* ಆಸ್ಟ್ರೇಲಿಯಾ ಓಪನ್ ಸಂಘಟಕರಿಗೆ ಸವಾಲೆಸೆದ ದಿಗ್ಗಜ ಟೆನಿಸಿಗ ನೊವಾಕ್ ಜೋಕೋವಿಚ್
* ತಾವು ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ನೀಡಲ್ಲವೆಂದ ಸರ್ಬಿಯಾದ ಟೆನಿಸಿಗ
* ಲಸಿಕೆ ಪ್ರಮಾಣ ಪತ್ರ ನೀಡಲೇಬೇಕು ಎನ್ನುವ ನಿಯಮ ಜಾರಿ ಮಾಡಿದರೆ ನಾನು ಟೂರ್ನಿಯಲ್ಲಿ ಆಡುವುದಿಲ್ಲವೆಂದ ಜೋಕೋ
ಬೆಲ್ಗ್ರೇಡ್(ಅ.20): ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ (Novak Djokovic) 2022ರ ಆರಂಭದಲ್ಲಿ ನಡೆಯಲಿರುವ ಆಸ್ಪ್ರೇಲಿಯನ್ ಓಪನ್ (Australian Open) ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಗೆ ಗೈರಾಗುವ ಸಾಧ್ಯತೆ ಇದೆ. ಟೂರ್ನಿ ನಡೆಯುವ ಮೆಲ್ಬರ್ನ್ ನಗರಕ್ಕೆ ಪ್ರವೇಶಿಸಲು ಕೋವಿಡ್ ಲಸಿಕೆ ಪಡೆದ ಮಾಹಿತಿಯನ್ನು ನೀಡಬೇಕು ಎನ್ನುವ ಸ್ಥಳೀಯ ಆಡಳಿತದ ಮಾರ್ಗಸೂಚಿಯನ್ನು ವಿರೋಧಿಸಿರುವ ಜೋಕೋವಿಚ್, ತಾವು ಲಸಿಕಾಕರಣದ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.
ವಿಕ್ಟೋರಿಯಾ ರಾಜ್ಯದ ಮುಖ್ಯಸ್ಥ ಡ್ಯಾನ್ ಆಂಡ್ರೋಸ್ (Dan Andrews), ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕೋವಿಡ್ 19 ಲಸಿಕೆ (Covid 19 Vaccine) ಪಡೆಯದ ಆಟಗಾರರಿಗೆ ಟೂರ್ನಿಯಲ್ಲಿ ಅವಕಾಶ ನೀಡಲಾಗುವುದಿಲ್ಲ. ಈ ತೀರ್ಮಾನಕ್ಕೆ ಯಾವುದೇ ವಿನಾಯಿತಿ ನೀಡುವುದಿಲ್ಲ. ಲಸಿಕೆ ಪಡೆಯದ ಆಟಗಾರರಿಗೆ ಆಸ್ಟ್ರೇಲಿಯಾಗೆ ಬರಲು ವೀಸಾ (Visa) ಸಿಗಲಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಡ್ಯಾನ್ ಆಂಡ್ರೋಸ್ ಹೇಳಿದ್ದಾರೆ.
US Open ಜೋಕೋಗೆ ಸೋಲಿನ ಶಾಕ್, ಡೇನಿಲ್ ಮೆಡ್ವೆಡೆವ್ ಚಾಂಪಿಯನ್..!
ಕೊರೋನಾ ವೈರಸ್ (Coronavirus) ನೀವು ಯಾವ ರ‍್ಯಾಂಕಿಂಗ್ ಹೊಂದಿದ್ದೀರಾ ಅಥವಾ ಎಷ್ಟು ಗ್ರ್ಯಾನ್ ಸ್ಲಾಂ ಜಯಿಸಿದ್ದೀರಾ ಎಂದು ಕೇಳಿಕೊಂಡು ಬರುವುದಿಲ್ಲ. ಒಂದು ವೇಳೆ ವೀಸಾ ಪಡೆದು ಆಸ್ಟ್ರೇಲಿಯಾಗೆ ಬಂದಿಳಿದರೂ ಕೆಲವು ವಾರಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಡ್ಯಾನ್ ಆಂಡ್ರೋಸ್ ತಿಳಿಸಿದ್ದಾರೆ.
