
ಗ್ರೇಟರ್ ನೋಯ್ಡಾ(ಅ.11): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಗುರುವಾರ ನಡೆದ ಏಕೈಕ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ, ಹರ್ಯಾಣ ಸ್ಟೀಲರ್ಸ್ ವಿರುದ್ಧ 39-33 ಅಂಕಗಳಲ್ಲಿ ಗೆಲುವು ಸಾಧಿಸಿತು. ಟೂರ್ನಿಯಲ್ಲಿ ಒಟ್ಟಾರೆ 12ನೇ ಗೆಲುವು ಪಡೆದ ಮುಂಬಾ 69 ಅಂಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.
ಇದನ್ನೂ ಓದಿ: ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್
ನಾಯಕ ಫಜೆಲ್ ಅತ್ರಚಾಲಿ 8 ಅಂಕ ಹಾಗೂ ಸಂದೀಪ್ ನರ್ವಾಲ್ 5 ಅಂಕಗಳನ್ನು ಗಳಿಸಿದ್ದು, ಮುಂಬಾ ಕಾರ್ನರ್ ಡಿಫೆನ್ಸ್ ಯಶಸ್ಸು ಸಾಧಿಸಿತ್ತು. ಮುಂಬಾ ತಂಡದಲ್ಲಿ ಅವಕಾಶ ಪಡೆದ ಅಜಿಂಕ್ಯಾ ಕಾಪ್ರೆ, ಡೊಂಗ್ ಲೀ ತಲಾ 9 ರೈಡ್ ಅಂಕಗಳನ್ನು ಸಂಪಾದಿಸಿದರು. ಹರ್ಯಾಣ ಪರ ವಿಕಾಸ್ ಖಂಡೋಲ (6 ಅಂಕ) ಮಿಂಚದ ಕಾರಣ ವಿನಯ್ (11 ಅಂಕ) ಶ್ರಮ ವ್ಯರ್ಥವಾಯಿತು.
ಇದನ್ನೂ ಓದಿ: ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!
ಹರಾರಯಣ ಪರ ರವಿ 4 ಟ್ಯಾಕಲ್ ಅಂಕ ಗಳಿಸಿದರು. ಮೊದಲಾರ್ಧ ಉಭಯ ತಂಡಗಳೂ 15-15ರಲ್ಲಿ ಸಮಬಲ ಸಾಧಿಸಿದವು. ಸ್ಟೀಲರ್ಸ್ 3ನೇ ಸ್ಥಾನದಲ್ಲಿದೆ. ಶುಕ್ರವಾರ ಈ ಆವೃತ್ತಿಯ ಕೊನೆಯ 2 ಲೀಗ್ ಪಂದ್ಯಗಳು ನಡೆಯಲಿವೆ.
ಅಂಕಪಟ್ಟಿಯಲ್ಲಿ ಬೆಂಗಾಲ್ ವಾರಿಯರ್ಸ್ ಮೊದಲ ಸ್ಥಾನದಲ್ಲಿದ್ದರೆ, ದಬಾಂಗ್ ದಿಲ್ಲಿ, ಹರ್ಯಾಣ ಸ್ಟೀಲರ್ಸ್, ಯು ಮುಂಬಾ, ಯುಪಿ ಯೋಧ ಹಾಗೂ ಬೆಂಗಳೂರು ಬುಲ್ಸ್ ನಂತರದ ಸ್ಥಾನ ಪಡೆದುಕೊಂಡಿದೆ. ಆರಂಭಿಕ 6 ಸ್ಥಾನದಲ್ಲಿರುವ ಈ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.