ಪಕ್ಷ ಕರೆದು ಟಿಕೆಟ್ ಕೊಟ್ಟರೆ ನಾನೇಕೆ ಬೇಡ ಅನ್ನಲಿ: ವಿಜಯಪುರ ಸಂಸದ ಜಿಗಜಿಣಗಿ

By Kannadaprabha NewsFirst Published Mar 24, 2024, 10:24 AM IST
Highlights

ನನಗೆ 90 ವರ್ಷವಾದರೂ ಪಕ್ಷ ಟಿಕೆಟ್ ಕೊಡ್ತಿನಿ ಎಂದ್ರೆ ಬೇಡಾ ಅನ್ನೋಕಾಗುತ್ತಾ? ಎಂದು ಪ್ರಶ್ನಿಸುವ ಮೂಲಕ ತಾವು ಮುಂದೆಯೂ ಇನ್ನೊಂದು ಬಾರಿ ನಿಲ್ಲುವ ಕುರಿತು ಸೂಚನೆ ನೀಡಿದ ಸಂಸದ ರಮೇಶ ಜಿಗಜಿಣಗಿ 

ವಿಜಯಪುರ(ಮಾ.24):  ನನಗೆ ಟಿಕೆಟ್ ತಪ್ಪಿಸಲು ಹಲವರು ಪ್ರಯತ್ನ ಮಾಡಿದರು. ಆದರೆ ಕೊನೆಗೆ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನನಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸದರೂ ಮತ್ತೆ ನನಗೆ ಟಿಕೆಟ್ ಸಿಕ್ಕಿದೆ ಎಂದಿದ್ದಾರೆ. ಇನ್ನು ಇದು ತಮ್ಮ ಕೊನೆಯ ಚುನಾವಣೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಿಗಜಿಣಗಿ, ನಾನು ಸಭೆಗಳಲ್ಲಿ ಈಗಾಗಲೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೇನೆ. ಈ ಸಲವೇ ಟಿಕೆಟ್ ಬೇಡ ಎಂದು ನಾನು ಹಾಗೂ ನನ್ನ ಮಕ್ಕಳು ಸೇರಿ ಡಿಸೈಡ್ ಮಾಡಿದ್ದೆವು. ಆದರೆ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ, ನಾನು ಚುನಾವಣೆ ಮಾಡುತ್ತಿದ್ದೇನೆ. ನಾನು ಮುಂದಿನ ಬಾರಿ ಎಲೆಕ್ಷನ್ ನಿಲ್ಲೋದಿಲ್ಲ ಎಂದು ಹೇಳಿದ್ದೇನೆ. ಆದರೆ ನನಗೆ 90 ವರ್ಷವಾದರೂ ಪಕ್ಷ ಟಿಕೆಟ್ ಕೊಡ್ತಿನಿ ಎಂದ್ರೆ ಬೇಡಾ ಅನ್ನೋಕಾಗುತ್ತಾ? ಎಂದು ಪ್ರಶ್ನಿಸುವ ಮೂಲಕ ತಾವು ಮುಂದೆಯೂ ಇನ್ನೊಂದು ಬಾರಿ ನಿಲ್ಲುವ ಕುರಿತು ಸೂಚನೆ ನೀಡಿದ್ದಾರೆ. ಈ ಬಾರಿ ನಾನು ಟಿಕೆಟ್ ಘೋಷಣೆ ಬಳಿಕ ಜಿಲ್ಲೆಯಲ್ಲಿ ಸಂಚಾರ ಮಾಡುತ್ತಿದ್ದೇನೆ. ನೀವು ಬರಬೇಡಿ ನಾವು ಮತ ಹಾಕುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೂ ಚುನಾವಣೆಗಾಗಿ ಜಿಲ್ಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದೇನೆ. ಬಿಜೆಪಿ ಮುಖಂಡರು ನಡೆಸುವ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.

ನನಗೆ ಟಿಕೆಟ್‌ ಸಿಕ್ಕಿದ್ದು ಕಾರ್ಯಕರ್ತರಿಗೆ ಸಿಕ್ಕಂತೆ: ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹರ್ಷ

ಈಶ್ವರಪ್ಪ ಸಂಘ ಪರಿವಾರದಿಂದ ಬಂದವರು, ನಾನು ಸಂಘ ಪರಿವಾರದಿಂದ ಬಂದವನಲ್ಲ‌. ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲರ ಗರಡಿಯಲ್ಲಿ ಬೆಳೆದವನು. ನಾನು ಸಂಘ ಪರಿವಾರದ ಬಗ್ಗೆ ಈಶ್ವರಪ್ಪ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಎಂದರು.

click me!