‘ನಾನು ಕೋವಿಡ್ ಲಸಿಕೆ ಪಡೆದಿದ್ದೇನೋ ಇಲ್ಲವೋ ಎನ್ನುವ ಮಾಹಿತಿಯನ್ನು ನಾನು ನೀಡುವುದಿಲ್ಲ. ಇತ್ತೀಚೆಗೆ ತೀರಾ ವೈಯಕ್ತಿಕ ಎನಿಸಿರುವ ವಿಚಾರಗಳ ಬಗ್ಗೆಯೂ ಆಯೋಜಕರು ಮಾಹಿತಿ ಕಲೆಹಾಕುತ್ತಿದ್ದಾರೆ. ಲಸಿಕೆ ಪ್ರಮಾಣ ಪತ್ರ ನೀಡಲೇಬೇಕು ಎನ್ನುವ ನಿಯಮ ಜಾರಿ ಮಾಡಿದರೆ ನಾನು ಟೂರ್ನಿಯಲ್ಲಿ ಆಡುವುದಿಲ್ಲ’ ಎಂದು ಜೋಕೋವಿಚ್ ಸರ್ಬಿಯಾದ ಸ್ಥಳೀಯ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
US Open ಅನುಚಿತ ವರ್ತನೆ ತೋರಿದ ಜೋಕೋಗೆ 7 ಲಕ್ಷ ರೂ ದಂಡ!
ಮೆಲ್ಬರ್ನ್‌ನಲ್ಲಿ (Melbourne) ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೋಕೋವಿಚ್ ಅತಿ ಹೆಚ್ಚು ಬಾರಿ ಅಂದರೆ 9 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನಾನು ಖಂಡಿತವಾಗಿಯೂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತೇನೆ ಎಂದು ವಿಶ್ವದ ನಂ.1 ಶ್ರೇಯಾಂಕಿತ ಟೆನಿಸಿಗ ಜೋಕೋವಿಚ್ ಹೇಳಿದ್ದಾರೆ.
ಸರ್ಬಿಯಾದ ಟೆನಿಸಿಗ ಜೋಕೋವಿಚ್ ನವೆಂಬರ್ 01ರಿಂದ ಆರಂಭವಾಗಲಿರುವ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ಪಾಲ್ಗೊಳ್ಳುವುದರೊಂದಿಗೆ ಸ್ಪರ್ಧಾತ್ಮಕ ಟೆನಿಸ್‌ಗೆ (Tennis) ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಇದಾದ ಬಳಿಕ ನವೆಂಬರ್ 25ರಿಂದ ಡಿಸೆಂಬರ್ 05ರವರೆಗೆ ನಡೆಯಲಿರುವ ಡೇವಿಸ್ ಕಪ್ (Davis Cup) ಟೂರ್ನಿಯಲ್ಲಿ ಜೋಕೋ ಸರ್ಬಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಅಂಡರ್-17 ಟಿಟಿ: ಪಯಾಸ್ ಜೈನ್ ವಿಶ್ವ ನಂ.1!
ನವದೆಹಲಿ: ಭಾರತದ ಪಯಾಸ್ ಜೈನ್ ಟೇಬಲ್ ಟೆನಿಸ್ (Table Tennis) ಅಂಡರ್-17 ಬಾಲಕರ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ (World Rankings) ನಂ.1 ಸ್ಥಾನಕ್ಕೇರಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಆದ ಭಾರತದ 2ನೇ ಟಿಟಿ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್
ಜನವರಿ 2020ರಲ್ಲಿ ಮಾನವ್ ಥಾಕ್ಕರ್ ಅಂಡರ್-21 ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದರು. ಪಯಾಸ್ ಈ ಋುತುವಿನಲ್ಲಿ 3 ಅಂಡರ್-17 ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದಲ್ಲದೆ, ಅಂಡರ್-19 ವಿಭಾಗದಲ್ಲಿ ಒಂದೆರಡು ಕಂಚಿನ ಪದಕಗಳನ್ನೂ ಗೆದ್ದಿದ್ದಾರೆ.