ಲೋಕಸಭೆ ಚುನಾವಣೆ 2024: ಕಾಂಗ್ರೆಸ್‌ಗೆ ಮತ್ತೊಂದು ಬಂಡಾಯದ ಬಿಸಿ, ರಾಜೀನಾಮೆಗೆ ಮುಂದಾದ 'ಕೈ' ನಾಯಕ..!

By Girish GoudarFirst Published Apr 10, 2024, 10:32 AM IST
Highlights

ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಪ್ರೈವೇಟ್ ಲಿಮಿಟೆಡ್ ರೀತಿ ಇದೆ. ಒಂದು ಕುಟುಂಬಕ್ಕೆ ಮಾತ್ರ ಜಿಲ್ಲೆಯಲ್ಲಿ ಕಾಂಗ್ರೆಸ್ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ. ಕನಿಷ್ಠ ಜ್ಞಾನವಿಲ್ಲದ ವ್ಯಕ್ತಿ ನಮ್ಮ ಪಕ್ಷಕ್ಕೆ ಜಿಲ್ಲಾಧ್ಯಕ್ಷರಾಗಿದ್ದಾರೆ. ಎಲ್ಲಾ ಚುನಾವಣೆಗೆ ನನ್ನನ್ನು ಮತ್ತು ನಮ್ಮ ಅಹಿಂದ ಸಮಾಜವನ್ನು ಬಳಸಿಕೊಂಡಿದ್ದಾರೆ. ಆದರೆ ಈ ಚುನಾವಣೆಯಲ್ಲಿ ನಮ್ಮ ಭೋವಿ ಸಮಾಜವನ್ನು ಕಡೆಗಣಿಸಿದ್ದಾರೆ. 

ದಾವಣಗೆರೆ(ಏ.10):  ಜಿ.ಬಿ.ವಿನಯ್ ಕುಮಾರ್ ಬಂಡಾಯ ನಂತರ ಕಾಂಗ್ರೆಸ್‌ಗೆ ಮತ್ತೊಂದು ಕಂಟಕ ಎದುರಾಗಿದೆ. ಹೌದು, ದಾವಣಗೆರೆ ಜಿಲ್ಲಾ  ಕಾಂಗ್ರೆಸ್‌ನಲ್ಲಿ ಕೆಲ ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಆಪ್ತನಾಗಿದ್ದ ಪ್ರಭಾವಿ ಅಹಿಂದ ನಾಯಕ ಡಾ. ವೈ ರಾಮಪ್ಪ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. 

ಶಾಮನೂರು ಕುಟುಂಬದಿಂದ ಅಹಿಂದ ವರ್ಗಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಅಹಿಂದ ವರ್ಗದ ಮುಖಂಡ ಡಾ.ವೈ..ರಾಮಪ್ಪ ಅವರು ಕಾಂಗ್ರೆಸ್‌ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ಭೋವಿ ಸಮಾಜದ ಮುಖಂಡ ವೈ.ರಾಮಪ್ಪ ಸೇರಿದಂತೆ ಹಲವು ನಾಯಕರು ಸಾಮೂಹಿಕವಾಗಿ ಕಾಂಗ್ರೆಸ್‌ಗೆ  ರಾಜೀನಾಮೆ ನೀಡಲು ನಿರ್ಧರಿಸಿದ್ದಾರಂತೆ.  

ಸುಳ್ಳು ಹೇಳೋದು ಪ್ರಧಾನಿಗೆ ಶೋಭೆ ತರಲ್ಲ: ಗಣಿಹಾರ

ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಪ್ರೈವೇಟ್ ಲಿಮಿಟೆಡ್ ರೀತಿ ಇದೆ. ಒಂದು ಕುಟುಂಬಕ್ಕೆ ಮಾತ್ರ ಜಿಲ್ಲೆಯಲ್ಲಿ ಕಾಂಗ್ರೆಸ್ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ. ಕನಿಷ್ಠ ಜ್ಞಾನವಿಲ್ಲದ ವ್ಯಕ್ತಿ ನಮ್ಮ ಪಕ್ಷಕ್ಕೆ ಜಿಲ್ಲಾಧ್ಯಕ್ಷರಾಗಿದ್ದಾರೆ. ಎಲ್ಲಾ ಚುನಾವಣೆಗೆ ನನ್ನನ್ನು ಮತ್ತು ನಮ್ಮ ಅಹಿಂದ ಸಮಾಜವನ್ನು ಬಳಸಿಕೊಂಡಿದ್ದಾರೆ. ಆದರೆ ಈ ಚುನಾವಣೆಯಲ್ಲಿ ನಮ್ಮ ಭೋವಿ ಸಮಾಜವನ್ನು ಕಡೆಗಣಿಸಿದ್ದಾರೆ. ನಾಲ್ಕೈದು ಜನರ ಬಳಿ ಕಾಂಗ್ರೆಸ್ ಇದೆ ವಿನಃ ಉಳಿದವರಿಗೆ ಅದು ಮರೀಚಿಕೆಯಾಗಿದೆ. ಚುನಾವಣಾ ಸಂದರ್ಭದಲ್ಲಿ ಒಂದಿಬ್ಬರು ಎಸ್ಸಿ ಎಸ್ಟಿಗಳನ್ನು ಕರೆದುಕೊಂಡು ನಂತರ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಆಸ್ತಿ ಪಾಸ್ತಿಗಳ ಉಳಿಸಿಕೊಳ್ಳಲು ಕಾಂಗ್ರೆಸ್ ಅನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಅಹಿಂದ ವರ್ಗಕ್ಕೆ ಘೋರವಾದ ಅನ್ಯಾಯ ಮಾಡಿದ್ದಾರೆ. ಅಹಿಂದ ವರ್ಗಕ್ಕೆ ಸೇರಿದ ವ್ಯಕ್ತಿಗೆ ಟಿಕೆಟ್ ತಪ್ಪಿಸಿ ಕೇವಲವಾಗಿ ಮಾತನಾಡಿದ್ದಾರೆ. ಚುನಾವಣೆಗೆ ದುಡಿಯಲು ಮಾತ್ರ ಅಹಿಂದ ವರ್ಗ ಬೇಕು. ಉಳಿದಂತೆ ಯಾವುದಕ್ಕೂ ಅಹಿಂದ ಬೇಡವಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಕ್ಕೆ‌ ರಾಜೀನಾಮೇ ನೀಡುತ್ತಿದ್ದೇವೆ. ದೆಹಲಿಗೆ ಹೋಗಿ ಬಂದ ನಂತರ. ಯಾವ ಪಕ್ಷಕ್ಕೆ ಬೆಂಬಲ ಎಂದು ಪ್ರಕಟ ಮಾಡುತ್ತೇನೆ ಎಂದು ವೈ.ರಾಮಪ್ಪ ಅವರು ತಿಳಿಸಿದ್ದಾರೆ. 

click me!