ಭಾರತದ ಶಾಟ್‌ಪುಟ್ ಪಟು ತೇಜಿಂದರ್ ಪಾಲ್ ಸಿಂಗ್ ತೂರ್ ದಕ್ಷಿಣ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದ ವೇಳೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಡಿ.01): ಡಿ.1ರಿಂದ 10ರ ವರೆಗೆ ನೇಪಾಳದ ಕಠ್ಮಂಡು ಹಾಗೂ ಪೊಖಾರದಲ್ಲಿ ನಡೆಯಲಿರುವ 13ನೇ ದಕ್ಷಿಣ ಏಷ್ಯನ್ ಗೇಮ್ಸ್ನಲ್ಲಿ, ಏಷ್ಯನ್ ಗೇಮ್ಸ್ ಹಾಲಿ ಚಾಂಪಿಯನ್ 25 ವರ್ಷದ ಶಾಟ್‌ಪುಟ್ ಪಟು ಭಾರತದ ತೇಜಿಂದರ್ ಪಾಲ್ ಸಿಂಗ್ ತೂರ್ ಧ್ವಜಧಾರಿ ಆಗಲಿದ್ದಾರೆ.
ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಭಾರತ ಕಬಡ್ಡಿ ತಂಡ ಪ್ರಕಟ: ಬುಲ್ಸ್ ನಾಯಕ ಪವನ್‌ಗೆ ಜಾಕ್‌ಪಾಟ್..!
‘ದಕ್ಷಿಣ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದೀರಿ. ತೇಜಿಂದರ್, ಈ ಮೂಲಕ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ನಿಮ್ಮನ್ನು ಗೌರವಿಸುತ್ತಿದೆ’ ಎಂದು ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.
ಕಳೆದ ವರ್ಷ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್’ನಲ್ಲಿ ತೇಜಿಂದರ್ ಪಾಲ್ ಸಿಂಗ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇನ್ನು 59ನೇ ರಾಷ್ಟ್ರೀಯ ಮುಕ್ತ ಅಥ್ಲೇಟಿಕ್ಸ್ ಚಾಂಪಿಯನ್’ಶಿಪ್’ನಲ್ಲಿ 50.75 ಮೀಟರ್ ಶಾಟ್‌ಪುಟ್ ಎಸೆಯುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದರು.
ಮುಷ್ತಾಕ್ ಅಲಿ ಟ್ರೋಫಿ ಫೈನಲ್: ಕರ್ನಾಟಕಕ್ಕಿಂದು ತಮಿಳುನಾಡು ಚಾಲೆಂಜ್
ನೇಪಾಳವು ಮೂರನೇ ಬಾರಿಗೆ ದಕ್ಷಿಣ ಏಷ್ಯನ್ ಗೇಮ್ಸ್ ಕೂಟಕ್ಕೆ ಆತಿಥ್ಯ ವಹಿಸುತ್ತಿದ್ದು, 7 ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ. ಸುಮಾರು 2700 ಅಥ್ಲೀಟಿಕ್ಸ್’ಗಳು 26 ಕ್ರೀಡೆಗಳಲ್ಲಿ 319 ಚಿನ್ನ ಸಹಿತ 1,119 ಪದಕಗಳಿಗಾಗಿ ಹೋರಾಡಲಿದ್ದಾರೆ. ಭಾರತದಿಂದ 499 ಅಥ್ಲೀಟ್ಸ್’ಗಳು ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.