ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ರೊಚ್ಚಿಗೆದ್ದ ನಟ ಕಮಲ್ ಹಾಸನ್ ಫ್ಯಾನ್ಸ್‌

By Anusha KbFirst Published Apr 10, 2024, 11:25 AM IST
Highlights

ಲೋಕಸಭಾ ಚುನಾವಣೆಯ ಪ್ರಚಾರ ಬಿರುಸುಗೊಂಡಿದ್ದು, ತಮಿಳುನಾಡಿನ ವೆಲ್ಲೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಆದರೆ ಪ್ರಧಾನಿ ಆಗಮನದ ವೇಳೆಯೇ ತಮಿಳುನಾಡಿನಲ್ಲಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿಕೆ ಹೊಸ ವಿವಾದ ಸೃಷ್ಟಿಸಿದ್ದು, ನಟ ಕಮಲ್ ಹಾಸನ್ ಅಭಿಮಾನಿಗಳು ಅಣ್ಣಾಮಲೈ ವಿರುದ್ಧ ತಿರುಗಿ ಬಿದ್ದಿದ್ದಾರೆ. 


ನವದೆಹಲಿ/ಚೆನ್ನೈ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸುಗೊಂಡಿದ್ದು, ತಮಿಳುನಾಡಿನ ವೆಲ್ಲೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಆದರೆ ಪ್ರಧಾನಿ ಆಗಮನದ ವೇಳೆಯೇ ತಮಿಳುನಾಡಿನಲ್ಲಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿಕೆ ಹೊಸ ವಿವಾದ ಸೃಷ್ಟಿಸಿದ್ದು, ನಟ ಕಮಲ್ ಹಾಸನ್ ಅಭಿಮಾನಿಗಳು ಅಣ್ಣಾಮಲೈ ವಿರುದ್ಧ ತಿರುಗಿ ಬಿದ್ದಿದ್ದಾರೆ. 

ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ರಾಜಧಾನಿಯನ್ನು ದೆಹಲಿಯಿಂದ ನಾಗಪುರಕ್ಕೆ ಸ್ಥಳಾಂತರ ಮಾಡಬೇಕು ಎಂದು ತಮಿಳು ನಟ ಕಮಲ್ ಹಾಸನ್ ಚುನಾವಣ ಪ್ರಚಾರದ ವೇಳೆ ಹೇಳಿಕೆ ನೀಡಿದ್ದರು. ಆದರೆ ಕಮಲ್ ಹಾಸನ್ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ  ಟೀಕಿಸಿದ್ದು, 'ಕಮಲ್ ಹಾಸನ್ ಅವರು ತಮ್ಮ ಮೆದುಳನ್ನು ಮನೋವೈದ್ಯರ ಬಳಿ ತಪಾಸಣೆಗೆ ಒಳಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈ ವಿಚಾರವೀಗ ವಿವಾದಕ್ಕೆ ಕಾರಣವಾಗಿದೆ. ಅಣ್ಣಾಮಲೈ ಹೇಳಿಕೆ ಕಮಲ್ ಹಾಸನ್ ಅಭಿಮಾನಿಗಳನ್ನು ಕೆರಳಿಸಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. 

