ದಕ್ಷಿಣ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ಕಬಡ್ಡಿ ತಂಡ ಚಿನ್ನದ ಪದಕ ಬಾಚಿಕೊಂಡಿದೆ. ಇದರ ಜತೆಗೆ ಭಾರತ ಮುನ್ನೂರು ಪದಕಗಳತ್ತ ದಾಪುಗಾಲಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಾಠ್ಮಂಡು(ಡಿ.10): 13ನೇ ದಕ್ಷಿಣ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ತ್ರಿಶತಕ ಪದಕಗಳತ್ತ ದಾಪುಗಾಲಿಟ್ಟಿದೆ. 8ನೇ ದಿನವಾದ ಸೋಮವಾರ ಭಾರತ 27 ಚಿನ್ನದೊಂದಿಗೆ 42 ಪದಕ ಜಯಿಸಿದೆ.
ದಕ್ಷಿಣ ಏಷ್ಯನ್ ಗೇಮ್ಸ್: 7ನೇ ದಿನ ಭಾರತಕ್ಕೆ 38 ಪದಕ!
ಒಟ್ಟಾರೆ ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚಿನೊಂದಿಗೆ 294 ಪದಕಗಳನ್ನು ಬಾಚಿಕೊಂಡಿದೆ. ತ್ರಿಶತಕಕ್ಕೆ 6 ಪದಕಗಳು ಕಡಿಮೆಯಾಗಿದೆ. 2016ರ ಆವೃತ್ತಿಯಲ್ಲಿ ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತ 309 ಪದಕ ಗೆದ್ದಿತ್ತು. ನೇಪಾಳ 49 ಚಿನ್ನ, 54 ಬೆಳ್ಳಿ, 92 ಕಂಚಿನೊಂದಿಗೆ 195 ಪದಕ ಗೆದ್ದಿದ್ದು 2ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 39 ಚಿನ್ನ, 79 ಬೆಳ್ಳಿ ಹಾಗೂ 118 ಕಂಚು ಗೆದ್ದಿದ್ದು 236 ಪದಕದೊಂದಿಗೆ 3ನೇ ಸ್ಥಾನ ಪಡೆದಿದೆ.
Sone ki 🐦!
The Indian Men's and Women's Kabaddi teams bagged 🥇 at the , making the nation proud!
Send in your congratulatory messages in the replies! pic.twitter.com/ICFVwJ8qol
ಸೋಮವಾರದ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್‌ಗಳು 6 ಚಿನ್ನ, 1 ಬೆಳ್ಳಿ ಜಯಿಸುವ ಮೂಲಕ ಮಿಂಚಿನ ಪ್ರದರ್ಶನ ನೀಡಿದರು. ಕುಸ್ತಿಯಲ್ಲಿ 2 ಚಿನ್ನ ಮೂಡಿತು. ಫೆನ್ಸಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು 3 ಚಿನ್ನದ ಪದಕ ಬಾಚಿದರು. ಕಬಡ್ಡಿ ಮತ್ತು ಬಾಸ್ಕೆಟ್‌ಬಾಲ್ ತಂಡಗಳು ಚಿನ್ನ ಗೆದ್ದವು. ಶೂಟಿಂಗ್ ಮಿಶ್ರ ಏರ್ ಪಿಸ್ತೂಲ್‌ನಲ್ಲಿ 1 ಚಿನ್ನ ಸೇರಿದಂತೆ ಕೂಟದಲ್ಲಿ ಶೂಟಿಂಗ್ ಒಟ್ಟಾರೆ 18 ಚಿನ್ನ ಬಂದವು. ಭಾರತ ಮಹಿಳಾ ಫುಟ್ಬಾಲ್ ತಂಡ ಸತತ 3ನೇ ಬಾರಿ ಚಿನ್ನ ಜಯಿಸಿತು.