ದಕ್ಷಿಣ ಏಷ್ಯನ್‌ ಗೇಮ್ಸ್‌: 7ನೇ ದಿನ ಭಾರ​ತ​ಕ್ಕೆ 38 ಪದ​ಕ!

By Kannadaprabha News  |  First Published Dec 9, 2019, 10:14 AM IST

ದಕ್ಷಿಣ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 7ನೇ ದಿನವೂ ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ನಂ.1 ಸ್ಥಾನದಲ್ಲೇ ಮುಂದುವರೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಕಾಠ್ಮಂಡು[ಡಿ.09]: ಈಜುಪಟುಗಳು ಹಾಗೂ ಕುಸ್ತಿಪಟುಗಳ ಮಿಂಚಿನ ಪ್ರದರ್ಶನದ ನೆರವಿನಿಂದ, ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕದ ಬೇಟೆ 7ನೇ ದಿನವಾದ ಭಾನುವಾರವು ಮುಂದುವರೆಯಿತು. ಭಾರತ 22 ಚಿನ್ನ, 10 ಬೆಳ್ಳಿ, 6 ಕಂಚಿನೊಂದಿಗೆ 38 ಪದಕ ಜಯಿ​ಸಿತು. ಇದರಲ್ಲಿ ಈಜುಪಟುಗಳು 7 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದರೆ, ಕುಸ್ತಿಪಟುಗಳು 4 ಚಿನ್ನ ಜಯಿಸಿದರು.

ದಕ್ಷಿಣ ಏಷ್ಯನ್‌ ಗೇಮ್ಸ್‌: ಭಾರತ ಪದಕಗಳ ಡಬಲ್‌ ಸೆಂಚು​ರಿ!

Tap to resize

Latest Videos

ಒಟ್ಟಾರೆ ಭಾರತ 132 ಚಿನ್ನ, 79 ಬೆಳ್ಳಿ, 41 ಕಂಚಿನೊಂದಿಗೆ 252 ಪದಕ ಗಳಿ​ಸಿದ್ದು ಅಗ್ರ​ಸ್ಥಾ​ನ​ದಲ್ಲಿ ವಿರಾ​ಜ​ಮಾ​ನ​ಗೊಂಡಿದೆ. ಆತಿಥೇಯ ನೇಪಾಳ 45 ಚಿನ್ನ, 44 ಬೆಳ್ಳಿ, 76 ಕಂಚಿನೊಂದಿಗೆ 165 ಪದಕ ಜಯಿ​ಸಿ 2ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 36 ಚಿನ್ನ, 68 ಬೆಳ್ಳಿ ಹಾಗೂ 93 ಕಂಚುಗಳೊಂದಿಗೆ ಒಟ್ಟು 197 ಪದಕ ಗೆದ್ದು 3ನೇ ಸ್ಥಾನ​ದಲ್ಲಿ ಮುಂದು​ವ​ರಿ​ದಿದೆ.

ಪುರುಷರ ಹ್ಯಾಂಡ್‌ಬಾಲ್‌ ತಂಡ ರನ್ನರ್‌ ಅಪ್‌ ಆಗಿ ಬೆಳ್ಳಿ ಗೆದ್ದರೆ, ಮಹಿಳಾ ತಂಡ ಚಿನ್ನಕ್ಕೆ ಮುತ್ತಿಟ್ಟಿತು. ಫೆನ್ಸಿಂಗ್‌ ಸ್ಪರ್ಧೆಯಲ್ಲಿ ಭಾರತ 3 ಚಿನ್ನ ಗೆದ್ದಿತು. ಪುರುಷರ 400 ಮೀ. ಫ್ರೀಸ್ಟೈಲ್‌ ಈಜು ಸ್ಪರ್ಧೆ​ಯಲ್ಲಿ ಕುಶಾಗ್ರ ರಾವತ್‌ ಚಿನ್ನ ಗೆದ್ದರೆ, ಆನಂದ್‌ ಬೆಳ್ಳಿ ಗೆದ್ದರು. 200 ಮೀ. ಬಟರ್‌ಫ್ಲೈನಲ್ಲಿ ಸುಪ್ರಿಯಾ ಮೊಂಡಲ್‌ ಚಿನ್ನ ಗೆದ್ದರು. ಪುರುಷ ಹಾಗೂ ಮಹಿಳಾ ವಿಭಾಗದ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕ್ರಮ​ವಾಗಿ ಶ್ರೀಹರಿ ನಟರಾಜ್‌ ಮತ್ತು ಮಾನಾ ಪಟೇಲ್‌ ಚಿನ್ನ ಗೆದ್ದರು. 4*200 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ, ಮಾನಾ ಚಿನ್ನಕ್ಕೆ ಮುತ್ತಿಟ್ಟರು. ಮಹಿಳೆಯರ 200 ಮೀ. ಬಟರ್‌ಫ್ಲೈನಲ್ಲಿ ಅಪೇಕ್ಷಾ ಫರ್ನಾಂಡಿಸ್‌ ಚಿನ್ನ ಗೆದ್ದರು.

ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್‌, ರವೀಂದರ್‌, ಪವನ್‌ ಕುಮಾರ್‌ ಮತ್ತು ಅನ್ಶು ಚಿನ್ನ ಜಯಿಸಿದರು. ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ 7 ಬಾಕ್ಸರ್‌ಗಳು ಫೈನಲ್‌ ಪ್ರವೇಶಿಸಿದ್ದು ಬೆಳ್ಳಿ ಖಚಿತ ಪಡಿಸಿದ್ದಾರೆ.

click me!