ಬಹುನಿರೀಕ್ಷಿತ ಯಾಚ್ ಕ್ಲಬ್ ಎಫ್ ಎಂ ಎಸ್ ಸಿ ಐ ರಾಷ್ಟ್ರೀಯ ರ‍್ಯಾಲಿ ಅಂತ್ಯಗೊಂಡಿದೆ. ಅತ್ಯಂತ ರೋಚಕ ರ‍್ಯಾಲಿಯಲ್ಲಿ ಎಲ್ಲರ ಕಣ್ಣು ಗೌರವ್ ಗಿಲ್ ಮೇಲಿತ್ತು. ಆದರೆ ಚೇನ್ ಶಿವರಾಮ್ ಮಿಂಚಿನ ವೇಗದಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ಬೆಂಗಳೂರು(ನ.24): ಎಲ್ಲರ ನಿರೀಕ್ಷೆ ಚಾಂಪಿಯನ್ ರೇಸರ್ ಗೌರವ್ ಗಿಲ್ ಮತ್ತೊಂದು ಚಾಂಪಿಯನ್ ಪಟ್ಟ ಮುಡಿಗೇರಿಸುತ್ತಾರೆ ಅನ್ನೋದಾಗಿತ್ತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಪ್ರಮುಖ ಸ್ಪರ್ಧಿಗಳು ಹಿಂದೆ ಸರಿಯುವುದರೊಂದಿಗೆ ಇಲ್ಲಿ ಮುಕ್ತಾಯಗೊಂಡ ಚಾಂಪಿಯನ್ಸ್ ಯಾಚ್ ಕ್ಲಬ್ ಎಫ್ ಎಂ ಎಸ್ ಸಿ ಐ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ MRFನ ಚೇತನ್ ಶಿವರಾಮ್ ಹಾಗೂ ಡಾ. ಬಿಕ್ಕು ಬಾಬು ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.
undefined
ಇದನ್ನೂ ಓದಿ: ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!
ಅತ್ಯಂತ ಸವಾಲಿನಿಂದ ಕೂಡಿದ ಹಂತದಲ್ಲಿ ರೆಡ್ ತಂಡದ ಈ ಇಬ್ಬರು ಸವಾರರಿಗೆ ಇತರರು ದಿಟ್ಟ ಹೋರಾಟ ನೀಡುವಲ್ಲಿ ವಿಫಲರಾದರು, ಪರಿಣಾಮ ಚೇತನ್ ಹಾಗೂ ಬಿಕ್ಕು ಮೊದಲ ಹಾಗೂ 2ನೇ ಸ್ಥಾನ ತಮ್ಮದಾಗಿಸಿಕೊಂಡರು. ನಾಲ್ಕು ಹಾಗೂ ಐದನೇ ಸ್ಥಾನದೊಂದಿಗೆ ಹೋರಾಟ ಆರಂಭಿಸಿದ ಚೇತನ್ ಹಾಗೂ ಡಾ. ಬಿಕ್ಕು, ಕೊನೆಯ ತನಕವೂ ಸ್ಥಿರತೆಯನ್ನು ಕಾಯ್ದುಕೊಂಡು K-1000 ಯಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಸ್ಥಾನ ಗಳಿಸಿದರು.
ಇದನ್ನೂ ಓದಿ: F3ರೇಸ್‌ನಲ್ಲಿ ಭೀಕರ ಅಪಘಾತ; ಚಿಕಿತ್ಸೆಗೆ ನಡೆದುಕೊಂಡು ತೆರಳಿದ ಚಾಲಕ!
ಹಾಲಿ ಚಾಂಪಿಯನ್ ಹಾಗೂ ಅಗ್ರ ಸ್ಥಾನದಲ್ಲಿರುವ ಗೌರವ್ ಗಿಲ್ ದಿನದ ಆರಂಭದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರು. ಎರಡನೇ ದಿನದಲ್ಲಿ ಅವರ ಕಾರು ಆರಂಭಗೊಳ್ಳಲೇ ಇಲ್ಲ. ಜೆಕೆ ಟೈಯರ್ ಮೊಟೊಸ್ಪೋರ್ಟ್ ತಂಡ ನಿರಾಸೆಯೊಂದಿಗೆ ಎಂಆರ್ ಎಫ್ ತಂಡದ ಹಾದಿಯನ್ನು ಸುಗಮಗಮಗೊಳಿಸಿತು.
