* ವಿಂಬಲ್ಡನ್ ಗ್ರ್ತಾನ್‌ಸ್ಲಾಂನಿಂದ ಹಿಂದೆ ಸರಿದ ಸಿಮೋನಾ ಹಾಲೆಪ್
* ಸಿಮೋನಾ ಹಾಲೆಪ್ 2019ರ ವಿಂಬಲ್ಡನ್‌ನ ಮಹಿಳಾ ಸಿಂಗಲ್ಸ್ ಚಾಂಪಿಯನ್
* ಭಾರತದ ರಾಮ್‌ಕುಮಾರ್ ರಾಮನಾಥನ್ ಗ್ರ್ಯಾನ್ ಸ್ಲಾಂ ಪ್ರಧಾನ ಸುತ್ತಿಗೇರಲು ಮತ್ತೊಮ್ಮೆ ವಿಫಲ
ಲಂಡನ್(ಜೂ.26): ಹಾಲಿ ಚಾಂಪಿಯನ್ ರೊಮೇನಿಯಾದ ಸಿಮೋನಾ ಹಾಲೆಪ್ ಎಡಗಾಲಿನ ಗಾಯಕ್ಕೆ ತುತ್ತಾಗಿದ್ದು, ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ನವೋಮಿ ಒಸಾಕ ಬಳಿಕ ಟೂರ್ನಿಯಿಂದ ಹಿಂದೆ ಸರಿದಿರುವ 2ನೇ ತಾರಾ ಆಟಗಾರ್ತಿ ಹಾಲೆಪ್. 2019ರ ವಿಂಬಲ್ಡನ್‌ನ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿದ್ದ ಹಾಲೆಪ್ ಕಳೆದ ತಿಂಗಳು ಇಟಲಿ ಓಪನ್ ವೇಳೆ ಗಾಯಗೊಂಡಿದ್ದರು. ಫ್ರೆಂಚ್ ಓಪನ್‌ಗೂ ಅವರು ಗೈರಾಗಿದ್ದರು. ಜೂನ್ 28ರಿಂದ ವಿಂಬಲ್ಡನ್ ಆರಂಭಗೊಳ್ಳಲಿದೆ. ಕೋವಿಡ್‌ನಿಂದಾಗಿ 2020ರ ಟೂರ್ನಿ ರದ್ದಾಗಿತ್ತು.
ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ಪ್ರಧಾನ ಸುತ್ತಿಗೇರಲು ರಾಮ್‌ಗೆ ಬೇಕಿದೆ ಇನ್ನೊಂದು ಗೆಲುವು..!
ವಿಂಬಲ್ಡನ್: ಪ್ರಧಾನ ಸುತ್ತಿಗೇರದ ರಾಮ್
ಲಂಡನ್: ಭಾರತದ ರಾಮ್‌ಕುಮಾರ್ ರಾಮನಾಥನ್ ಮತ್ತೊಮ್ಮೆ ಗ್ರ್ಯಾನ್ ಸ್ಲಾಂ ಪ್ರಧಾನ ಸುತ್ತಿಗೇರಲು ವಿಫಲರಾಗಿದ್ದಾರೆ. ಅರ್ಹತಾ ಸುತ್ತಿನ 3ನೇ ಪಂದ್ಯದಲ್ಲಿ 4 ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡರೂ, 5 ಸೆಟ್‌ಗಳ ರೋಚಕ ಹೋರಾಟದಲ್ಲಿ ಆಸ್ಪ್ರೇಲಿಯಾದ ಮಾರ್ಕ್ ಪೋಲ್ಸ್ಮನ್ ವಿರುದ್ಧ 3-6,6-3,6-7(2),6-3,9-11ರಲ್ಲಿ ಸೋಲು ಕಂಡರು.
2015ರ ಬಳಿಕ ಗ್ರ್ಯಾನ್ ಸ್ಲಾಂಗೇರಲು ರಾಮ್ ಪ್ರಯತ್ನಿಸಿದ್ದು ಇದು 7ನೇ ಬಾರಿ. ಈಗಿನ ಪೀಳಿಗೆಯ ಭಾರತೀಯ ಟೆನಿಸಿಗರ ಪೈಕಿ ರಾಮ್‌ಕುಮಾರ್ ಒಬ್ಬರೇ ಇನ್ನೂ ಗ್ರ್ಯಾನ್ ಸ್ಲಾಂನಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿಲ್ಲ.