ದೀಪಕ್ ನಿವಾಸ್ ಹೂಡಾ ನೇತೃತ್ವದ ಭಾರತ ಕಬಡ್ಡಿ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅನಾಯಾಸವಾದ ಗೆಲುವು ದಾಖಲಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ
ಕಾಠ್ಮಂಡು[ಡಿ.05]: ದಕ್ಷಿಣ ಏಷ್ಯನ್ ಗೇಮ್ಸ್ ಕೂಟದ ಕಬಡ್ಡಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿರುವ ಭಾರತ, ನಿರೀಕ್ಷೆಯಂತೆಯೇ ಶ್ರೀಲಂಕಾ ವಿರುದ್ಧ ಶುಭಾರಂಭ ಮಾಡಿದೆ. ಶ್ರೀಲಂಕಾ ವಿರುದ್ಧ ದೀಪಕ್ ನಿವಾಸ್ ಹೂಡಾ ನೇತೃತ್ವದ ಭಾರತ ತಂಡ 49-16 ಅಂಕಗಳ ಭಾರೀ ಅಂತರದ ಗೆಲುವು ದಾಖಲಿಸಿದೆ.
ದಕ್ಷಿಣ ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
ಇಲ್ಲಿನ ಎಪಿಎಫ್ ಹಾಲೋಚೌಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿತು. ಬರೋಬ್ಬರಿ 33 ಅಂಕಗಳ ಅಂತರದ ಗೆಲುವು ದಾಖಲಿಸಿತು. ತಂಡದ ಸ್ಟಾರ್ ರೈಡರ್ ಪವನ್ ಶೆರಾವತ್ ಹಾಗೂ ನವೀನ್ ಕುಮಾರ್ ಮಿಂಚಿನ ರೈಡಿಂಗ್ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 25-9 ಅಂಕಗಳ ಮುನ್ನಡೆ ಗಳಿಸಿಕೊಂಡಿತ್ತು.
ಇನ್ನೊಂದೇ ಸಿಕ್ಸರ್, ಅಪರೂಪದ ದಾಖಲೆ ಬರೆಯಲು ರೋಹಿತ್ ರೆಡಿ
ಬಲಾಢ್ಯ ಪಾಕ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದ ಶ್ರೀಲಂಕಾ, ದ್ವಿತಿಯಾರ್ಧದಲ್ಲೂ ಭಾರತಕ್ಕೆ ಸವಾಲಾಗಲೇ ಇಲ್ಲ. ಬೆಂಚ್ ಸ್ಟ್ರೆಂಥ್ ಹೆಚ್ಚಿಸುವ ನಿಟ್ಟಿನಲ್ಲಿ ದ್ವಿತಿಯಾರ್ಧದಲ್ಲಿ ಭಾರತ ನಿತೇಶ್ ಕುಮಾರ್ ಹಾಗೂ ದರ್ಶನ್ ಕಡಿಯಾನ್’ಗೆ ಅವಕಾಶ ನೀಡಲಾಯಿತು. ದರ್ಶನ್ ಲಂಕಾ ಭದ್ರತಾಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾದರು. ಚುರುಕಿನ ಹ್ಯಾಂಡ್ ಟಚ್ ಹಾಗೂ ಬೋನಸ್ ಅಂಕ ಕಲೆಹಾಕುವ ಮೂಲಕ ಅಂತರವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು. ಇದೀಗ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.