ತಮಿಳ್ನಾಡು ಮೀನುಗಾರರ ಹಿತ ಬಲಿ ಕೊಟ್ಟಿದ್ದು ಇಂದಿರಾ ಗಾಂಧಿ, ಡಿಎಂಕೆ: ಪ್ರಧಾನಿ ಮೋದಿ ಆರೋಪ

ದೇಶದ ರಾಜಧಾನಿಯನ್ನು ನಾಗಪುರಕ್ಕೆ ಶಿಫ್ಟ್ ಮಾಡಬೇಕು ಎಂಬ ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಈ ರೀತಿ ಸಲಹೆ ನೀಡುವ ಯಾರೇ ಆದರೂ ಅವರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ತಪಾಸಣೆ ಮಾಡಿಕೊಳ್ಳಬೇಕು.  ಅದು ಕಮಲ್ ಹಾಸನ್ ಅವರೇ ಆಗಲಿ ಅಥವಾ ಇನ್ಯಾರೇ ಆಗಲಿ, ಅವರ ಮಾನಸಿಕ ಸ್ಥಿತಿ, ಪ್ರಜ್ಞೆ ಹಾಗೂ ಒಟ್ಟಾರೆ ಅವರ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಬೇಕು, ಕಮಲ್ ಹಾಸನ್ ಅವರು ಮನೋವೈದ್ಯರಿಂದ ತಪಾಸಣೆಗೆ ಒಳಪಡಿಸಿಕೊಳ್ಳಬೇಕು, ರಾಷ್ಟ್ರದ ರಾಜಧಾನಿಯನ್ನು ನಾಗಪುರಕ್ಕೆ ಶಿಫ್ಟ್ ಮಾಡುವುದು ಸಾಧ್ಯವೇ ಎಂದು  ಅಣ್ಣಾಮಲೈ ಪ್ರಶ್ನಿಸಿದ್ದರು. 

ಒಂದು ವೇಳೆ ಕಮಲ್ ಹಾಸನ್ ಅವರು ಚೆನ್ನೈಯನ್ನು ದೇಶದ ಬೇಸಿಗೆಯ ಹಾಗೂ ಚಳಿಗಾಲದ ರಾಜಧಾನಿ ಮಾಡಿ ಎಂದರೆ ಸರಿ ಎನ್ನಬಹುದಿತ್ತು. ಆದರೆ ಆರ್‌ಎಸ್‌ಎಸ್‌ ಕಚೇರಿ ನಾಗಪುರದಲ್ಲಿ ಇದೇ ಎಂಬ ಕಾರಣಕ್ಕೆ ನಾಗಪುರಕ್ಕೆ ದೇಶದ ರಾಜಧಾನಿಯನ್ನು ಶಿಫ್ಟ್ ಮಾಡಬೇಕು ಎಂಬುದೆಷ್ಟು ಸರಿ, ಕಮಲ್ ಹಾಸನ್ ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಬೇಕು ಅವರು ಪ್ರಜ್ಞಾಪೂರ್ವಕವಾಗಿ ಮಾತನಾಡುತ್ತಾರೆಯೇ ಅಥವಾ ಡಿಎಂಕೆಯಿಂದ ರಾಜ್ಯಸಭಾ ಟಿಕೆಟ್‌ಗಾಗಿ ಹಪಹಪಿಸುತ್ತಿದ್ದಾರೆಯೇ ಎಂದು ಅಣ್ಣಾಮಲೈ ಕೇಳಿದ್ದಾರೆ.

ಲಂಕಾದಿಂದ ಕಚ್ಚತೀವು ದ್ವೀಪ ಮರಳಿ ಪಡೆಯಲು ಮೋದಿ ಸರ್ಕಾರ ಯತ್ನ, ಅಣ್ಣಾಮಲೈ ಹೇಳಿಕೆ ಸಂಚಲನ!

ಇತ್ತ ಡಿಎಂಕೆ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಕಮಲ್ ಹಾಸನ್,  ಬಿಜೆಪಿಯು ರಾಷ್ಟ್ರಧ್ವಜದ ತ್ರಿವರ್ಣ ವಿನ್ಯಾಸವನ್ನು ಕೂಡ ಒಂದೇ ಬಣ್ಣಕ್ಕೆ ಬದಲಾಯಿಸಬಹುದು ಎಂದು ದೂರಿದ್ದರು ಅಲ್ಲದೇ ಆರ್‌ಎಸ್‌ಎಸ್ ಮುಖ್ಯ ಕಚೇರಿ ಇರುವ ಮಹಾರಾಷ್ಟ್ರದ ನಾಗಪುರಕ್ಕೆ ದೇಶದ ರಾಜಧಾನಿಯನ್ನು ಸ್ಥಳಾಂತರಿಸಬಹುದು ಎಂದು ಹೇಳುತ್ತಾ ಇದು ಭಾರತದ ಜಾತ್ಯಾತೀತ ತತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದರು. ಆದರೆ ಕಮಲ್ ಹೇಳಿಕೆಯನ್ನು ಖಂಡಿಸುವ ವೇಳೆ ಅಣ್ಣಾಮಲೈ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಅಣ್ಣಾಮಲೈ ವಿರುದ್ಧ ಕಮಲ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. 

