ದಕ್ಷಿಣ ಏಷ್ಯನ್ ಗೇಮ್ಸ್‌ನ ಆರನೇ ದಿನ ಕುಸ್ತಿ, ಶೂಟಿಂಗ್, ವೇಟ್‌ಲಿಫ್ಟಿಂಗ್ ಹಾಗೂ ಅಥ್ಲೆಟಿಕ್ಸ್ನಲ್ಲೂ ಭಾರತಕ್ಕೆ ಸ್ವರ್ಣ ಸಹಿತ ಹಲವು ಪದಕಗಳನ್ನು ಬಾಚಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಇದರ ಜತೆಗೆ 200ಕ್ಕೂ ಅಧಿಕ ಪದಕಗಳು ಭಾರತದ ಪಾಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಾಠ್ಮಂಡು(ಡಿ.08): 13ನೇ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಕೂಟದ 6ನೇ ದಿನವಾದ ಶನಿವಾರ ಭಾರತ 29 ಚಿನ್ನದೊಂದಿಗೆ ಬರೋಬ್ಬರಿ 49 ಪದಕ ಬಾಚಿಕೊಂಡು, ದ್ವಿಶತಕದ ಗಡಿ ದಾಟಿತು.
ದಕ್ಷಿಣ ಏಷ್ಯನ್ ಗೇಮ್ಸ್: ದ್ವಿಶತಕದತ್ತ ಭಾರತ ದಾಪುಗಾಲು!
undefined
6ನೇ ದಿನದ ಮುಕ್ತಾಯಕ್ಕೆ ಭಾರತ 110 ಚಿನ್ನ, 69 ಬೆಳ್ಳಿ ಹಾಗೂ 35 ಕಂಚಿನೊಂದಿಗೆ ಒಟ್ಟು 214 ಪದಕಗಳನ್ನು ಗೆದ್ದಿದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 43 ಚಿನ್ನದೊಂದಿಗೆ ಒಟ್ಟು 142 ಪದಕಗಳನ್ನು ಗೆದ್ದಿರುವ ಆತಿಥೇಯ ನೇಪಾಳ, ಭಾರತದ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ ಎನಿಸಿದೆ. ಶ್ರೀಲಂಕಾ 30 ಚಿನ್ನದೊಂದಿಗೆ ಒಟ್ಟು 170 ಪದಕ ಗೆದ್ದು 3ನೇ ಸ್ಥಾನದಲ್ಲಿ ಮುಂದುವರಿದಿದೆ.
ಶನಿವಾರ ಭಾರತದ ಈಜುಪಟುಗಳು 7 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದರು. ಪದಕ ಗೆದ್ದವರಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್, ಲಿಖಿತ್ ಎಸ್.ಪಿ. ಸಹ ಸೇರಿದ್ದರು. ಕುಸ್ತಿ, ಶೂಟಿಂಗ್, ವೇಟ್‌ಲಿಫ್ಟಿಂಗ್ ಹಾಗೂ ಅಥ್ಲೆಟಿಕ್ಸ್ನಲ್ಲೂ ಭಾರತಕ್ಕೆ ಸ್ವರ್ಣ ಸಹಿತ ಹಲವು ಪದಕಗಳನ್ನು ಗೆದ್ದುಕೊಂಡಿತು.
ಮಾಲ್ಡೀವ್ಸ್ 8 ರನ್‌ಗೆ ಆಲೌಟ್!
ದ. ಏಷ್ಯನ್ ಗೇಮ್ಸ್‌ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಕ್ರಿಕೆಟ್‌ನ 3ನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ನೇಪಾಳ ವಿರುದ್ಧ ಮಾಲ್ಡೀವ್ಸ್ ಕೇವಲ 8 ರನ್‌ಗಳಿಗೆ ಆಲೌಟ್ ಆಯಿತು. ಮಾಲ್ಡೀವ್ಸ್’ನ 9 ಆಟಗಾರ್ತಿಯರು ಡಕೌಟ್ ಆದರೆ, ಆಯಿಮಾ ಐಶತಾ 1 ರನ್‌ಗಳಿಸಿದರು. ಇತರೆ ರೂಪದಲ್ಲಿ 7 ರನ್‌ಗಳು ಬಂದವು. 9 ರನ್ ಗುರಿಯನ್ನು ನೇಪಾಳ 7 ಎಸೆತಗಳಲ್ಲಿ ತಲುಪಿತು.