
ಬಸೆಲ್(ಡಿ.08): ಟೆನಿಸ್ ದಿಗ್ಗಜ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಕೋಟ್ಯಾಂತರ ಟೆನಿಸಿಗರ ರೋಲ್ ಮಾಡೆಲ್. 20 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಫೆಡರರ್ ಟೆನಿಸ್ ಕ್ಷೇತ್ರದಲ್ಲಿ 21 ವರ್ಷ ಪೂರೈಸಿದ್ದಾರೆ. ಸುದೀರ್ಘ ವರ್ಷದಿಂದ ಟೆನಿಸ್ ದಿಗ್ಗಜನಾಗಿ ಮೆರೆಯುತ್ತಿರುವ ರೋಜರ್ ಫಡೆರರ್‌ಗೆ ವಿಶ್ವ ಟೆನಿಸ್ ಅಸೋಸಿಯೇಶನ್(ATP) ಪುಟ್ಟ ಬಾಲಕನ ವಿಡಿಯೋ ಶೇರ್ ಮಾಡಿ ಅಭಿನಂದಿಸಿದೆ.
ಇದನ್ನೂ ಓದಿ: ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮಡಿಲಿಗೆ 103ನೇ ಪ್ರಶಸ್ತಿ!
ಟೆನಿಸ್ ಜಗತ್ತಿನಲ್ಲಿ 21 ವರ್ಷ ಪೂರೈಸಿದ ಹಿನ್ನಲೆಯಲ್ಲಿ ATP ರೋಜರ್ ಫೆಡರರ್‌ಗೆ ಅಭಿನಂದನೆ ಸಲ್ಲಿಸಿದೆ. ಈ ವೇಳೆ ಪುಟ್ಟ ಬಾಲಕ ಫೆಡರರ್ ಅನುಕರಣೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಫೆಡರರ್ ಟೆನಿಸ್ ಪಂದ್ಯದ ವಿಡಿಯೋವನ್ನು ನೋಡುತ್ತಾ, ತಾನು ಕೂಡ ಅದೇ ರೀತಿ ಅನುಕರಣೆ ಮಾಡುತ್ತಿರುವ ವಿಡಿಯೋವನ್ನು ATP ಹಂಚಿಕೊಂಡಿದೆ.
ಇದನ್ನೂ ಓದಿ: ಪ್ಲೇಯರ್ಸ್ ಲಾಂಜ್‌ಗೆ ತೆರಳಲು ಫೆಡರರ್‌ಗೆ ಪ್ರವೇಶ ನಿರಾಕರಣೆ-ಮುಂದೇನಾಯ್ತು?
ATP ಹಂಚಿಕೊಂಡಿರುವ ವಿಡಿಯೋಗೆ ಟೆನಿಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವೃತ್ತಿಪರ ಟೆನಿಸ್ ಪಟುಗಳು, ಉದಯೋನ್ಮುಖ ಕ್ರೀಡಾಪಟುಗಳಿಗೂ ಫೆಡರರ್ ಮಾದರಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.