ಕಮಲ್ ಹಾಸನ್ ಅವರ ರಾಜಕೀಯ ಸಿದ್ದಾಂತವನ್ನು ನಾನು ಇಷ್ಟಪಡುವುದಿಲ್ಲ, ಆದರೆ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಟೀಕಿಸುವ ವೇಳೆ ಯಾರು ಮಿತಿಯನ್ನು ಮೀರಬಾರದು  ಆಗ ಮನುಷ್ಯ ತೂಕದ ವ್ಯಕ್ತಿಯಾಗುತ್ತಾನೆ. ಅಣ್ಣಾಮಲೈ ಅವರೇ ಯಾರನ್ನು ಕೂಡ ವೈಯಕ್ತಿಕವಾಗಿ ಟೀಕಿಸಬೇಡಿ, ಜನರೂ ಇದನ್ನು ಇಷ್ಟಪಡಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಅಣ್ಣಾಮಲೈ ಅವರಿಗೆ ನೈತಿಕ ಮೌಲ್ಯದ ಕೊರತೆ ಇದೆ. ಅವರು ಭಾರತದ ಹಿರಿಯ ವಕೀಲರಾದ ಕಾಂಗ್ರೆಸ್‌ನ ಪಿ. ಚಿದಂಬರಂ ಹಾಗೂ ಉತ್ತಮ ನಟರಾದ ಕಮಲ್ ಹಾಸನ್ ಅವರನ್ನು ಅವಮಾನಿಸಿದ್ದಾರೆ. ಅವರ ವೈಯಕ್ತಿಕ ದಾಳಿ ಹಾಗೂ ಅಸಭ್ಯ ವರ್ತನೆ ಅವಮಾನಕಾರಿಯಾಗಿದ್ದು, ಅವರು ಯಾವುದೇ ಸಾರ್ವಜನಿಕ ಹುದ್ದೆಗೆ ಸಮರ್ಥರಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಆದರೆ ಇದರ ಜೊತೆ ಜೊತೆಗೆ ಅನೇಕರು ಅಣ್ಣಾಮಲೈ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ತುಂಬು ಹೃದಯದಿಂದ ಅಣ್ಣಾಮಲೈ ಅವರನ್ನು ಬೆಂಬಲಿಸುತ್ತೇನೆ, ಕಮಲ್ ಹಾಸನ್ ಸಿನಿಮಾದಲ್ಲಿ ದೊಡ್ಡ ನಟರಿರಬಹುದು, ಆದರೆ ರಾಜಕೀಯದಲ್ಲಿ ಅವರೊಬ್ಬ ದೊಡ್ಡ ಜೋಕರ್, ಡಿಎಂಕೆಗೆ ಸೇರುವುದಾದರೆ ಅವರೇಕೆ ತಮ್ಮದೇ ಸ್ವಂತ ಪಕ್ಷವಾದ ಮಕ್ಕಲ್ ನೀಧಿ ಮೈಮ್ ಪಕ್ಷವನ್ನು ಸ್ಥಾಪಿಸಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. 

Kamal Haasan: If BJP wins elections, they will change India's capital to Nagpur.

Annamalai: Kamal Haasan should get his brain checked. pic.twitter.com/uGHpXGKpzC

— Megh Updates 🚨™ (@MeghUpdates)

 

 

click me!