
ಬೆಂಗಳೂರು(ಫೆ.08): ನೆರೆಯ ಗೋವಾ(Goa) ರಾಜ್ಯದ ವಿಧಾನಸಭಾ ಚುನಾವಣೆಗೆ(Assembly Election) ಕರ್ನಾಟಕದ ಬಿಜೆಪಿಯ(BJP) ಐವತ್ತಕ್ಕೂ ಹೆಚ್ಚು ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಅಲ್ಲಿನ ಎಲ್ಲ 40 ವಿಧಾನಸಭಾ ಕ್ಷೇತ್ರಗಳಿಗೂ ರಾಜ್ಯದ ಈ ಮುಖಂಡರು ಹಾಗೂ ಕಾರ್ಯಕರ್ತರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಒಟ್ಟಾರೆ ಗೋವಾದಲ್ಲಿನ ಕರ್ನಾಟಕದ(Karnataka) ಮುಖಂಡರ ಪ್ರಚಾರದ ನೇತೃತ್ವವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರಿಗೆ ನೀಡಲಾಗಿದೆ. ಅವರು ರಾಜ್ಯ ಮುಖಂಡರ ಪ್ರವಾಸ ಮತ್ತು ಕೆಲಸದ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.
Goa Elections: ತಂದೆಯನ್ನು ನೆನಪಿಸಿಕೊಳ್ಳಿ, ಬಿಜೆಪಿ ಬಿಡದಂತೆ ಪರಿಕ್ಕರ್ ಪುತ್ರನಿಗೆ ಸಿ. ಟಿ. ರವಿ ಮನವಿ!
ಅದರಲ್ಲಿ ಸಚಿವರಾದ ಬೈರತಿ ಬಸವರಾಜು, ಪ್ರಭು ಚವ್ಹಾಣ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಮಾಜಿ ಸಚಿವ ಕಟ್ಟಾಸುಬ್ರಮಣ್ಯನಾಯ್ಡು, ಶಾಸಕರಾದ ಅಭಯ್ ಪಾಟೀಲ್, ಪಿ.ರಾಜೀವ್, ವೇದವ್ಯಾಸ ಕಾಮತ್, ರಾಜುಗೌಡ, ಬಸವರಾಜ ಮತ್ತಿಮಡು, ಅನಿಲ್ ಬೆನಕೆ ಸೇರಿದಂತೆ ಹಲವು ಮುಖಂಡರು ಕಳೆದ ಹಲವು ದಿನಗಳಿಂದ ತಮಗೆ ವಹಿಸಿದ ಗೋವಾದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿ ಚುನಾವಣಾ ಕೆಲಸದಲ್ಲಿ ನಿರತರಾಗಿದ್ದಾರೆ.
ಅಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿನ ಜಾತಿ ಸಮೀಕರಣ(Caste Assimilation), ಪಕ್ಷದ ಸಂಘಟನಾ ಸಾಮರ್ಥ್ಯ ಆಧರಿಸಿ ಒಂದೊಂದು ಕ್ಷೇತ್ರಗಳಿಗೆ ಒಬ್ಬರಿಂದ ನಾಲ್ಕು ಮಂದಿವರೆಗೆ ಉಸ್ತುವಾರಿ ವಹಿಸಲಾಗಿದೆ.
ಬೈರತಿ ಬಸವರಾಜು, ಸತೀಶ್ ರೆಡ್ಡಿ, ವೇದವ್ಯಾಸ ಕಾಮತ್, ರಾಜುಗೌಡ ಮತ್ತಿತರ ಕೆಲವರಿಗೆ ತಲಾ ಒಂದೊಂದು ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ. ಲಕ್ಷ್ಮಣ್ ಸವದಿ ಅವರಿಗೆ ಎರಡು ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿದೆ.
ಪ್ರಚಾರದ ಅವಧಿ ಮುಗಿಯುವವರೆಗೆ ಈ ಎಲ್ಲ ಮುಖಂಡರು ಗೋವಾದ ಬಿಜೆಪಿ ಮುಖಂಡರೊಂದಿಗೆ ಸಮನ್ವಯತೆಯೊಂದಿಗೆ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ(Campaign), ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
5 State Elections: ಬಿಜೆಪಿಯ ಚಿನ್ನದ ಗೋವಾ ಬೇಕೆ? ಕಾಂಗ್ರೆಸ್‌ನ ಗಾಂಧಿ ಪರಿವಾರ ಗೋವಾ ಬೇಕೆ?
ಪೊಂಡಾ: ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, ‘ನಿಮಗೆ ಬಿಜೆಪಿಯ ಚಿನ್ನದ ಗೋವಾ ಬೇಕಾ ಅಥವಾ ಕಾಂಗ್ರೆಸ್‌ನ (Congress) ಗಾಂಧಿ ಪರಿವಾರದ ಗೋವಾ ಬೇಕೇ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ’ ಎಂದು ಹೇಳಿದ್ದರು. ಅಲ್ಲದೆ ಬಿಜೆಪಿಯಿಂದ ಮಾತ್ರವೇ ಕರಾವಳಿಯ ಪುಟ್ಟರಾಜ್ಯದ ಅಭಿವೃದ್ಧಿ ಸಾಧ್ಯ. ಇಲ್ಲಿ ಬಿಜೆಪಿ ಜಯ ಖಚಿತ ಎಂದು ಹೇಳಿದ್ದರು.
ಭಾನುವಾರ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ ಅವರು, ‘ಕಾಂಗ್ರೆಸ್‌ನ ಗಾಂಧೀ ಪರಿವಾರವು ಗೋವಾವನ್ನು ತಮ್ಮ ಪ್ರವಾಸದ ತಾಣವಾಗಿ ಪರಿಗಣಿಸುತ್ತದೆ. ಆದರೆ ಬಿಜೆಪಿಯು ಗೋವಾ ಮುಖ್ಯಮಂತ್ರಿಯಾಗಿದ್ದ ದಿ. ಮನೋಹರ್ ಪರ್ರಿಕರ್ ಅವರ ಚಿನ್ನದ ಗೋವಾದ ಕನಸನ್ನು ನನಸು ಮಾಡಿದೆ’ ಎಂದು ಹೇಳಿದರು.
‘ಇನ್ನು ಗೋವಾದಲ್ಲಿ ಚುನಾವಣಾ ಅಖಾಡಕ್ಕಿಳಿದ ಟಿಎಂಸಿ, ಆಪ್, ಎನ್‌ಸಿಪಿ ಪಕ್ಷಗಳು ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ಅಥವಾ ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆಗಾಗಿ ಸ್ಪರ್ಧಿಸುತ್ತಿವೆ. ಈ ಪಕ್ಷಗಳಿಂದ ಗೋವಾದಲ್ಲಿ ಸರ್ಕಾರ ರಚನೆ ಅಸಾಧ್ಯ. ಬಿಜೆಪಿಯಿಂದ ಮಾತ್ರವೇ ಸರ್ಕಾರ ರಚನೆ ಸಾಧ್ಯ. ರಾಜಕೀಯ ಸ್ಥಿರತೆ ಇರದಿದ್ದರೆ, ಅಭಿವೃದ್ಧಿ ನಿರೀಕ್ಷೆ ಸಾಧ್ಯವೇ ಇಲ್ಲ’ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.