
ನವದೆಹಲಿ(ಅ.21): ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಚಿನ್ನ ಗೆದ್ದ ಬಳಿಕ ಕ್ರೀಡೆಯಿಂದ ದೂರ ಉಳಿದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಬುಧವಾರದಿಂದ NIS ಪಟಿಯಾಲದಲ್ಲಿ ಅಭ್ಯಾಸಕ್ಕೆ ಮರಳಿದ್ದಾರೆ.
ಆಗಸ್ಟ್ 07ರಂದು ನಡೆದ ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಥ್ರೋ (Javelin Throw) ಫೈನಲ್‌ನಲ್ಲಿ 23 ವರ್ಷದ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದರು. ಇನ್ನು ವೈಯುಕ್ತಿಕ ವಿಭಾಗದಲ್ಲಿ ಅಭಿನವ್ ಬಿಂದ್ರಾ (Abhinav Bindra) ಬಳಿಕ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದ ಎರಡನೇ ಸಾಧಕ ಎನ್ನುವ ದಾಖಲೆಗೂ ನೀರಜ್ ಚೋಪ್ರಾ ಪಾತ್ರರಾಗಿದ್ದರು.
ಆಫ್ಘಾನ್ ಮಹಿಳಾ ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ; ತಾಲಿಬಾನ್ ಕ್ರೌರ್ಯ ಬಹಿರಂಗ ಪಡಿಸಿದ ಕೋಚ್!
ಟೋಕಿಯೋದಿಂದ ಹಿಂದಿರುಗಿದ ಬಳಿಕ ಸಾಲು ಸಾಲು ಸನ್ಮಾನ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಚೋಪ್ರಾ, ಬಳಿಕ ಮಾಲ್ಡೀವ್ಸ್ ಹಾಗೂ ದುಬೈ (Dubai) ಪ್ರವಾಸ ಕೈಗೊಂಡಿದ್ದರು. ಸುಮಾರು 2 ತಿಂಗಳು ಅಭ್ಯಾಸದಿಂದ ಬಿಡುವು ಪಡೆದಿದ್ದರು. ಈಗಾಗಲೇ 2021ರ ಸ್ಪರ್ಧೆಗಳಿಂದ ಹಿಂದೆ ಸರಿದಿರುವ ಚೋಪ್ರಾ, ಮುಂದಿನ ವರ್ಷ ನಡೆಯುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.
ನೀರಜ್ ಬ್ರ್ಯಾಂಡ್ ಸಾವಿರ ಪಟ್ಟು ಏರಿಕೆ, ಸಹಿ ಮಾಡಿದ್ದು ಒಂದೆರಡು ಸಂಸ್ಥೆಗಳ ಜತೆ ಅಲ್ಲ!
ನೀರಜ್ ಚೋಪ್ರಾ ಎನ್‌ಐಎಸ್ ಪಟಿಯಾಲ (NIS Patiala) ಅಭ್ಯಾಸ ನಡೆಸುತ್ತಿರುವ ಎರಡು ಫೋಟೋಗಳೊಂದಿಗೆ ಟ್ವೀಟ್ ಮಾಡಿದ್ದು, ಈ ವಾರದಿಂದ ಅಭ್ಯಾಸ ಆರಂಭವಾಗಿದ್ದು, ಈ ಮೊದಲಿದ್ದಷ್ಟೇ ಪದಕ ಗೆಲ್ಲುವ ಹಸಿವು ಈಗಲೂ ಇದೆ. ಕಳೆದ ಒಲಿಂಪಿಕ್ಸ್‌ಗೂ ಮುನ್ನ ನಡೆಸಿದ ಅಭ್ಯಾಸದಂತೆ ಈ ಬಾರಿಯೂ ಉತ್ತಮವಾಗಿದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು ಎಂದು ನೀರಜ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 1 ಚಿನ್ನ 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕಗಳನ್ನು ಜಯಿಸಿತ್ತು.
ರಾಷ್ಟ್ರೀಯ ಕಿರಿಯರ ಈಜು: ರಾಜ್ಯದ ರಿಧಿಮಾ ಹೊಸ ದಾಖಲೆ
ಬೆಂಗಳೂರು: 37ನೇ ಸಬ್-ಜೂನಿಯರ್ ಹಾಗೂ 47ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನ 2ನೇ ದಿನವಾದ ಬುಧವಾರ ಅತಿಥೇಯ ಕರ್ನಾಟಕ 25 ಪದಕಗಳನ್ನು ಬಾಚಿಕೊಂಡಿದೆ. ರಾಜ್ಯದ ರಿಧಿಮಾ 7 ವರ್ಷ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದರೆ, ಜಸ್ ಸಿಂಗ್ ಕೂಟದ ವೈಯಕ್ತಿಕ ನಾಲ್ಕನೇ ಚಿನ್ನ ಗೆದ್ದುಕೊಂಡರು.
ಅಕ್ಟೋಬರ್ 26ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಹಿರಿಯರ ಈಜು
ರಿಧಿಮಾ 100 ಮೀ. ಬ್ಯಾಕ್‌ಸ್ಟ್ರೋಕ್ ಗುಂಪು 2 ವಿಭಾಗದಲ್ಲಿ 1 ನಿಮಿಷ 04.87 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಒಲಿಂಪಿಯನ್ ಮಾನಾ ಪಟೇಲ್ 2014ರಲ್ಲಿ ಬರೆದಿದ್ದ (1 ನಿ. 05.30 ಸೆ.) ರಾಷ್ಟ್ರೀಯ ದಾಖಲೆಯನ್ನು ಮುರಿದರು. ಪುರುಷರ 100 ಮೀ. ಫ್ರೀಸ್ಟೈಲ್‌ನ ಗುಂಪು 5 ವಿಭಾಗದಲ್ಲಿ ಜಸ್ ಸಿಂಗ್ ಚಿನ್ನ ಗೆದ್ದರು. ಮೊದಲ ದಿನ ಅವರು 3 ಚಿನ್ನ ಗೆದ್ದಿದ್ದರು. ಕರ್ನಾಟಕದ ಸಂಭವ್ ಆರ್. ಪುರುಷರ 100 ಮೀ. ಬಟರ್‌ಫ್ಲೈ ಗುಂಪು 1 ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದು, ಕೂಟದಲ್ಲಿ 2ನೇ ಚಿನ್ನ ಪಡೆದರು. ಕರ್ನಾಟದ ಮೊದಲ ದಿನ 10ಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.