ಕ್ರೀಡಾ ಸಾಧಕರಿಗೆ ಕೆಒಎ ಪ್ರಶಸ್ತಿ ಪ್ರದಾನ

By Kannadaprabha NewsFirst Published Dec 5, 2019, 1:54 PM IST
Highlights

ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕ್ರೀಡಾ ಸಾಧಕರಿಗೆ ಕರ್ನಾಟಕ ಒಲಿಂಪಿಕ್‌ ಸಂಸ್ಥೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿತು. ಕನ್ನಡ ಪ್ರಭ ಹಿರಿಯ ಛಾಯಗ್ರಾಹಕ ಕೆ. ರವಿ ಕ್ರೀಡಾ ಮಾಧ್ಯಮ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಬೆಂಗಳೂರು[ಡಿ]: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 20 ಮಂದಿ ಕ್ರೀಡಾ ಸಾಧಕರಿಗೆ ಕರ್ನಾಟಕ ಒಲಿಂಪಿಕ್‌ ಸಂಸ್ಥೆ ವತಿಯಿಂದ ಬುಧವಾರ ಕಂಠೀರವ ಕ್ರೀಡಾಂಗಣದ ಕೆಒಎ ಭವನದಲ್ಲಿ ನಡೆದ ಸಮಾರಂಭದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ರೀಡಾ ಮಾಧ್ಯಮ ವಿಭಾಗದಲ್ಲಿ ‘ಕನ್ನಡಪ್ರಭ’ ಹಿರಿಯ ಛಾಯಗ್ರಾಹಕ ಕೆ. ರವಿ ಪ್ರಶಸ್ತಿ ಪಡೆದರು.

ದಕ್ಷಿಣ ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಉಳಿದಂತೆ ಸೈಕ್ಲಿಂಗ್‌ ಪಟು ರಾಜು ಎ ಬಾಟಿ, ಫೆನ್ಸಿಂಗ್‌ ಪಟು ನೈದಿಲೆ, ಫುಟ್ಬಾಲ್‌ ಆಟಗಾರ ಸುನಿಲ್‌ ಕುಮಾರ್‌, ಹಾಕಿ ಪಟು ನಿಕ್ಕಿನ್‌ ತಿಮ್ಮಯ್ಯ, ಖೋಖೋ ಆಟಗಾರ ಮನು, ಕಬಡ್ಡಿ ಆಟಗಾರ ನಿತೇಶ್‌, ಟೆನಿಸ್‌ ಆಟಗಾರ ನಿಕ್ಷೇಪ್‌, ನೆಟ್‌ಬಾಲ್‌ ಆಟಗಾರ್ತಿ ನಂದಿನಿ, ರೋಯಿಂಗ್‌ ಪಟು ಜ್ಯೋತಿ, ಶೂಟರ್‌ ಶ್ರೀಜ್ಯಾ, ವೇಟ್‌ ಲಿಫ್ಟರ್‌ ಅಕ್ಷತಾ, ಕೋಚ್‌ ವಿಮಲ್‌ ಕುಮಾರ್‌, ಇಬ್ಬರು ಮಾಜಿ ಆಟಗಾರರಾದ ನಿಯೋಲ್‌ ಆ್ಯಂಟೋನಿ ಮತ್ತು ವಿನೋದ್‌ ಚಿನ್ನಪ್ಪ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ವಿಜೇ​ತ ಕ್ರೀಡಾ​ಪ​ಟುಗಳಿಗೆ .1 ಲಕ್ಷ ಚೆಕ್‌ ಹಾಗೂ ಸ್ಮರ​ಣಿಕೆ, ಕೋಚ್‌ ಹಾಗೂ ಹಿರಿಯ ಕ್ರೀಡಾ​ಪ​ಟು​ಗ​ಳಿಗೆ .25 ಸಾವಿರ ಹಾಗೂ ಸ್ಮರ​ಣಿಕೆ ನೀಡಿ ಗೌರ​ವಿ​ಸ​ಲಾ​ಯಿತು. ಕೆಲ ಕ್ರೀಡಾಪಟುಗಳು ಸಮಾರಂಭಕ್ಕೆ ಗೈರಾಗಿದ್ದರು.

ಜುಲೈ ತಿಂಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್: 15 ಕ್ರೀಡೆಗೆ ಅವಕಾಶ

ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್‌, ಪೊಲೀಸ್‌ ಮಹಾ ನಿರ್ದೇಶಕ (ಸಿಐಡಿ) ಪ್ರವೀಣ್‌ ಸೂದ್‌, ಕ್ರೀಡಾ ಇಲಾಖೆ ನಿರ್ದೇಶಕ ಕೆ. ಶ್ರೀನಿವಾಸ್‌, ಪ್ರಶಸ್ತಿ ಸಮಿತಿ ಅಧ್ಯಕ್ಷ ಮೋಹನ್‌ರಾಜ್‌, ಕೆಒಎ ಖಜಾಂಚಿ ಜಗದಾಳೆ, ಕಾರ‍್ಯದರ್ಶಿ ಉಪಸ್ಥಿತರಿದ್ದರು.

ಫೆಬ್ರವರಿಯಲ್ಲಿ ಮಿನಿ ಒಲಿಂಪಿಕ್ಸ್‌

2020ರ ಫೆಬ್ರವರಿ ಮೊದಲ ವಾರದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಮಿನಿ ಒಲಿಂಪಿಕ್ಸ್‌ ಆಯೋಜಿಸಲಾಗುವುದು ಎಂದು ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್‌ ತಿಳಿಸಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಕೂಟವನ್ನು ನಡೆಸಲಾಗುತ್ತಿದೆ. ಮಿನಿ ಒಲಂಪಿಕ್ಸ್‌ಗಾಗಿ ರಾಜ್ಯ ಸರ್ಕಾರ ಈಗಾಗಲೇ 2 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದೆ. 14 ವರ್ಷದೊಳಗಿನ ಕ್ರೀಡಾಪಟುಗಳು ಈ ಕೂಟದಲ್ಲಿ ಪಾಲ್ಗೊಳ್ಳಬಹುದು ಎಂದರು. 2019ರ ನವೆಂಬರ್‌ನಲ್ಲಿ ನಡೆಯಬೇಕಿದ್ದ ರಾಜ್ಯ ಒಲಿಂಪಿಕ್ಸ್‌ ಗೇಮ್ಸ್‌ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಜನವರಿಯಲ್ಲಿ ಶಿವಮೊಗ್ಗದಲ್ಲಿ ಕೂಟ ಆಯೋಜಿಸಲಾಗುವುದು ಎಂದು ಗೋವಿಂದರಾಜ್‌ ತಿಳಿ​ಸಿ​ದರು.
 

click me!