ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ ರಾಜಕೀಯ ಪಕ್ಷಗಳಿಗೆ ಯಾರು ದೇಣಿಗೆ ಕೊಡ್ತಾರೆ ಅವರ ಹೆಸರು ಗೌಪ್ಯವಾಗಿ ಇಡಬೇಕೆಂದು ಕಾನೂನು ತಂದು, ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಬಿಜೆಪಿ ಹಗರಣ ಮಾಡಿದೆ. ಅವರು ಹಣ ಲೂಟಿ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ ಎಂದು ದೂರಿದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ
ವಿಜಯಪುರ(ಮಾ.24): ಬಾಂಡ್ ಹೆಸರಿನಲ್ಲಿ ₹12,930 ಕೋಟಿ ಬಿಜೆಪಿ ಲೂಟಿ ಮಾಡಿದೆ. ರಫೇಲ್ ಹಗರಣ ಮುಚ್ಚಿಹಾಕಿದಂತೆ ಇದನ್ನು ಮುಚ್ಚಿಹಾಕಲು ಯತ್ನಿಸಿದ್ದರು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ಆರೋಪಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ ರಾಜಕೀಯ ಪಕ್ಷಗಳಿಗೆ ಯಾರು ದೇಣಿಗೆ ಕೊಡ್ತಾರೆ ಅವರ ಹೆಸರು ಗೌಪ್ಯವಾಗಿ ಇಡಬೇಕೆಂದು ಕಾನೂನು ತಂದು, ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಬಿಜೆಪಿ ಹಗರಣ ಮಾಡಿದೆ. ಅವರು ಹಣ ಲೂಟಿ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ ಎಂದು ದೂರಿದರು.
2014ರ ಮುಂಚೆ ಬಿಜೆಪಿಯಲ್ಲಿ ಫಂಡ್ ಇರಲಿಲ್ಲ. ಆಗ ರಾಜನಾಥ ಸಿಂಗ್ ಅವರು ಪಕ್ಷದ ಎಲ್ಲರಿಗೂ ದೇಣಿಗೆ ಬೇಡಿದ್ದರು. ಅದಾದ ಬಳಿಕ 2024ರಲ್ಲಿ ಅಂದರೆ ಕೇವಲ ಹತ್ತೇ ವರ್ಷದಲ್ಲಿ ಶ್ರೀಮಂತ ಪಕ್ಷ ಆಗಿದ್ದಾರೆ ಎಂದರೆ ಇದು ಅಧಿಕೃತವಾಗಿ ಅವರು ಮಾಡಿದ ಭ್ರಷ್ಟಾಚಾರವಾಗಿದೆ. ಇದೀಗ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದ ನಂತರವೂ ಸಹ ₹8,310 ಕೋಟಿ ಬಾಂಡ್ ಪ್ರಿಂಟ್ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರದ ಖಜಾನೆಯಿಂದ ₹13 ಕೋಟಿ ಖರ್ಚು ಮಾಡಿದ್ದಾರೆ ಎಂದಿದ್ದಾರೆ ಎಂದು ಕಿಡಿಕಾರಿದರು.
ಈ ಸಲ ಟಿಕೆಟ್ ಬೇಡ ಎಂದಿದ್ದೆ, ಹೈಕಮಾಂಡ್ ಕೊಟ್ಟಿದೆ: ಸಂಸದ ರಮೇಶ್ ಜಿಗಜಿಣಗಿ
ಕೋವಿಡ್ ಸಮಯದಲ್ಲಿ ಫಾರ್ಮಾ ಕಂಪನಿಗಳಿಂದ ಇಂಜೆಕ್ಷನ್ ಖರೀದಿ ಮಾಡಲಿಕ್ಕೆ ಬಾಂಡ್‌ಗಳನ್ನು ಖರೀದಿ ಮಾಡಿದ್ದಾರೆ ಎಂಬುವುದು ಬಯಲಿಗೆ ಬಂದಿದೆ. ಹಣ ಗಳಿಸುವ ಸಲುವಾಗಿ ಭಾರತದ ಎಲ್ಲರಿಗೂ ಇಂಜೆಕ್ಷನ್ ಕೊಡಬೇಕೆಂದು ರೂಲ್ಸ್ ಮಾಡಿದರು. ಪಿಎಂ ಕೇರ್ ಫಂಡ್‌ನಲ್ಲಿ ಎಷ್ಟು ಹಣ ಬಂದಿದೆ ಎಂಬುವುದು ಹೊರಗೆ ಬಂದಿಲ್ಲ. ಯಾರೂ ಮಾಹಿತಿ ಕೇಳದಂತಹ ಕಾಯ್ದೆ ಮಾಡಿದ್ದಾರೆ. ಹಾಗಾಗಿ ಸುಪ್ರೀಂ ಕೋರ್ಟ್ ಅದನ್ನೂ ಸ್ವಯಂ ಕೇಸ್ ದಾಖಲಿಸಿಕೊಂಡು ಬಹಿರಂಗ ಮಾಡಬೇಕು ಎಂದು ಮನವಿ ಮಾಡಿದರು.
ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ ಎಂದು ಭಾಷಣ ಮಾಡಿ, ಅಲ್ಲಿಂದ ಫಂಡ್ ತೆಗೆದುಕೊಂಡಿದ್ದಾರೆಂದು ಆರೋಪಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಚೇರಮನ್ ನಿವೃತ್ತಿಯಾದರೂ ಹಗರಣ ಮುಚ್ಚಿಹಾಕಲು ಅವರನ್ನೇ ಮತ್ತೆರಡು ವರ್ಷ ಮುಂದುವರೆಸಿದ್ದಾರೆ. ತಕ್ಷಣವೇ ಅವರ ರಾಜೀನಾಮೆ ಪಡೆಯಬೇಕು. ಅಲ್ಲದೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಹಾಗೂ ಗೃಹ ಸಚಿವ ಅಮೀತ್ ಶಾ ಸಹ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಮಾಧ್ಯಮದಿಂದ ಇವರ ಹಗರಣ ಹೊರಗೆ ಬಂದಿದೆ. ತಮ್ಮ ವಿರುದ್ಧ ಯಾರೂ ನಿಲ್ಲಬಾರದು ಎಂಬ ದುರುದ್ದಶದಿಂದ ಎದುರಾಳಿ ಪಾರ್ಟಿಗಳಿಗೆ ಹಣ ಇಲ್ಲದಂತೆ ಸೋರ್ಸ್ ಕಟ್ ಮಾಡುತ್ತಿದ್ದಾರೆ. ಮಾಧ್ಯಮ ಹಾಗೂ ಸುಪ್ರೀಂ ಕೋರ್ಟ್ ಮೇಲೆ ಮಾತ್ರ ಜನರಿಗೆ ಭರವಸೆ ಇದೆ. ಸಂವಿಧಾನ ವಿರೋಧಿ ಕೆಲಸಗಳನ್ನು ನಿರಂತರವಾಗಿ ಬಿಜೆಪಿ ಮಾಡುತ್ತಿದ್ದು, ಬಿಜೆಪಿ ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.
ಅನಂತಕುಮಾರ್ ಹೆಗಡೆ ಬದಲು ಕಾರ್ಯಕರ್ತರಿಗೆ ಟಿಕೆಟ್ ಕೊಡಿ: ಛಲವಾದಿ ನಾರಾಯಣಸ್ವಾಮಿ
ಈ ಸಂದರ್ಭದಲ್ಲಿ ಮುಖಂಡ ನಾಗರಾಜ ಲಂಬು ಉಪಸ್ಥಿತರಿದ್ದರು.
ಕಾಂಗ್ರೆಸ್ 60 ವರ್ಷದಲ್ಲಿ ಮಾಡಿದ ಸಾಲದ ಎರಡಪಟ್ಟು ಹೆಚ್ಚು ನೀವು ಸಾಲ ಮಾಡಿದ್ದೀರಿ. ಅಲ್ಲದೆ 10 ಲಕ್ಷ ಕೋಟಿಗೂ ಹೆಚ್ಚು ಕಾರ್ಪೋರೇಟ್ ಕಂಪನಿಗಳ ಸಾಲಮನ್ನಾ ಮಾಡಿ, ಬ್ಯಾಂಕ್ ಗಳನ್ನೇ ದಿವಾಳಿ ಮಾಡಿದ್ದೀರಿ. ಒಟ್ಟಿನಲ್ಲಿ ಚಂದಾ ದೇವೊ ದಂಧಾ ಕರೊ, ದಂಧಾ ಕರೊ ಚಂದಾ ದೇವೊ ಆಗಿದೆ. ಮೋದಿ ವಿಶ್ವಗುರು ಅಲ್ಲಾ, ಹಗರಣಗಳ ಗುರು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ತಿಳಿಸಿದ್ದಾರೆ.