್ಲಿ ತೀರ್ಮಾನ ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್