ಎರಡನೇ ಸುತ್ತನ್ನು ಗೆದ್ದಿದ್ದ ಅಕ್ಷರಾ ತಂಡದ ಚೇತನ್ ಶಿವರಾಮ್ ಇದೇ ರೀತಿಯಲ್ಲಿ ಯಶಸ್ಸು ಕಂಡರು. ಈ ಜಯದೊಂದಿಗೆ ಅವರು ಐ ಎನ್ ಆರ್ ಸಿ ಯ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಸಹ ಚಾಲಕ ದಿಲೀಪ್ ಚರಣ್ ಅವರೊಂದಿಗೆ ಐಎನ್ ಆರ್ ಸಿ 3 ರಲ್ಲಿ ಒಟ್ಟು 1:47:37:300 ಅವಧಿಯಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ:ಬೆಂಗ್ಳೂರಿನ ಬೈಕ್ ರೇಸರ್‌ಗೆ ವಿಶ್ವ ಕಿರೀಟ!
ಮಿಲೇನ್ ಜಾರ್ಜ್ ಅವರೊಂದಿಗೆ ಸ್ಪರ್ಧಿಸಿದ್ದ ಡಾ. ಬಿಕ್ಕು ಬಾಬು ಅವರಿಗಿಂತ ಕೇವಲ 12 ಸೆಕೆಂಡುಗಳ ಮುನ್ನಡೆಯೊಂದಿಗೆ, ಸಮಗ್ರ ಟೀಮ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ದಿನದ ಮೊದಲ ಹಂತ SS5ನಲ್ಲಿ ಡಾಕ್ಟರ್ ಬಿಕ್ಕು ಚೇತನ್ ಅವರಿಗಿಂತ ಮೇಲುಗೈ ಸಾಧಿಸಿ ಅಗ್ರ ಸ್ಥಾನಿಯಾದರು. SS8 ಹಂತದಲ್ಲೂ ಡಾ. ಬಿಕ್ಕು ಅವರು ಚೇತನ್ ವಿರುದ್ಧ ಮೇಲುಗೈ ಸಾಧಿಸಿದರೂ ಐ ಎನ್ ಆರ್ ಸಿ 2 ಟ್ರೋಫಿ ಗೆಲ್ಲಲಾಗಲಿಲ್ಲ.
''ಶ್ರೇಷ್ಠ ಸ್ಪರ್ಧಿಗಳು ಅಂತಿಮ ದಿನದಲ್ಲಿ ಮಿಂಚಲಿಲ್ಲ, ಆದರೂ ನಾವು ಉತ್ತಮ ರೀತಿಯಲ್ಲಿ ಸ್ಪರ್ಧೆ ನೀಡುವ ಗುರಿ ಹೊಂದಿದ್ದೆವು. ಐಎನ್ ಆರ್ ಸಿ 2 ಮತ್ತು 3 ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ, ಚಾಂಪಿಯನ್ ಯಾರಾಗುತ್ತಾರೆಂದು ಗೊತ್ತಿದ್ದೂ ಇಷ್ಟು ಪ್ರಮಾಣದಲ್ಲಿ ಸ್ಪರ್ಧೆ ಕಂಡಿರುವುದು ಗಮನಾರ್ಹ,'' ಎಂದು ಐ ಎನ್ ಆರ್ಸಿ ಸಹ ಪ್ರವರ್ತಕಿ ಹೇಮಾ ಮಾಲಿನಿ ನಿದಾಮನುರಿ ಹೇಳಿದ್ದಾರೆ.
ಗೌರವ್ ಗಿಲ್ ನಿರ್ಗಮನದ ನಂತರ ಜೆ ಕೆ ತಂಡದ ಫೇವರಿಟ್ SS5 ಗೆದ್ದಿರುವ ಡೀನ್ ಮಸ್ಕರೇನ್ಹಸ್ ಯಶಸ್ಸು ಕಾಣುತ್ತಾರೆಂದು ಎಲ್ಲರ ನಿರೀಕ್ಷಿಯೆಯಾಗಿತ್ತು. ಆದರೆ ಅವರು ಕೂಡ ನಂತರದ ಹಂತದಲ್ಲಿ ವೈಫಲ್ಯ ಕಂಡರು. ಇದರಿಂದ ಫಾಬಿದ್ ಅಹ್ಮರ್ ಗೆ ಅವಕಾಶ ಉತ್ತಮವಾಗಿತ್ತು. ಆದರೆ ಎಂಆರ್ ಎಫ್ ಚಾಲಕ ವೈಫಲ್ಯಗೊಂಡು ಸ್ಪರ್ಧೆಯಿಂದ ಹೊರನಡೆದರು. ಎಸ್ಯುವಿ ಚಾಲೆಂಜ್ ಟೀಮ್ ಚಾಂಪಿಯನ್ಷಿಪ್ ನಲ್ಲಿ ಗಗನ್ ಕರಂಭಯ್ಯ 2019ನೇ ಸಾಲಿನ ಪ್ರಶಸ್ತಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.