* ಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕನಸಿನ ಯೋಜನೆ ಡೆಲ್ಲಿ ಕ್ರೀಡಾ ವಿವಿ ಆರಂಭ
* ಡೆಲ್ಲಿ ಕ್ರೀಡಾ ವಿವಿ ಉಪಕುಲಪತಿಯಾಗಿ ಕರ್ಣಂ ಮಲ್ಲೇಶ್ವರಿ ನೇಮಕ
* ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳಾ ಅಥ್ಲೀಟ್
ನವದೆಹಲಿ(ಜೂ.23): ಮಾಜಿ ಒಲಿಂಪಿಕ್ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ ಅವರನ್ನು ಡೆಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯಾಗಿ ನೇಮಕ ಮಾಡಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಆದೇಶ ಹೊರಡಿಸಿದೆ.
ಲೆಫ್ಟಿನೆಂಟ್ ಗವರ್ನರ್ ಹಾಗೂ ಡೆಲ್ಲಿ ಕ್ರೀಡಾ ವಿಶ್ವಾವಿದ್ಯಾಲಯದ ಚಾನ್ಸಲರ್ ಪದ್ಮಶ್ರೀ ಪ್ರಶಸ್ತಿ ವಿಜೇತೆಯನ್ನು ಮೊದಲ ಉಪ ಕುಲಪತಿಯಾಗಿ ನೇಮಿಸಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮಾಜಿ ವೇಟ್‌ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೊದಲ ಮಹಿಳಾ ಅಥ್ಲೀಟ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ 8 ವರ್ಷ ಭರ್ತಿ; ಧೋನಿ ನಾಯಕತ್ವಕ್ಕೆ ಐಸಿಸಿ ಸೆಲ್ಯೂಟ್
ಡೆಲ್ಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ಆರಂಭವಾಗಿದೆ. ನಮ್ಮ ಬಹುದೊಡ್ಡ ಕನಸೊಂದು ನನಸಾಗಿದೆ. ಕರ್ಣಂ ಮಲ್ಲೇಶ್ವರಿಯವರು ಮೊದಲ ಉಪಕುಲಪತಿಯಾಗಿದ್ದಾರೆ ಎಂದು ತಿಳಿಸಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಡೆಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
दिल्ली स्पोर्ट्स यूनिवर्सिटी शुरू हो रही है। हमारा बहुत बड़ा सपना पूरा हुआ। मुझे ये कहते हुए बेहद गर्व है कि ओलम्पिक पदक विजेता कर्णम मल्लेश्वरी जी पहली कुलपति होंगी। आज उनके साथ मुलाक़ात हुई और विस्तार से चर्चा हुई। pic.twitter.com/h0At7FMe4b
— Arvind Kejriwal (@ArvindKejriwal)2000ನೇ ಇಸವಿಯಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ 110 ಕೆ.ಜಿ ಸ್ನ್ಯಾಚ್ ಹಾಗೂ 130 ಕೆ.ಜಿ ಕ್ಲೀನ್ ಅಂಡ್ ಜೆರ್ಕ್ ಬಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಈ ಮೂಲಕ ಭಾರತ ಮಹಿಳಾ ಅಥ್ಲೀಟ್ಸ್ ವಿಭಾಗದಲ್ಲಿ ಪದಕದ ಖಾತೆ ಆರಂಭಿಸಿದ್ದರು.
2019ರ ಡೆಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಡೆಲ್ಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ಸ್ಥಾಪಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ವ್ಯಾಸಂಗ ಮಾಡಬಹುದಾಗಿದೆ. ಇದರ ಜತೆಗೆ ಕ್ರಿಕೆಟ್, ಫುಟ್ಬಾಲ್, ಹಾಕಿ ಹಾಗೂ ಇನ್ನಿತರ ಕ್ರೀಡೆಯಲ್ಲಿ ಆಸಕ್ತಿಯುಳ್ಳವರು ಈ ಕ್ರೀಡಾ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಬಹುದಾಗಿದೆ.