ಬ್ಯಾಡ್ಮಿಂಟನ್‌ ಟೂರ್ನಿ ಫೈನಲ್‌ನಲ್ಲಿ ಎಡವಿದ ಸೌರಭ್‌

Published : Dec 02, 2019, 10:01 AM IST
ಬ್ಯಾಡ್ಮಿಂಟನ್‌ ಟೂರ್ನಿ ಫೈನಲ್‌ನಲ್ಲಿ ಎಡವಿದ ಸೌರಭ್‌

ಸಾರಾಂಶ

ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸೌರಬ್ ವರ್ಮಾ ಮುಗ್ಗರಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಸುವರ್ಣ ಅವಕಾಶ ಕೈತಪ್ಪಿದೆ.

ಲಖನೌ(ಡಿ.02): ಭಾರತದ ತಾರಾ ಶಟ್ಲರ್‌ ಸೌರಭ್‌ ವರ್ಮಾ, ಇಲ್ಲಿ ಭಾನುವಾರ ಮುಕ್ತಾಯವಾದ ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸೋಲುಂಡು ರನ್ನರ್‌ ಅಪ್‌ಗೆ ತೃಪ್ತಿಪಟ್ಟಿದ್ದಾರೆ.

ಇದನ್ನೂ ಓದಿ: PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್‌!

ಈ ವರ್ಷದಲ್ಲಿ ವಿಯೆಟ್ನಾಂ ಹಾಗೂ ಬಿಡಬ್ಲ್ಯೂಎಫ್‌ 100 ಪ್ರಶಸ್ತಿಗಳನ್ನು ಗೆದ್ದಿರುವ 26 ವರ್ಷ ವಯಸ್ಸಿನ ಭಾರತದ ಸೌರಭ್‌, ಚೈನೀಸ್‌ ತೈಪೆಯ ವಾಂಗ್‌ ತ್ಜು ವೀ ವಿರುದ್ಧ 15-21, 17-21 ನೇರ ಗೇಮ್‌ಗಳಲ್ಲಿ ಸೋಲು ಅನುಭವಿಸಿದರು. ಕೇವಲ 48 ನಿಮಿಷಗಳ ಆಟದಲ್ಲಿ ಸೌರಭ್‌, ಚೈನೀಸ್‌ ತೈಪೆ ಶಟ್ಲರ್‌ ಎದುರು ಶರಣಾದರು. ಇದರೊಂದಿಗೆ ಸೌರಭ್‌, ಸೂಪರ್‌ 300ರ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾದರು. ಮೂರು ವರ್ಷಗಳಲ್ಲಿ ವಾಂಗ್‌ ತ್ಜು ವೀ ಮೊದಲ ಪ್ರಶಸ್ತಿ ಗೆದ್ದರು.

ಇದನ್ನೂ ಓದಿ: ಬ್ಯಾಡ್ಮಿಂಟನ್ ಆಡಿ ರಿಲ್ಯಾಕ್ಸ್ ಆಗ್ತೀನೆಂದ ಸಂಸದ ತೇಜಸ್ವಿ ಸೂರ್ಯ

ಪಂದ್ಯದ ಆರಂಭದಿಂದಲೂ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಚೈನೀಸ್‌ ತೈಪೆ ಶಟ್ಲರ್‌, ಸೌರಭ್‌ ಮೇಲೆ ಸವಾರಿ ಮಾಡಿದರು. ಮೊದಲ ಗೇಮ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ವಾಂಗ್‌ ತ್ಜು, 6 ಅಂಕಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು. ಇನ್ನು 2ನೇ ಗೇಮ್‌ನಲ್ಲಿ ಸೌರಭ್‌ ಕೊಂಚ ಪ್ರತಿರೋಧ ತೋರಿದರು. ಆದರೂ ತೈಪೆ ಶಟ್ಲರ್‌ನ್ನು ಹಿಂದಿಕ್ಕುವಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ವಾಂಗ್‌ ತ್ಜು, 4 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಪಂದ್ಯ ಗೆದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
29 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ವಿಶ್ವಕಪ್‌ ಗೆದ್ದ ಭಾರತ!