ಸ್ಪೇನ್ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಇದೀಗ ಮತ್ತೊಮ್ಮೆ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ನ.05): ಎಟಿಪಿ ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಸ್ಪೇನ್ ತಾರೆ ರಾಫೆಲ್ ನಡಾಲ್ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಕಳೆದೊಂದು ವರ್ಷದಿಂದ 2ನೇ ಸ್ಥಾನದಲ್ಲಿದ್ದ ನಡಾಲ್, ಸರ್ಬಿಯಾದ ನೋವಾಕ್ ಜೋಕೋವಿಚ್ರನ್ನು ಹಿಂದಿಕ್ಕಿ 8ನೇ ಬಾರಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಬಹುಕಾಲದ ಪ್ರೇಯಸಿಯೊಂದಿಗೆ ನಡಾಲ್ ವಿವಾಹ
Rafael Nadal is back at No. 1 in the world for an 8th stint pic.twitter.com/lSNe1lEnDJ
— Adam Zagoria (@AdamZagoria)ವರ್ಷಾಂತ್ಯದ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜೋಕೋವಿಚ್ ಅಗ್ರಸ್ಥಾನಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಗಾಯದ ಸಮಸ್ಯೆಯಿಂದಾಗಿ ಪ್ಯಾರಿಸ್ ಮಾಸ್ಟರ್ಸ್ ಸೆಮೀಸ್‌ನಿಂದ ಹೊರಬಿದ್ದಿದ್ದ ನಡಾಲ್, ಮುಂಬರುವ ಎಟಿಪಿ ಫೈನಲ್ಸ್‌ನಲ್ಲಿ ಆಡುವುದು ಅನುಮಾನವಾಗಿದೆ.
US ಓಪನ್ 2019 ಚಾಂಪಿಯನ್ ಆಗಿ ಹೊರಹೊಮ್ಮಿದ ರಾಫೆಲ್ ನಡಾಲ್
ನಡಾಲ್ ಹಾಗೂ ಜೋಕೋವಿಚ್ ನಡುವೆ 600 ಅಂಕಗಳ ವ್ಯತ್ಯಾಸವಿದ್ದು, ಒಂದೊಮ್ಮೆ ಜೋಕೋವಿಚ್ ಲಂಡನ್‌ನಲ್ಲಿ ನಡೆಯಲಿರುವ ಎಟಿಪಿ ಫೈನಲ್ಸ್‌ನಲ್ಲಿ ಗೆದ್ದರೆ 1500 ಅಂಕಗಳನ್ನು ಗಳಿಸಲಿದ್ದಾರೆ.